ಕಾಸರಗೋಡು: ಕೇರಳ ಫೆಡರೇಶನ್ ಆಫ್ ಬ್ಲೈಂಡ್(ಕೆಎಫ್‍ಬಿ)ಕಾಸರಗೋಡು ಜಿಲ್ಲಾ ಸಮಿತಿ ವತಿಯಿಂದ ಅರಶಿನ ಕೃಷಿ ಯೋಜನೆ ಆರಂಭಿಸಲಾಯಿತು. 'ಇಸಾಫ್'ಎಂಬ ಸಂಸ್ಥೆಯ ಹಣಕಾಸಿನ ನೆರವಿನೊಂದಿಗೆ ಯೋಜನೆ ಆರಂಭಿಸಲಾಗಿದೆ. ಅರಶಿನ ಬೆಳೆಸುವ ಯೋಜನೆಯ ಔಪಚಾರಿಕ ಉದ್ಘಾಟನೆಯನ್ನು ಮಧೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ಕೆ. ಗೋಪಾಲಕೃಷ್ಣ ನಿರ್ವಹಿಸಿದರು. ಕೆಎಫ್‍ಬಿ ಜಿಲ್ಲಾ ಸಮಿತಿ ಅಧ್ಯಕ್ಷ ವಿಜೇಶ್ ಅಧ್ಯಕ್ಷತೆ ವಹಿಸಿದ್ದರು. ಕೆಎಫ್ಬಿ ಪ್ರತಿನಿಧಿ ಕೆ ಸಬಿನ್, ಯೋಜನೆಯ ರೂಪುರೇಷೆ ಮಂಡಿಸಿದರು. ಮಧೂರು ಗ್ರಾಮ ಪಂಚಾಯಿತಿ ಅಭಿವೃದ್ಧಿ ಸ್ಥಾಯಿ ಸಮಿತಿ ಅಧ್ಯಕ್ಷ ಕೆ ರಾಧಾಕೃಷ್ಣ ಬಿತ್ತನೆ ನೆರವೇರಿಸಿದರು. ವಾರ್ಡ್ ಸದಸ್ಯೆ ಸ್ಮಿತಾ ಸುಧಾಕರನ್, ಕೆಎಫ್‍ಬಿ ಆಡಿಯೋ ಲೈಬ್ರರಿ ಕಾರ್ಯದರ್ಶಿ ಸತೀಶನ್ ಬೇವಿಂಜೆ ಉಪಸ್ಥಿತರಿದ್ದರು. ಮಣಿಕುಟ್ಟನ್ ಅವರಿಗೆ ಸ್ವಾಗತಿಸಿದರು. ಕೆಎಫ್‍ಬಿ ಉಪಾಧ್ಯಕ್ಷ ಕೃಷ್ಣಕುಮಾರ್ ವಂದಿಸಿದರು.





