ಕಾಸರಗೋಡು: ಎಂಡೋಸಲ್ಫಾನ್ ಸಂತ್ರಸ್ತರ ಪಟ್ಟಿಯಲ್ಲಿ ಒಳಗೊಂಡ 8 ಮಂದಿಗೆ ತಲಾ 5 ಲಕ್ಷ ರೂಪಾಯಿ ಪರಿಹಾರ ಹಣ ಮಂಜೂರುಗೊಳಿಸಲಾಯಿತು. ಕೆ.ಜಿ.ಬೈಜು, ಅಶೋಕ್ ಕುಮಾರ್, ಮಧುಸೂದನನ್, ಪಿ.ಜೆ.ಥಾಮಸ್, ಶಾಂತಾ, ಸಾಂತಾ ಕೃಷ್ಣನ್, ಸಾಜಿ ಮತ್ತು ಎಂ.ವಿ.ರವೀಂದ್ರನ್ ಎಂಬವರಿಗೆ ಹಣ ಮಂಜೂರಾಗಿ ಲಭಿಸಿದೆ.
ಇದರೊಂದಿಗೆ ಕೆ.ಜಿ.ಬೈಜು ಅವರಿಗೆ ಮಾಸಿಕ 2,200 ರೂ. ಮಧುಸೂದನ್ ಅವರಿಗೆ ಮಾಸಿಕ 1,200 ರೂಪಾಯಿ ಪಿಂಚಣಿ, 4,280 ರೂಪಾಯಿ ಉಚಿತ ಚಿಕಿತ್ಸೆ ಮತ್ತು 1,90,700 ರೂಪಾಯಿ ಬ್ಯಾಂಕ್ ಸಾಲ ಮನ್ನಾ ಮಾಡಲಾಗಿದೆ. ಸಾಜಿ ಅವರಿಗೆ ಮಾಸಿಕ 1200 ರೂಪಾಯಿ ಪಿಂಚಣಿ ನೀಡಲಾಗುತ್ತಿದೆ. ಶಾಂತಾ ಅವರಿಗೆ ಮಾಸಿಕ 1,200 ರೂಪಾಯಿ ಪಿಂಚಣಿ ಜತೆಗೆ 14,000 ರೂಪಾಯಿ ಬ್ಯಾಂಕ್ ಸಾಲ ಮನ್ನಾ ಮಾಡಲಾಗಿದೆ. ಶಾಂತಾ ಕೃಷ್ಣನ್ ಮಾಸಿಕ 1,200 ರೂಪಾಯಿ ಪಿಂಚಣಿ ಮತ್ತು 8,000 ರೂಪಾಯಿ ಬ್ಯಾಂಕ್ ಸಾಲವನ್ನು ಮನ್ನಾ ಮಾಡಿದ್ದಾರೆ. ರವೀಂದ್ರನ್ ಅವರಿಗೆ ಮಾಸಿಕ 1,200 ರೂಪಾಯಿ ಪಿಂಚಣಿ, 57,819 ರೂಪಾಯಿಗಳ ಉಚಿತ ಚಿಕಿತ್ಸೆ ಮತ್ತು 61444 ರೂಪಾಯಿಗಳ ಬ್ಯಾಂಕ್ ಸಾಲವನ್ನು ಮನ್ನಾ ಮಾಡಲಾಗಿದೆ. ಪಿ.ಜೆ ಥಾಮಸ್ ಅವರಿಗೆ ಮಾಸಿಕ2200 ರೂಪಾಯಿ ಪಿಂಚಣಿ ಹಾಗೂ 39389 ರೂಪಾಯಿ ಬ್ಯಾಂಕ್ ಸಾಲ ಮನ್ನಾ ಮಾಡಲಾಗಿದೆ. ಅಶೋಕ್ ಕುಮಾರ್ ಅವರಿಗೆ 1200 ರೂಪಾಯಿ ಪಿಂಚಣಿ, 15,373 ರೂಪಾಯಿ ಉಚಿತ ವೈದ್ಯಕೀಯ ಚಿಕಿತ್ಸೆ ಮತ್ತು 1,07,500 ರೂಪಾಯಿ ಬ್ಯಾಂಕ್ ಸಾಲ ಮನ್ನಾ ಮಾಡಲಾಗಿದೆ ಎಂದು ಎಂಡೋಸಲ್ಫಾನ್ ವಿಶೇಷ ಕೋಶಗಳ ಪ್ರಭಾರ ಜಿಲ್ಲಾಧಿಕಾರಿ ಸಿರೋಷ್ ಪಿ ಜಾನ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.




