ಕುಂಬಳೆ: ಕುಂಬಳೆ ಸಮುದಾಯ ಆರೋಗ್ಯ ಕೇಂದ್ರ(ಸಿಎಚ್ ಸಿ)ವತಿಯಿಂದ ಡೆಂಗೆ ಜ್ವರ ದಿನಾಚರಣೆ ಅಂಗವಾಗಿ ನಡೆದ ವಿವಿಧ ಕಾರ್ಯಕ್ರಮಗಳು ಸೋಮವಾರ ನಡೆಯಿತು. ವಿಚಾರ ಸಂಕಿರಣ, ಸೊಳ್ಳೆ ಸಾಂದ್ರತೆ ಅಧ್ಯಯನ ಮತ್ತು ಸೊಳ್ಳೆ ಕೇಂದ್ರಗಳ ನಾಶ ನಡೆಸಲಾಯಿತು.
ಕಾರ್ಯಕ್ರಮವನ್ನು ಕಾಸರಗೋಡು ಬ್ಲಾಕ್ ಪಂಚಾಯತಿ ಕ್ಷೇಮಾಭಿವೃದ್ಧಿ ಸ್ಥಾಯಿ ಸಮಿತಿ ಅಧ್ಯಕ್ಷ ಅಶ್ರಫ್ ಕಾರ್ಲೆ ಉದ್ಘಾಟಿಸಿದರು. ಕಾರ್ಯಕ್ರಮದ ಅಂಗವಾಗಿ ವಾರ್ಡ್ ನೈರ್ಮಲ್ಯ ಸಮಿತಿಗಳ ಆಶ್ರಯದಲ್ಲಿ ಒಂದು ವಾರದ ಜಾಗೃತಿ ಕಾರ್ಯಕ್ರಮ ಹಾಗೂ ಸಾರ್ವಜನಿಕ ನೈರ್ಮಲ್ಯ ಮತ್ತು ಸೊಳ್ಳೆ ನಿರ್ಮೂಲನಾ ಕಾರ್ಯಗಳನ್ನು ನಡೆಸಲಾಗುವುದು.
ಕುಂಬಳೆ ಹೆಲ್ತ್ ಬ್ಲಾಕ್‍ನ ಆರಿಕ್ಕಾಡಿ, ಮಧೂರು, ಪುತ್ತಿಗೆ, ಬದಿಯಡ್ಕ, ಪೆರ್ಲ, ಕುಂಬ್ಡಾಜೆ ಮತ್ತು ಬೆಳ್ಳೂರು ಆರೋಗ್ಯ ಸಂಸ್ಥೆಗಳಲ್ಲಿ ಸೊಳ್ಳೆ ನಿರ್ಮೂಲನಾ ಚಟುವಟಿಕೆ ಹಾಗೂ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು. ಶಾಲೆಗಳು, ಕಚೇರಿಗಳು ಮತ್ತು ಮನೆಗಳಲ್ಲಿ ಪ್ರತಿ ಶುಕ್ರವಾರ ಡ್ರೈ ಡೇ ಆಚರಿಸಲಾಗುತ್ತದೆ. ಹೊಸ ಸಾರ್ವಜನಿಕ ಸುಗ್ರೀವಾಜ್ಞೆ 2022 ರ ಅಡಿಯಲ್ಲಿ ಸೊಳ್ಳೆಗಳ ಸಂತಾನೋತ್ಪತ್ತಿಯ ಸ್ಥಳಗಳನ್ನು ಸೃಷ್ಟಿಸುವವರ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುವುದು. ಮನೆಗಳು, ವ್ಯಾಪಾರ ಕೇಂದ್ರಗಳು ಮತ್ತು ಕಚೇರಿಗಳಲ್ಲಿ ಸೊಳ್ಳೆಗಳ ಸಂತಾನೋತ್ಪತ್ತಿಯ ಸ್ಥಳಗಳಿಲ್ಲ ಎಂದು ಖಚಿತಪಡಿಸಿಕೊಳ್ಳಲು ಸೂಚಿಸಲಾಗಿದೆ. ಆರೋಗ್ಯ ಮೇಲ್ವಿಚಾರಕರ ನೇತೃತ್ವದಲ್ಲಿ ಬ್ಲಾಕ್ ಮಟ್ಟದಲ್ಲಿ ತಪಾಸಣೆಯನ್ನು ಬಲಪಡಿಸಲಾಗುವುದು.
ಆಸ್ಪತ್ರೆ ಅಭಿವೃದ್ಧಿ ಸಮಿತಿ ಸದಸ್ಯ ಲಕ್ಷ್ಮಣಪ್ರಭು ಅಧ್ಯಕ್ಷತೆ ವಹಿಸಿದ್ದರು. ವೈದ್ಯಾಧಿಕಾರಿ ಡಾ.ಕೆ.ದಿವಾಕರ ರೈ, ಆರೋಗ್ಯ ಮೇಲ್ವಿಚಾರಕ ಬಿ.ಅಶ್ರಫ್, ಕಿರಿಯ ಆರೋಗ್ಯ ನಿರೀಕ್ಷಕ ಆದರ್ಶ್ ಮಾತನಾಡಿದರು.




-KUMBALA%20CHC.jpg)
