ಮಧೂರು: ಮೊಗೇರ ಸರ್ವೀಸ್ ಸೊಸೈಟಿ (ರಿ.) ಕಾಸರಗೋಡು ಇದರ ನೇತೃತ್ವದಲ್ಲಿ ಭಾನುವಾರ ಮಧೂರು ಅಟಲ್‍ಜೀ ಸಭಾಂಗಣದಲ್ಲಿ ಜರಗಿದ ಮೊಗೇರ ಮಹಾಸಂಗಮ 2022 ಕಾರ್ಯಕ್ರಮದಲ್ಲಿ ಕರ್ನಾಟಕ ಸರ್ಕಾರದ ಬಂದರು ಮತ್ತು ಒಳನಾಡು ಸಾರಿಗೆ ಸಚಿವ ಎಸ್. ಅಂಗಾರ ಅವರಿಗೆ ಮೊಗೇರ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಮೊಗೇರ ಸರ್ವೀಸ್ ಸೊಸೈಟಿ ಕೇರಳ ರಾಜ್ಯ ಸಮಿತಿ ಅಧ್ಯಕ್ಷ ಐ.ಲಕ್ಷ್ಮಣ ಪೆರಿಯಡ್ಕ ಅಧ್ಯಕ್ಷತೆ ವಹಿಸಿದ್ದರು. ಮಧೂರು ಗ್ರಾಮಪಂಚಾಯಿತಿ ಅಧ್ಯಕ್ಷ ಗೋಪಾಲಕೃಷ್ಣ ಕೆ., ಹಿರಿಯ ಲೇಖಕ, ಕೇರಳ ತುಳು ಅಕಾಡೆಮಿ ಸದಸ್ಯ ರಾಧಾಕೃಷ್ಣ ಕೆ.ಉಳಿಯತ್ತಡ್ಕ, ಮೀಂಜ ಗ್ರಾಪಂ ಸ್ಥಾಯಿ ಸಮಿತಿ ಅಧ್ಯಕ್ಷ ಬಾಬು ಕುಳೂರು, ಮೊಗ್ರಾಲ್ ಪುತ್ತೂರು ಗ್ರಾಮಪಂಚಾಯಿತಿ ಸದಸ್ಯ ಸಂಪತ್ ಕುಮಾರ್ ಕೆ.ಪಿ., ಕಾಸರಗೋಡು ಜಿಲ್ಲಾ ಮೊಗೇರ ಸರ್ವೀಸ್ ಸೊಸೈಟಿಯ ಅಧ್ಯಕ್ಷ ಬಾಬು ಯು. ಪಚ್ಲಂಪಾರೆ, ರಾಜ್ಯ ಸಮಿತಿ ಉಪಾಧ್ಯಕ್ಷೆ ಗಿರಿಜಾ ತಾರಾನಾಥ ಕುಂಬಳೆ, ಮೊಗೇರ ಸರ್ವೀಸ್ ಸೊಸೈಟಿಯ ರಾಜ್ಯ ಪ್ರಧಾನ ಕಾರ್ಯದರ್ಶಿ ಕೆ.ಕೆ.ಸ್ವಾಮಿಕೃಪಾ ಉಪಸ್ಥಿತರಿದ್ದರು.




