HEALTH TIPS

ವಿಶ್ವ ಏಡ್ಸ್ ಲಸಿಕೆ ದಿನ: ಏಡ್ಸ್‌ ತಡೆಗಟ್ಟಲು ನೀವು ತಿಳಿದಿರಲೇಬೇಕಾದ ಸಂಗತಿಗಳಿವು

 ಮೇ 18 ವಿಶ್ವ ಏಡ್ಸ್‌ ಲಸಿಕೆ ದಿನ. ಮಾರಕ ರೋಗಗಳಲ್ಲಿ ಒಂದಾಗಿರುವ ಏಡ್ಸ್‌ ಈ ವಿಶ್ವದಲ್ಲಿ ಗುಣಪಡಿಸಲು ಸಾಧ್ಯವಾಗದೇ ಇರುವ ಕಾಯಿಲೆಗಳಲ್ಲಿ ಒಂದಾಗಿದೆ. ಹಾಗಾದರೆ ವಿಶ್ವ ಲಸಿಕೆ ದಿನವನ್ನು ಏಕೆ ಆಚರಿಸಲಾಗುತ್ತಿದೆ, ಈ ದಿನ ಮಹತ್ವವೇನು ಎಂದು ನೋಡೋಣ ಬನ್ನಿ:

ಏಡ್ಸ್‌ ರೋಗಕ್ಕೆ ಲಸಿಕೆಯ ಅವಶ್ಯಕತೆ ಬಗ್ಗೆ ಜಾಗೃತಿ ಮೂಡಿಸುವ ದಿನ

ಏಡ್ಸ್‌ ರೋಗಕ್ಕೆ ಮದ್ದಿಲ್ಲ. ಏಡ್ಸ್‌ ವೈರಸ್‌ ತಗುಲಿದರೆ ಆ ವೈರಸ್‌ನಿಂದ ಉಂಟಾಗುವ ಇತರ ಆರೋಗ್ಯ ಸಮಸ್ಯೆಗೆ ಔಷಧಿ ತೆಗೆದುಕೊಳ್ಳುತ್ತಾ, ಜೀವನಶೈಲಿಯಲ್ಲಿ ಬದಲಾವಣೆ ತರುವ ತರುವ ಮೂಲಕ ತಮ್ಮ ಆಯುಸ್ಸು ಸ್ವಲ್ಪ ಮುಂದೂಡಬಹುದೇ ಹೊರತು ಇದರಿಂದ ಸಂಪೂರ್ಣ ಮುಕ್ತಿ ಎಂಬುವುದಿಲ್ಲ.

ಇದುವರೆಗೆ ಏಡ್ಸ್‌ಗೆ ಒಂದು ಲಸಿಕೆ ಬಂದಿಲ್ಲ. ಈ ಗುರಿಯನ್ನು ತಲುಪುವ ಕುರಿತು ಜಾಗೃತಿ ಮೂಡಿಸುವ ದಿನವನ್ನಾಗಿ ಮೇ 18ನ್ನು ಆಚರಿಸಲಾಗುವುದು.

ಏಡ್ಸ್‌ ದಿನದ ಈ ಬಗ್ಗೆ ಕೂಡ ಜಾಗೃತಿ ಮೂಡಿಸಲಾಗುವುದು

* ಏಡ್ಸ್ ಕಾಯಿಲೆ ತಡೆಗಟ್ಟುವ ನಿಟ್ಟಿನಲ್ಲಿ ಏನೆಲ್ಲಾ ಮಾಡಬಹುದು, ಜನರಲ್ಲಿ ಅರಿವು ಮೂಡಿಸುವುದು ಹೇಗೆ ಎಂಬುವುದರ ಬಗ್ಗೆ ಅನೇಕ ಕಾರ್ಯಕ್ರಮಗಳನ್ನು ಸರ್ಕಾರ ಹಾಗೂ ಆರೋಗ್ಯ ಇಲಾಖೆ ನಡೆಸುತ್ತದೆ.

* ಏನಾದರೂ ಲೈಂಗಿಕ ಸಂಬಂಧಿತ ಸಮಸ್ಯೆಗಳ ಬಗ್ಗೆ ನಿಮ್ಮಲ್ಲಿ ಪ್ರಶ್ನೆಗಳಿದ್ದರೆ ಸಮೀಪದ ವೈದ್ಯರು ಅಥವಾ ಲೈಂಗಿಕ ತಜ್ಞರನ್ನು ಭೇಟಿ ಮಾಡಿ.

* ಸುರಕ್ಷಿತ ಲೈಂಗಿಕ ಕ್ರಿಯೆ ನಡೆಸಿ. ಅಪರಿಚಿತ ಅಥವಾ ಒಂದಕ್ಕಿಂತ ಹೆಚ್ಚಿನ ವ್ಯಕ್ತಿಗಳ ಜೊತೆ ಲೈಂಗಿಕ ಸಂಪರ್ಕದಲ್ಲಿರುವುದು ಏಡ್ಸ್ ರೋಗ ಹರಡಲು ಪ್ರಮುಖ ಕಾರಣವಾಗಿದೆ.

ಕೊರೊನಾ ಲಾಕ್‌ಡೌನ್‌ನಲ್ಲಿ ಹೆಚ್ಚಿದ ಕೊರೊನಾ ಸೋಂಕಿತರು ಕೊರೊನಾ ಕಾಲದಲ್ಲಿ ಲಾಕ್‌ಡೌನ್‌ ವೇಳೆ ಕೆಲವರು ಅಸುರಕ್ಷಿತ ಲೈಂಗಿಕ ಕ್ರಿಯೆ ನಡೆಸಿರುವುದರಿಂದ ದೇಶದಲ್ಲಿ ಲೈಂಗಿಕ ಸೋಂಕು ಭಾರೀ ಪ್ರಮಾಣದಲ್ಲಿ ಹೆಚ್ಚಿದೆ. ಸುಮಾರು 85,000 ಜನರಿಗೆ ಲೈಂಗಿಕ ಸೋಂಕು ತಗುಲಿದೆಯಂತೆ. ಅದರಲ್ಲಿ ಮಹಾರಾಷ್ಟ್ರ ನಂ.1 ಸ್ಥಾನದಲ್ಲಿದೆ, ಅಲ್ಲಿಯ 10, 498 ಜನರಿಗೆ ಏಡ್ಸ್ ರೋಗ ತಗುಲಿದೆ. ಆಂಧ್ರ ಪ್ರದೇಶ ಎರಡನೇ ಸ್ಥಾನದಲ್ಲಿದೆ. ಸುಮಾರು 9,521 ಜನರಿಗೆ ಲೈಂಗಿಕ ಸೋಂಕು ತಗುಲಿದೆ. ಕರ್ನಾಟಕದಲ್ಲಿ 8,947 ಜನರಿಗೆ ಹೆಚ್‌ಐವಿ ವೈರಸ್‌ ತಗುಲಿದೆ. ಮಧ್ಯ ಪ್ರದೇಶ, ಪಶ್ಚಿಮ ಬಂಗಾಳದಲ್ಲಿ 3, 037 ಮತ್ತು 2,757 ಕೇಸ್‌ಗಳು ಕಂಡು ಬಂದಿರುವುದಾಗಿ ರಾಷ್ಟ್ರೀಯ ಏಡ್ಸ್ ನಿಯಂತ್ರಣ ಸಂಸ್ಥೆ ಮಾಹಿತಿ ನೀಡಿತ್ತು. ಏಡ್ಸ್‌ ರೋಗ ಬರುವ ಮೊದಲೇ ಸುರಕ್ಷಿತ ಕ್ರಮ ವಹಿಸಿದರೆ ಏಡ್ಸ್‌ ರೋಗ ತಡೆಗಟ್ಟಬಹುದಾಗಿದೆ.





Tags

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries