ತ್ರಿಶೂರ್: ನಿಜಾಮುದ್ದೀನ್ ಮಂಗಳಾ ಎಕ್ಸ್‍ಪ್ರೆಸ್‍ನ ಬೋಗಿ ಬೇರ್ಪಟ್ಟ ಘಟನೆ ನಡೆದಿದೆ. ತ್ರಿಶೂರ್ ನಿಂದ ಎರ್ನಾಕುಳಂಗೆ ತೆರಳುತ್ತಿದ್ದಾಗ ಬುಧವಾರ ಅಪರಾಹ್ನ 3 ಗಂಟೆ ಸುಮಾರಿಗೆ ಈ ಘಟನೆ ನಡೆದಿದೆ. 15 ನಿಮಿಷದಲ್ಲಿ ಬೋಗಿ ಜೋಡಿಸಿ ಪ್ರಯಾಣ ಮುಂದುವರಿಯಿತು.
ತ್ರಿಶೂರ್ ನಿಲ್ದಾಣದಿಂದ ಹೊರಟ ಸ್ವಲ್ಪ ಹೊತ್ತಲ್ಲಿ ಪೂಂಕುನ್ನತ್ ಎಂಬಲ್ಲಿ ಎಂಜಿನ್ ಮತ್ತು ಬೋಗಿ ಬೇರ್ಪಟ್ಟವು. ಬೋಗಿ ಬೇರ್ಪಟ್ಟ ನಂತರ ಎಂಜಿನ್ ಸುಮಾರು 30 ಮೀಟರ್ ಮುಂದಕ್ಕೆ ಚಲಿಸಿತು. ಅಪಘಾತದ ವೇಳೆ ರೈಲು ನಿಧಾನವಾಗಿ ಚಲಿಸುತ್ತಿತ್ತು. ಹಾಗಾಗಿ ದೊಡ್ಡ ಅನಾಹುತ ತಪ್ಪಿದೆ.




.jpg)
