ಬದಿಯಡ್ಕ: ಕೊಲ್ಲಂಗಾನ ಅನಂತಶ್ರೀಯ ಪಂಚಮ ವಾರ್ಷಿಕೋತ್ಸವ ನಾಳೆ ದಿನಪೂರ್ತಿ ನಡೆಯಲಿದೆ. ಕರ್ನಾಟಕ ಜಾನಪದ ಪರಿಷತ್ತು ಕೇರಳ ಗಡಿನಾಡ ಘಟಕ ಕಾಸರಗೋಡು, ಗಡಿನಾಡ ಸಾಹಿತ್ಯ-ಸಾಂಸ್ಕøತಿಕ ಅಕಾಡೆಮಿ ಕಾಸರಗೋಡು, ಅನಂತಶ್ರೀ ಟ್ರಸ್ಟ್ ಕಾಸರಗೋಡು ಸಹಯೋಗದಲ್ಲಿ ವಿವಿಧ ಸಾಹಿತ್ಯ ಸಾಂಸ್ಕøತಿಕ ಕಾರ್ಯಕ್ರಮ ಆಯೋಜಿಸಲಾಗಿದೆ.
ಕಾರ್ಯಕ್ರಮದ ಅಂಗವಾಗಿ ಬೆಳಿಗ್ಗೆ 9 ಕ್ಕೆ ಗಣಪತಿ ಹವನ, ದುರ್ಗಾ ಹೋಮ ನಡೆಯಲಿದೆ. 9.30 ರಿಂದ ಸಮನ್ವಿತಾ ಗಣೇಶ್ ಅಣಂಗೂರು ಅವರಿಂದ ಸಂಗೀತ ಸುಧೆ ಪ್ರಸ್ತುತಿಗೊಳ್ಳಲಲಿದೆ. 10 ರಿಂದ ಉದ್ಘಾಟನಾ ಸಮಾರಂಭ ನಡೆಯಲಿದ್ದು, ಬ್ರಹ್ಮಶ್ರೀ ಪದ್ಮನಾಭ ಬರ್ಲಾಯ ಬೊಳ|ಳಾರು ದೀಪ ಬೆಳಗಿಸಿ ಚಾಲನೆ ನೀಡುವರು. ಶಾಸಕ ಎನ್ ಎ ನೆಲ್ಲಿಕುನ್ನು ಉದ್ಘಾಟಿಸುವರು. ಸಾಯಿರಾಂ ಕೃಷ್ಣ ಭಟ್ ಅಧ್ಯಕ್ಷತೆ ವಹಿಸುವರು. ಬದಿಯಡ್ಕ ಗ್ರಾ.ಪಂ. ಅ|ಧ್ಯಕ್ಷೆ ಶಾ|ಂತಾ ಬಿ, ಗ್ರಾಮಾಭಿವೃದ್ದಿ ಯೋಜನೆಯ ಜಿಲ್ಲಾ ಯೋಜನಾಧಿಕಾರಿ ಮುಖೇಶ್, ಪಾಡಿ ಅರಮನೆಯ ಜಯಸಿಂಹ ವರ್ಮರಾಜ, ಧಾರ್ಮಿಕ ಮುಂದಾಳು ಕುಂಟಾರು ರವೀಶ ತಂತ್ರಿ, ನೀರ್ಚಾಲು ಶಾಲಾ ಪ್ರಬಂಧಕ ಜಯದೇವ ಖಂಡಿಗೆ, ಧಾರ್ಮಿಕ ಮುಂದಾಳು ಗೋಪಾಲ ಶೆಟ್ಟಿ ಅರಿಬೈಲು, ಕ್ಯಾಂಪ್ಕೋ ನಿರ್ದೇಶಕ ಡಾ.ಜಯಪ್ರಕಾಶನಾರಾಯಣ ತೊಟ್ಟೆತ್ತೋಡಿ, ಕೆ.ಎನ್.ವೆಂಕಟರಮಣ ಹೊಳ್ಳ ಕಾಸರಗೋಡು ಶುಭಾಶಂಸನೆಗೈಯ್ಯುವರು. ಪ್ರಮುಖರಾದ ತಂತ್ರಿ ಗಣಾಧಿರಾಜ ಉಪಾಧ್ಯಾಯ, ಎ.ಆರ್.ಸುಬ್ಬಯ್ಯಕಟ್ಟೆ, ಚನಿಯಪ್ಪ ನಾೈಕ್, ಸುರೇಶ್ ಶಿತ್ತಿಲ್ಲಾಯ, ವಾಮನ ರಾವ್ ಬೇಕಲ, ಶಿವರಾಮ ಕಾಸರಗೋಡು ಉಪಸ್ಥಿತರಿರುವರು. ಈ ಸಂದರ್ಭ ಕ್ಯಾಪ್ಟನ್ ಕೆ.ಎಂ.ಕೆ.ನಂಬ್ಯಾರ್, ಪ್ರಭಾಕರ ಕಲ್ಲೂರಾಯ ಬನದಗದ್ದೆ, ರವಿ ನಾಯ್ಕಾಪು, ಪರಮೇಶ್ವರ ನಾಯ್ಕ ಅರ್ತಲೆ ಅವರನ್ನು ಸನ್ಮಾನಿಸಿ ಗೌರವಿಸಲಾಗುವುದು. ಸಂಯೋಜಕ ಪ್ರೊ.ಎ.ಶ್ರೀನಾಥ್ ಪ್ರಾಸ್ತಾವಿಕವಾಗಿ ಮಾತನಾಡುವರು.
ಮಧ್ಯಾಹ್ನ 12.30 ಕ್ಕೆ ವಸಂತ ಬಾರಡ್ಕ ಮತ್ತು ತಂಡದವರಿಂದ ಗಾನಸುಧೆ ಸುಗಮ ಸಂಗೀತ, ಜಾನಪದ ಗಾಯನ ನಡೆಯಲಿದೆ. ಅಪರಾಹ್ನ 2 ರಿಂದ ಬಹುಭಾಷಾ ಕವಿಗೋಷ್ಠಿ ನಡೆಯಲಿದೆ. ಸಾಹಿತಿ ಬಾಲ ಮಧುರಕಾನನ ಅ|ಧ್ಯಕ್ಷತೆ ವಹಿಸುವರು. ಕೆ.ನರಸಿಂಹ ಭಟ್ ಏತಡ್ಕ, ದಿವ್ಯಗಂಗಾ ಪಿ, ವಿಜಯಲಕ್ಷ್ಮೀ ಶಾನುಭೋಗ್, ನ್ಯಾಯವಾದಿ ಥೋಮಸ್ ಡಿಸೋಜ, ವನಜಾಕ್ಷಿ ಚೆಂಬ್ರಕಾನ, ಗಣೇಶ್ ಪೈ ಬದಿಯಡ್ಕ, ಪ್ರಭಾವತಿ ಕೆದಿಲಾಯ, ವೆಂಕಟ್ ಭಟ್ ಎಡನೀರು, ಪ್ರೇಮಚಂದ್ರನ್ ಚೋಂಬಾಲ, ರಾಘವನ್ ಬೆಳ್ಳಿಪ್ಪಾಡಿ, ವಿಜಯರಾಜ ಪುಣಿಚಿತ್ತಾಯ, ಡಾ.ಬಾಲಕೃಷ್ಣ ಹೊಸಂಗಡಿ, ಎ.ಪ್ರಸನ್ನಕುಮಾರಿ ಮರ್ದಂಬೈಲು, ದಯಾನಂದ ರೈ ಕಳ್ವಾಜೆ, ರಾಜಶ್ರೀ ಟಿ.ರೈ, ರೇಖಾ ಶ್ರೀನಿವಾಸ ಮುನಿಯೂರು, ರವೀಂದ್ರನ್ ಪಾಡಿ, ಸುಂದರ ಬಾರಡ್ಕ, ಸ್ಟೇನಿ ಲೋಬೋ ಕಲ್ಲಕಟ್ಟ, ಕೇಶವ ಪ್ರಸಾದ ಕುಳಮರ್ವ, ಸಂಧ್ಯಾಗೀತಾ ಬಾಯಾರು, ಜ್ಯೋಸ್ಸ್ನಾ ಎಂ.ಕಡಂದೇಲು, ಸ್ನೇಹಲತಾ ದಿವಾಕರ, ಚಂದ್ರಕಲಾ ಗೋಪಾಲ, ನಾರಾಯಣ ನಾಯ್ಕ ಕುದ್ಕುಳಿ ಭಾಗವಹಿಸುವರು. ಸಂಜೆ 5 ರಿಂದ ಶ್ರೀಶಾಸ್ತಾ ಮಹಿಳಾ ಭಜನಾ ಸಂಘ ಮಾನ್ಯ ತಂಡದವರಿಂದ ಭಜನಾ ಸಂಕೀರ್ತನೆ ನಡೆಯಲಿದೆ. 5.30 ರಿಂದ ಸಾಂಸ್ಕøತಿಕ ಕಾರ್ಯಕ್ರಮಗಳು, ರಾತ್ರಿ 8 ರಿಂದ ಶ್ರೀಸತ್ಯನಾರಾಯಣ ಪೂಜೆ, ಪ್ರಸಾದ ವಿತರಣೆಯೊಂದಿಗೆ ಸಂಪನ್ನಗೊಳ್ಳಲಿದೆ.





