HEALTH TIPS

ಹೊಸ ತಲೆಮಾರಿನ ಕೃಷಿಯ ಮನೋಭಾವ ಬದಲಾಗಬೇಕು: ಮಾಧವನ್ ಮಣಿಯಾರ: ಲಾಭದಾಯಕ ಭತ್ತದ ಕೃಷಿ ಕುರಿತು ಒಂದು ದಿನದ ಕಾರ್ಯಾಗಾರ ಉದ್ಘಾಟಿಸಿ ಅಭಿಮತ


                 ಮುಳ್ಳೇರಿಯ: ಹೊಸ ತಲೆಮಾರಿನ ಕೃಷಿಯ ಬಗೆಗಿನ ಮನೋಭಾವ ಬದಲಾಗಬೇಕು ಎಂದು ನೀಲೇಶ್ವರ ಬ್ಲಾಕ್ ಪಂಚಾಯಿತಿ ಅಧ್ಯಕ್ಷ ಮಾಧವನ್ ಮಣಿಯಾರ ಹೇಳಿದರು.
                             ಪಿಲಿಕೋಡು ಗ್ರಾ.ಪಂ.ಕೃಷಿಭವನದ ಆಶ್ರಯದಲ್ಲಿ ತನಿಕತ್ತಿರ ರೈತ ಉತ್ಪಾದಕ ಕಂಪನಿ ಹಾಗೂ ಕೊಡಕ್ಕಾಡ್ ಕದಳಿವನಂ ಕೃಷಿ ಗ್ರಾಮಗಳ ಸಂಯುಕ್ತಾಶ್ರಯದಲ್ಲಿ ನಮ್ಮ ನಡಿಗೆ ಕೃಷಿಯೆಡೆಗೆ ಯೋಜನೆಯ ಅಂಗವಾಗಿ ಆಯೋಜಿಸಿದ್ದ "ಲಾಭದಾಯಕ ಭತ್ತದ ಕೃಷಿ" ಕುರಿತ ಒಂದು ದಿನದ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
                ಯುವಕರು ಸಹಿತ  ಹೆಚ್ಚಿನ ಜನರು ಕೃಷಿ ಸಂಸ್ಕøತಿಯತ್ತ ಆಸಕ್ತರಾಗಬೇಕು. ಅದಕ್ಕಾಗಿ ಯುವಕರ ಕೃಷಿಯ ಬಗೆಗಿನ ಮನೋಭಾವ ಬದಲಾಗಬೇಕು. ಲಾಭದಾಯಕವಲ್ಲದ ಕಾರಣ ಅನೇಕರು ಭತ್ತದ ಕೃಷಿಯನ್ನು ನಿಲ್ಲಿಸಿದರು. ಅವರನ್ನು ಮತ್ತೆ ಕೃಷಿಗೆ ಕರೆತರಬೇಕು. ಅದಕ್ಕಾಗಿ ಕೃಷಿ ಲಾಭದಾಯಕ ಹಾಗೂ ಆಕರ್ಷಕವಾಗಬೇಕು ಎಂದರು.
                  ಜನ ಭತ್ತದ ಕೃಷಿಯಿಂದ ದೂರ ಸರಿಯುತ್ತಿರುವ ಈ ಸಂದರ್ಭದಲ್ಲಿ ಭತ್ತದ ಕೃಷಿಯನ್ನು ಲಾಭದಾಯಕವಾಗಿ ಮಾಡುವುದು ಹೇಗೆ ಎಂಬ ಕುರಿತು ತಜ್ಞರು ವಿಚಾರ ಸಂಕಿರಣ ನಡೆಸಿದರು. ಪಿಲಿಕೋಡು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಪಿ.ಪಿ.ಪ್ರಸನ್ನಕುಮಾರಿ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಕಾಸರಗೋಡು ಅಭಿವೃದ್ಧಿ ಪ್ಯಾಕೇಜ್ ವಿಶೇಷಾಧಿಕಾರಿ ಇ.ಪಿ.ರಾಜಮೋಹನ್ ದಿಕ್ಸೂಚಿ ಭಾಷಣ ಮಾಡಿದರು. ಸಂಘಟನಾ ಸಮಿತಿ ಸಂಚಾಲಕ ಪಿ.ರಾಮಚಂದ್ರನ್ ಮಾಸ್ತರ್, ನೀಲೇಶ್ವರ ಬ್ಲಾಕ್ ಪಂಚಾಯಿತಿ ಉಪಾಧ್ಯಕ್ಷೆ ಪಿ.ಕೆ.ಲಕ್ಷ್ಮಿ, ಪಿಲಿಕೋಡು ಗ್ರಾಮ ಪಂಚಾಯಿತಿ ಕಲ್ಯಾಣ ಸ್ಥಾಯಿ ಸಮಿತಿ ಅಧ್ಯಕ್ಷ ಕೆ.ವಿ.ವಿಜಯನ್, ಪಿಲಿಕೋಡು ಗ್ರಾಮ ಪಂಚಾಯಿತಿ ಸದಸ್ಯೆ ಪ್ರಸೀತಾ, ಪಿಲಿಕೋಡು ಗ್ರಾಮ ಪಂಚಾಯಿತಿ ಕೃಷಿ ಅಧಿಕಾರಿ ಜಲೇಶನ್, ಓಲೋಟ್ ಡೈರಿ ಸಹಕಾರ ಸಂಘದ ಅಧ್ಯಕ್ಷ ಸಿ.ಮಾಧವನ್, ರೈತ ಸಂಘ. ಗ್ರಾಮ ಕಾರ್ಯದರ್ಶಿ ಕೆ.ಸಿ.ಮಾಧವನ್, ಕದಳಿವನಂ ಅಧ್ಯಕ್ಷ ಸಿ.ವಿ.ಪರಮೇಶ್ವರ ವಾರಿಯರ್, ತನಿಕತಿರ್ ಫಾರ್ಮರ್ ಪೆÇ್ರಡ್ಯೂಸರ್ ಕಂಪನಿ ವ್ಯವಸ್ಥಾಪಕ ನಿರ್ದೇಶಕ ಯು.ನಾರಾಯಣನ್, ಸಂಘಟನಾ ಸಮಿತಿ ಜಂಟಿ ಸಂಚಾಲಕ ಎಂ.ವಿ.ಗಣೇಶನ್, ಪಿ.ರಾಘವನ್ ಮಾತನಾಡಿದರು.
               ಲಾಭದಾಯಕ ಭತ್ತದ ಕೃಷಿ ವಿಚಾರ ಸಂಕಿರಣದಲ್ಲಿ ಉತ್ತರ ವಲಯ ಕೃಷಿ ಸಂಶೋಧನಾ ವಿಭಾಗದ ತಜ್ಞರಾದ ಡಾ. ಡಾ.ಟಿ.ವನಜಾ, ಪ್ರಧಾನ ಕೃಷಿ ಅಧಿಕಾರಿ ಆರ್.ವೀಣಾರಾಣಿ, ಕಣ್ಣೂರು ಕೃಷಿ ವಿಜ್ಞಾನ ಕೇಂದ್ರದ ಸಂಯೋಜಕಿ ಪಿ ಜಯರಾಜ್ ಮತ್ತು ಶ್ರೀಧರನ್ ನಂಬೂದಿರಿ ಚೆರುತಳಂ ವಿಷಯದ ಕುರಿತು ಮಾತನಾಡಿದರು. ವಿಚಾರ ಸಂಕಿರಣದ ಅಧ್ಯಕ್ಷತೆಯನ್ನು ತನಿಕತಿರ್ ಫಾರ್ಮರ್ ಪೆÇ್ರಡ್ಯೂಸರ್ ಕಂಪನಿಯ ವ್ಯವಸ್ಥಾಪಕ ನಿರ್ದೇಶಕ ಯು ನಾರಾಯಣನ್ ವಹಿಸಿದ್ದರು. ರಾಜ್ಯ ಸಂಪನ್ಮೂಲ ವ್ಯಕ್ತಿ ಎ.ವಿ. ರಾಧಾಕೃಷ್ಣನ್ ಯೋಜನೆಯ ಕುರಿತು ಮಾತನಾಡಿದರು. ರವೀಂದ್ರನ್ ಕೊಡಕ್ಕಾಡ್ ಪ್ರಾಸ್ತಾವಿಕವಾಗಿ ಮಾತನಾಡಿ, ಸ್ವಾಗತಿಸಿದರು. ಕೆ.ಪಿ.ಶ್ರೀಧರನ್ ಮಾಸ್ತರ್ ವಂದಿಸಿದರು. 




ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries