ನವದೆಹಲಿ:ಹಣಕಾಸು ಸೇರ್ಪಡೆಯನ್ನು ಉತ್ತೇಜಿಸುವ ಉದ್ದೇಶದಿಂದ ಕ್ರಿಯಾಶೀಲವಾಗಿರುವ 63,000 ಪ್ರಾಥಮಿಕ ಕೃಷಿ ಸಾಲ ಸೊಸೈಟಿ (ಪಿಎಸಿಎಸ್)ಗಳ ಗಣಕೀಕರಣಕ್ಕಾಗಿ ಐದು ವರ್ಷಗಳಲ್ಲಿ 2,516 ಕೋ.ರೂ.ಗಳನ್ನು ಒದಗಿಸುವ ಪ್ರಸ್ತಾವಕ್ಕೆ ಸರಕಾರವು ಬುಧವಾರ ಅನುಮೋದನೆಯನ್ನು ನೀಡಿದೆ.
0
samarasasudhi
ಜೂನ್ 30, 2022
ನವದೆಹಲಿ:ಹಣಕಾಸು ಸೇರ್ಪಡೆಯನ್ನು ಉತ್ತೇಜಿಸುವ ಉದ್ದೇಶದಿಂದ ಕ್ರಿಯಾಶೀಲವಾಗಿರುವ 63,000 ಪ್ರಾಥಮಿಕ ಕೃಷಿ ಸಾಲ ಸೊಸೈಟಿ (ಪಿಎಸಿಎಸ್)ಗಳ ಗಣಕೀಕರಣಕ್ಕಾಗಿ ಐದು ವರ್ಷಗಳಲ್ಲಿ 2,516 ಕೋ.ರೂ.ಗಳನ್ನು ಒದಗಿಸುವ ಪ್ರಸ್ತಾವಕ್ಕೆ ಸರಕಾರವು ಬುಧವಾರ ಅನುಮೋದನೆಯನ್ನು ನೀಡಿದೆ.
ಸಂಪುಟ ಸಭೆಯ ಬಳಿಕ ಮಾಧ್ಯಮಗಳನ್ನುದ್ದೇಶಿಸಿ ಮಾತನಾಡಿದ ವಾರ್ತಾ ಮತ್ತು ಪ್ರಸಾರ ಸಚಿವ ಅನುರಾಗ ಸಿಂಗ್ ಠಾಕೂರ್ ಅವರು,ಇದರಿಂದ ಹೆಚ್ಚಿನವರು ಸಣ್ಣ ಮತ್ತು ಅತಿಸಣ್ಣ ರೈತರು ಸೇರಿದಂತೆ 13 ಕೋ.ರೈತರಿಗೆ ಲಾಭವಾಗಲಿದೆ ಎಂದು ತಿಳಿಸಿದರು.