ನವದೆಹಲಿ: ಎರಡು ದಿನಗಳ ಹಿಂದೆ ಭಾರಿ ಮಳೆಯಾಗಿದ್ದ ಇಲ್ಲಿ ಅದನ್ನೂ ಮೀರಿಸುವಂಥ ಮಳೆಯಾಗಿದ್ದು, ಇದು 26 ವರ್ಷಗಳಲ್ಲಿ ಸುರಿದ ಅತ್ಯಧಿಕ ಮಳೆ ಎನಿಸಿಕೊಂಡಿದೆ. ಒಂದೇ ದಿನದಲ್ಲಿ ಇಲ್ಲಿ 972 ಮಿ.ಮೀ. ಮಳೆ ಸುರಿದಿದೆ.
0
samarasasudhi
ಜೂನ್ 17, 2022
ನವದೆಹಲಿ: ಎರಡು ದಿನಗಳ ಹಿಂದೆ ಭಾರಿ ಮಳೆಯಾಗಿದ್ದ ಇಲ್ಲಿ ಅದನ್ನೂ ಮೀರಿಸುವಂಥ ಮಳೆಯಾಗಿದ್ದು, ಇದು 26 ವರ್ಷಗಳಲ್ಲಿ ಸುರಿದ ಅತ್ಯಧಿಕ ಮಳೆ ಎನಿಸಿಕೊಂಡಿದೆ. ಒಂದೇ ದಿನದಲ್ಲಿ ಇಲ್ಲಿ 972 ಮಿ.ಮೀ. ಮಳೆ ಸುರಿದಿದೆ.
ಜಗತ್ತಿನಲ್ಲೇ ಅತ್ಯಂತ ತೇವಮಯ ಹಾಗೂ ಅತ್ಯಧಿಕ ಮಳೆಯಾಗುವ ಚಿರಾಪುಂಜಿಯಲ್ಲಿ ಈ ದಾಖಲೆಯ ಮಳೆ ಸುರಿದಿದೆ.
ಚಿರಾಪುಂಜಿಯಲ್ಲಿ ಈ ತಿಂಗಳಲ್ಲಿ ಶುಕ್ರವಾರದವರೆಗೆ ಸುರಿದ ಒಟ್ಟು ಮಳೆ 4081.3 ಮಿ.ಮೀ. ಮಳೆಯಾಗಿದೆ ಎಂದು ಹವಾಮಾನ ಇಲಾಖೆಯ ಅಧಿಕಾರಿ ಸುನೀತಾ ದಾಸ್ ತಿಳಿಸಿದ್ದಾರೆ. 1995ರ ಜೂ. 15ರಂದು ಚಿರಾಪುಂಜಿಯಲ್ಲಿ 930 ಮಿ.ಮೀ. ಮಳೆಯಾಗಿದ್ದು, ಆ ಬಳಿಕ ಸುರಿದ ಮಳೆಯಲ್ಲಿ ಇದೇ ಅತ್ಯಧಿಕ ಎಂದು ಅವರು ತಿಳಿಸಿದ್ದಾರೆ.
ಚಿರಾಪುಂಜಿಯಲ್ಲಿ ವರ್ಷದಲ್ಲಿ ಒಂದೆರಡು ಸಲ 500ರಿಂದ 600 ಮಿ.ಮೀ. ಮಳೆಯಾಗುವುದು ಸಾಮಾನ್ಯ. ಆದರೆ 800 ಮಿ.ಮೀ.ಗಿಂತಲೂ ಅಧಿಕ ಮಳೆಯಾಗುವುದು ಅಪರೂಪ. ಭಾರಿ ಮಳೆ ಇನ್ನೆರಡು ದಿನ ಮುಂದುವರಿಯುವ ಸಾಧ್ಯತೆ ಇದೆ ಎಂದು ದಾಸ್ ತಿಳಿಸಿದ್ದಾರೆ.