ತಿರುವನಂತಪುರ: ಕೆಎಸ್‍ಆರ್‍ಟಿಸಿ ನೌಕರರಿಗೆ ಇನ್ನೆರಡು ದಿನಗಳಲ್ಲಿ ವೇತನ ಸಿಗಬಹುದು ಎಂಬ ಮಾಹಿತಿ ಲಭ್ಯವಾಗಿದೆ. ವರದಿಗಳ ಪ್ರಕಾರ, ಹಣಕಾಸು ಸಚಿವ ಕೆಎನ್ ಬಾಲಗೋಪಾಲ್ ಮತ್ತು ಸಾರಿಗೆ ಸಚಿವ ಆಂಟನಿ ರಾಜು ಅವರು ಈ ವಿಷಯದ ಬಗ್ಗೆ ಪರಸ್ಪರ ಸಮಾಲೋಚನೆ ನಡೆಸಿರುವರು ಎಂದು ತಿಳಿದುಬಂದಿದೆ.
ವೇತನವನ್ನು ಆಡಳಿತ ಮಂಡಳಿಯೇ ಕಂಡುಕೊಳ್ಳಬೇಕು ಎಂದು ಸಾರಿಗೆ ಸಚಿವರು ಅಭಿಪ್ರಾಯಪಟ್ಟಿದ್ದರು. ಆದರೆ ಈ ಹೇಳಿಕೆ ಇದೀಗ ಬದಲಾಗಿದ್ದು, ಕೆಎಸ್‍ಆರ್‍ಟಿಸಿ ಎಷ್ಟು ಹಣ ಸಂಗ್ರಹಿಸಬಹುದು, ಇನ್ನು ಎಷ್ಟು ಹಣ ನೀಡಬೇಕು, ಮುಂದಿನ ತಿಂಗಳ ಸಂಬಳಕ್ಕೆ ಏನು ಮಾಡಬೇಕು ಎಂಬ ಮಾಹಿತಿಯನ್ನು ಹಣಕಾಸು ಇಲಾಖೆ ಸಂಗ್ರಹಿಸಿದೆ ಎಂದು ವರದಿಯಾಗಿದೆ. ಕೆಎಸ್‍ಆರ್‍ಟಿಸಿಯ ವೇತನ ಬಿಕ್ಕಟ್ಟಿನ ಬಗ್ಗೆ ಇಂದಿನ ಸಚಿವ ಸಂಪುಟ ಸಭೆಯಲ್ಲೂ ಚರ್ಚೆಯಾಗಿಲ್ಲ.
ಇದೇ ವೇಳೆ ವೇತನ ಬಿಕ್ಕಟ್ಟಿನಲ್ಲಿರುವ ಸಂದರ್ಭದಲ್ಲಿ ಸಿಎನ್‍ಜಿ ಬಸ್‍ಗಳ ಖರೀದಿಗೆ 455 ಕೋಟಿ ರೂ.ಗಳನ್ನು ಮೀಸಲಿಟ್ಟಿರುವ ಸರ್ಕಾರದ ನಿರ್ಧಾರ ಸಾಕಷ್ಟು ಟೀಕೆಗೆ ಗುರಿಯಾಗಿದೆ. 700 ಬಸ್ ಖರೀದಿಸಲು ಮೊತ್ತ ಮಂಜೂರಾಗಿದೆ. ನೌಕರರಿಗೆ ಇನ್ನೂ ಏಪ್ರಿಲ್ ತಿಂಗಳ ವೇತನ ಪಾವತಿಯಾಗಿಲ್ಲ. ನೀಡಬೇಕೆ ಎಂಬ ನಿರ್ಧಾರ ಇನ್ನಷ್ಟೇ ಆಗಬೇಕಿದೆ. ಸಿಎನ್ ಜಿ ಬಸ್ ಖರೀದಿಗೆ ಸರ್ಕಾರ 455 ಕೋಟಿ ರೂ.ಗಳನ್ನು ನೀಡುತ್ತಿದ್ದು, ಕೆಎಸ್ ಆರ್ ಟಿಸಿ ಅರ್ಧ ಸಂಬಳವನ್ನಾದರೂ ಕೊಡಲು ಸಾಧ್ಯವೇ ಎಂದು ಚರ್ಚೆ ನಡೆಸುತ್ತಿದೆ.





