ಕಾಸರಗೋಡು: ಎಂಡೋಸಲ್ಫಾನ್ ವಿಶೇಷ ಕೋಶದ ಮೂಲಕ ಸಂತ್ರಸ್ತರಿಗೆ ಇದುವರೆಗೆ 70.31 ಕೋಟಿ ರೂ. ಧನಸಹಾಯ ಮಂಜೂರುಗೊಳಿಸಿರುವುದಾಗಿ ಜಿಲ್ಲಾಧಿಕಾರಿ ಭಂಡಾರಿ ಸವಾಗತ್ ರಣವೀರ್‍ಚಂದ್ ತಿಳಿಸಿದ್ದಾರೆ.
ಇದುವರೆಗೆ ಒಟ್ಟು 1808 ಜನರಿಗೆ ಧನಸಹಾಯ ನೀಡಲಾಗಿದೆ. ಸುಪ್ರೀಂ ಕೋರ್ಟ್‍ನ ಆದೇಶದಂತೆ ರಾಜ್ಯ ಸರ್ಕಾರದಿಂದ ಮಂಜೂರಾದ 200 ಕೋಟಿ ರೂ. ಮೊತ್ತವನ್ನು ಅರ್ಜಿದಾರರಿಗೆ ಪಾವತಿಸಲಾಗುತ್ತಿದೆ. ಓಪಿ ಸಂಖ್ಯೆ ಪಡೆದವರು ಮತ್ತು ಎಂಡೋಸಲ್ಫಾನ್ ಸಂತ್ರಸ್ತರ ಪಟ್ಟಿಯಲ್ಲಿದ್ದು, ಇನ್ನೂ 5 ಲಕ್ಷ ರೂ. ವರೆಗಿನ ಮೊತ್ತ ಪಡೆಯದೇ ಇರುವವರು ತಕ್ಷಣ ಸೂಕ್ತ ದಾಖಲೆಗಳೊಂದಿಗೆ ಸನಿಹದ ಅಕ್ಷಯ ಕೇಂದ್ರದ ಮೂಲಕ ಅರ್ಜಿ ಸಲ್ಲಿಸಬೇಕು. ಜಿಲ್ಲಾಧಿಕಾರಿ ಕಚೇರಿಯ ಎಂಡೋಸಲ್ಫಾನ್ ಸೆಲ್‍ನಲ್ಲಿ ಬ್ಯಾಂಕ್ ಖಾತೆಗಳ ಮೂಲಕ ಹಣ ನೀಡಲು ಕ್ರಮಕೈಗೊಳ್ಳಲಾಗುತ್ತಿದ್ದು, ಎಲ್ಲಾ ಅರ್ಜಿದಾರರಿಗೆ ಅರ್ಹ ಮೊತ್ತವನ್ನು ಶೀಘ್ರ ವಿತರಿಸಲಾಗುವುದು ಎಂದು ಜಿಲ್ಲಾಧಿಕಾರಿ ತಿಳಿಸಿದರು.


