ಕಾಸರಗೋಡು: ಕಾಸರಗೋಡು ನಾಗರಕಟ್ಟೆಯ ಶ್ರೀ ಭಿಕ್ಷುಲಕ್ಷ್ಮಣಾನಂದ ಸ್ವಾಮೀಜಿ ಸ್ಮಾರಕ ಮಂದಿರದಲ್ಲಿ ಶ್ರೀ ಭಿಕ್ಷುಲಕ್ಷ್ಮಣಾನಂದ ಸ್ವಾಮೀಜಿ ಸೇವಾ ಸಮಾಜದ ನೇತೃತ್ವದಲ್ಲಿ ಶ್ರೀ ಭಿಕ್ಷು ಲಕ್ಷ್ಮಣಾನಂದ ಸ್ವಾಮೀಜಿಯವರ 136 ನೇ ವಧ್ರ್ಯಂತ್ಯುತ್ಸವದ ಅಂಗವಾಗಿ ಸ್ವಸಮಾಜದ ವಟುಗಳಿಗೆ ಉಚಿತ ಸಾಮೂಹಿಕ ಬ್ರಹ್ಮೋಪದೇಶ ನಡೆಯಿತು.
ಬೆಳಗ್ಗೆ ಗಣಹೋಮ, 9.50 ರಿಂದ 10.20 ರ ವರೆಗಿನ ಮಿಥುನ ಲಗ್ನ ಶುಭಮುಹೂರ್ತದಲ್ಲಿ ಸಾಮೂಹಿಕ ಬ್ರಹ್ಮೋಪದೇಶ ನಡೆಯಿತು. ಇದೇ ಸಂದಭರ್Àದಲ್ಲಿ ಸಾಮೂಹಿಕ ಸತ್ಯನಾರಾಯಣ ಪೂಜೆ, ಮಹಾಪೂಜೆ, ಮಧ್ಯಾಹ್ನ ಅನ್ನ ಪ್ರಸಾದ ವಿತರಣೆ ಜರಗಿತು.




.jpg)
