ಆಲಂಕೂಡ್ಲು ಕ್ಷೇತ್ರದಲ್ಲಿ ಬಾಲಾಲಯ ಪ್ರತಿಷ್ಠೆ
0
ಮೇ 29, 2022
ಬದಿಯಡ್ಕ: ನೆಕ್ರಾಜೆ ಗ್ರಾಮದ ಆಲಂಕೂಡ್ಲು ಶ್ರೀ ಮಹಾಲಿಂಗೇಶ್ವರ ದೇವಾಲಯದಲ್ಲಿ ವೇದಮೂರ್ತಿ ಬ್ರಹ್ಮಶ್ರೀ ಕುಂಟಾರು ವಾಸುದೇವ ತಂತ್ರಿಗಳ ಕಾರ್ಮಿಕತ್ವದಲ್ಲಿ ಶ್ರೀ ದೇವರ ಬಾಲಾಲಯ ಪ್ರತಿಷ್ಠೆ ಜರಗಿತು. ಸಾಮೂಹಿಕ ಪ್ರಾರ್ಥನೆ, ವಿವಿಧÀ ಧಾರ್ಮಿಕ ಕಾರ್ಯಕ್ರಮಗಳು ನಡೆಯಿತು. ಕ್ಷೇತ್ರೇಶರಾದ ಕೃಷ್ಣ ನೂರಿತ್ತಾಯ ಮತ್ತು ಪಿ. ಎಸ್ ಪುಣಿಂಚಿತ್ತಾಯ ಉಪಸ್ಥಿತರಿದ್ದರು. ಶ್ರೀ ದೇವರಿಗೆ ಕಲಶಾಭಿಷೇಕ ಮಹಾಪೂಜೆ ಪ್ರಸಾದ ವಿತರಣೆ ನಡೆಯಿತು. ನಂತರ ಶ್ರೀ ತಂತ್ರಿಗಳವರಿಂದ ಕಲಶಾಭಿಷೇಕದೊಂದಿಗೆ ಪೂಜೆ, ದೇವರ ಪ್ರಸಾದ ವಿತರಣೆ ನಡೆಯಿತು. ಬಿಂಬ ಪ್ರತಿಷ್ಠಾಪನ ಕಾರ್ಯದಲ್ಲಿ ಸಂಪೂರ್ಣ ಸಹಕಾರವನ್ನಿತ್ತ ಚೇರ್ಕೂಡ್ಲು ಮತ್ತು ನೂಜಿ ಸಹೋದರರಿಗೆ ಕ್ಷೇತ್ರದ ಪರವಾಗಿ ಅಭಿನಂದಿಸಲಾಯಿತು.
Tags




