ನವದೆಹಲಿ: ಫ್ಯಾಷನ್ ಎಂದಾಕ್ಷಣ ಬಣ್ಣ ಬಣ್ಣದ ಬಟ್ಟೆ ಧರಿಸುವ ಮಹಿಳೆಯರೇ ನೆನಪಾಗುತ್ತಾರೆ. ಫ್ಯಾಷನ್ ಹೆಸರಿನಲ್ಲಿ ಇಂದಾಗುತ್ತಿರುವ ಬೆಳವಣಿಗೆಗಳು ಒಂದೆರಡಲ್ಲ. ಟಿವಿಗಳಲ್ಲಿ ಇದಕ್ಕೆಂದೇ ಪ್ರತ್ಯೇಕ ಹಲವು ಚಾನೆಲ್ಗಳೆ ಇವೆ. ಇವುಗಳನ್ನು ನೋಡುವವರ ಸಂಖ್ಯೆಯೂ ಅಧಿಕವಿದೆ.
0
samarasasudhi
ಜೂನ್ 30, 2022
ನವದೆಹಲಿ: ಫ್ಯಾಷನ್ ಎಂದಾಕ್ಷಣ ಬಣ್ಣ ಬಣ್ಣದ ಬಟ್ಟೆ ಧರಿಸುವ ಮಹಿಳೆಯರೇ ನೆನಪಾಗುತ್ತಾರೆ. ಫ್ಯಾಷನ್ ಹೆಸರಿನಲ್ಲಿ ಇಂದಾಗುತ್ತಿರುವ ಬೆಳವಣಿಗೆಗಳು ಒಂದೆರಡಲ್ಲ. ಟಿವಿಗಳಲ್ಲಿ ಇದಕ್ಕೆಂದೇ ಪ್ರತ್ಯೇಕ ಹಲವು ಚಾನೆಲ್ಗಳೆ ಇವೆ. ಇವುಗಳನ್ನು ನೋಡುವವರ ಸಂಖ್ಯೆಯೂ ಅಧಿಕವಿದೆ.
ಒಂದಷ್ಟು ಯುವತಿಯರು ಚಿತ್ರ ವಿಚಿತ್ರವಾದ ಬಟ್ಟೆ ಧರಿಸಿ ರ‍್ಯಾಂಪ್ ಮೇಲೆ ನಡೆದುಕೊಂಡು ಬರುತ್ತಿದ್ದರೆ, ಅದನ್ನು ನೋಡುವ ಒಂದಷ್ಟು ಜನರು ಅಲ್ಲೇ ಕುಳಿತಿರುತ್ತಾರೆ. ಇವಿಷ್ಟೂ ಕಣ್ಣ ಮುಂದೆ ಬಂದು ಹೋಗುತ್ತವೆ. ಸದ್ಯ ಈ ಯುವಕ ಮಾಡಿರುವ ನಕಲನ್ನು ನೋಡಿದವರಿಗೆ ನಗು ಬರುವುದಂತೂ ಸತ್ಯ.
ಆದರೆ ಇದೇ ರೀತಿಯ ಫ್ಯಾಷನ್ ಮಾಡಿರುವ ಯುವಕನ ವಿಡಿಯೋ ಈಗ ಭಾರೀ ವೈರಲ್ ಆಗುತ್ತಿದೆ. ಮಾಡೆಲ್ಗಳು ಯಾವ ರೀತಿ ಬಟ್ಟೆ ಧರಿಸಿ, ನಂತರ ಹೇಗೆ ನಡೆಯುತ್ತಾರೆ ಎಂಬುದನ್ನು ಯುವಕನೋರ್ವ ಮಾಡಿರುವ ವಿಡಿಯೋ ಹಾಸ್ಯಾಸ್ಪದವಾಗಿದ್ದು, ಇದನ್ನು ನೋಡಿದವರು ನಗದೇ ಸುಮ್ಮನೆ ಇರಲು ಸಾಧ್ಯವೇ ಇಲ್ಲ.
ಈ ವಿಡಿಯೋವನ್ನು ಟ್ವಿಟ್ಟರ್ ಬಳಕೆದಾರರೊಬ್ಬರು ಶೇರ್ ಮಾಡಿಕೊಂಡಿದ್ದು, ಈವರೆಗೂ ಲಕ್ಷಾಂತರ ಮಂದಿ ವೀಕ್ಷಿಸಿದ್ದಾರೆ. ಯಾವ ಮಾಡೆಲ್ ಕಮ್ಮಿ ಇಲ್ಲ ಎಂಬುವಂತೆ ನಕಲು ಮಾಡಿರುವ ಈ ಯುವಕನ ಪ್ರತಿಭೆಗೂ ಮೆಚ್ಚುಗೆ ವ್ಯಕ್ತವಾಗಿದೆ.