ಬದಿಯಡ್ಕ: `ಮನೆಗೊಂದು ಗಿಡ' ಎಂಬ ಚಿಂತನೆಯೊಂದಿಗೆ ಮಂಗಳೂರಿನ ಉದ್ಯಮಿ, ಧಾರ್ಮಿಕ ಮುಂದಾಳು ಮಧುಸೂದನ ಆಯರ್ ಮಂಗಳೂರು ಅವರು ಉಬ್ರಂಗಳ ಗ್ರಾಮದ ಬಡಗುಶಬರಿಮಲೆ ಶ್ರೀ ಮಹಾದೇವ ಪಾರ್ವತಿ ಶ್ರೀ ಶಾಸ್ತಾರ ದೇವಸ್ಥಾನದ ಬ್ರಹ್ಮಕಲಶೋತ್ಸವ ಸಮಿತಿ ರೂಪೀಕರಣದ ಮಹಾಸಭೆಯ ವೇಳೆ ಭಕ್ತಾದಿಗಳಿಗೆ ವಿವಿಧ ಜಾತಿಯ ಹಣ್ಣುಗಳು, ಬೆಲೆಬಾಳುವ ಮರದ ಗಿಡಗಳನ್ನು ನೀಡಿದರು. ಶ್ರೀ ಕ್ಷೇತ್ರದ ಆಡಳಿತ ಮೊಕ್ತೇಸರ ಡಾ. ಕಿಶೋರ್ ಕುಮಾರ್ ಕುಣಿಕುಳ್ಳಾಯ ಅವರು ಊರಿನ ಹಿರಿಯರಿಗೆ ಗಿಡವನ್ನು ನೀಡಿ ಉದ್ಘಾಟಿಸಿದರು. ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷ ಡಾ. ಯು.ಬಿ. ಕುಣಿಕುಳ್ಳಾಯ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಧಾರ್ಮಿಕ ಮುಖಂಡ ಬಿ.ವಸಂತ ಪೈ ಬದಿಯಡ್ಕ ಹಾಗೂ ಗಣ್ಯರು ಉಪಸ್ಥಿತರಿದ್ದರು.
ಭೌಗೋಳಿಕ ತಾಪಮಾನದ ಏರುಪೇರಿನಿಂದ ಅನೇಕ ಕಷ್ಟಗಳನ್ನು ಜನರು ಅನುಭವಿಸುತ್ತಿದ್ದಾರೆ.ಪರಿಸರ ಸಂರಕ್ಷಣೆಯ ಉದ್ದೇಶದೊಂದಿಗೆ ಹಣ್ಣಿನ ಗಿಡಗಳು, ವಿವಿಧ ಜಾತಿಯ ಮರದ ಗಿಡಗಳನ್ನು ನೀಡಲಾಗಿದೆ. ವೈರುಧ್ಯವಾದ ಪ್ರಕೃತಿ ವಿಕೋಪಗಳಿಂದ ನಾನಾರೋಗಗಳು ಹರಡುತ್ತಿರುವ ಸಂದರ್ಭವಿದಾಗಿದೆ. ಗಿಡಮರಗಳ ಸಂರಕ್ಷಣೆ ಮುಂದಿನ ತಲೆಮಾರಿಗೆ, ಹಸಿವಿನಿಂದ ಹಾರಾಡುವ ಪಕ್ಷಿಗಳಿಗೂ, ಪ್ರಾಣಿಗಳಿಗೂ ನೆರವಾಗಲಿ.
- ಮಧುಸೂದನ ಆಯರ್, ಮಂಗಳೂರು




