ಕಾಸರಗೋಡು: ಮಡಿಕೈ ಎರಿಕ್ಕುಳ ಸರ್ಕಾರಿ ಹೋಮಿಯೋ ದವಾಖಾನೆಗೆ ನಿರ್ಮಿಸುವ ನೂತನ ಕಟ್ಟಡಕ್ಕೆ ಶಾಸಕ ಇ.ಚಂದ್ರಶೇಖರನ್ ಶಂಕುಸ್ಥಾಪನೆ ನೆರವೇರಿಸಿದರು. ಶಾಸಕರ 2021-22ನೇ ಸಾಲಿನ ಆಸ್ತಿ ಅಭಿವೃದ್ಧಿ ನಿಧಿಯಲ್ಲಿ 20 ಲಕ್ಷ ರೂ.ವೆಚ್ಚದಲ್ಲಿ ನೂತನ ಕಟ್ಟಡ ನಿರ್ಮಿಸಲಾಗುವುದು. ಹೊಸ ಕಟ್ಟಡದಲ್ಲಿ ತುರ್ತು ಚಿಕಿತ್ಸಾ ವಿಭಾಗ, ಉತ್ತಮ ಒಪಿ ಸೌಲಭ್ಯ, ಉತ್ತಮ ಕಚೇರಿ ಸೌಲಭ್ಯ, ವೀಕ್ಷಣಾ ಕೊಠಡಿ, ಪರೀಕ್ಷಾ ಕೊಠಡಿ ಹಾಗೂ ಅಂಗವಿಕಲರಿಗೆ ಪ್ರತ್ಯೇಕ ಶೌಚಾಲಯ ವ್ಯವಸ್ಥೆ ಕಲ್ಪಿಸಲಾಗುತ್ತದೆ. ಮುಂದೆ ಆಸ್ಪತ್ರೆಯಲ್ಲಿ ಯೋಗ ಕೇಂದ್ರ ಸ್ಥಾಪಿಸಲಾಗುವುದು. ಎರಿಕ್ಕುಳ ಸರ್ಕಾರಿ ಔಷಧಾಲಯವು ಜಿಲ್ಲೆಯ ಮಾದರಿ ಹೋಮಿಯೋಪತಿ ಔಷಧಾಲಯಗಳಲ್ಲಿ ಒಂದಾಗಿದೆ. ಇದನ್ನು 2022-23ರಲ್ಲಿ ಆಯುಷ್ ಸ್ವಾಸ್ಥ್ಯ ಕೇಂದ್ರವಾಗಿ ಮೇಲ್ದರ್ಜೆಗೇರಿಸುವ ನಿರೀಕ್ಷೆಯಿದೆ.
ನೂತನ ಕಟ್ಟಡ ನಿರ್ಮಾಣ ಪೂರ್ಣಗೊಂಡರೆ ಹೆಚ್ಚಿನ ಸೌಲಭ್ಯಗಳು ದೊರೆಯಲಿವೆ ಎಂದು ಶಾಸಕ ಇ.ಚಂದ್ರಶೇಖರನ್ ಹೇಳಿದರು. ನಿಗದಿತ ಅವಧಿಯಲ್ಲಿ ಕಟ್ಟಡ ಕಾಮಗಾರಿ ಪೂರ್ಣಗೊಳಿಸಲು ಎಲ್ಲರೂ ಸಹಕರಿಸಬೇಕು. ನಿಗದಿತ ಅನುದಾನವನ್ನು ಸಕಾಲದಲ್ಲಿ ಬಳಸಿಕೊಳ್ಳಬೇಕು. ಸರ್ಕಾರದ ಹೆಚ್ಚಿನ ಅನುದಾನವು ಆರೋಗ್ಯ ಮತ್ತು ಶಿಕ್ಷಣ ಕ್ಷೇತ್ರಗಳಿಗೆ ಖರ್ಚಾಗುತ್ತದೆ. ಆರೋಗ್ಯ ಕ್ಷೇತ್ರದಲ್ಲಿ ಕೇರಳ ಉತ್ತಮ ಉದಾಹರಣೆಯಾಗಿದೆ ಎಂದರು.
ಮಡಿಕೈ ಗ್ರಾಮ ಪಂಚಾಯತಿ ಅಧ್ಯಕ್ಷೆ ಎಸ್.ಪ್ರೀತಾ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ವೈದ್ಯಾಧಿಕಾರಿ (ಹೋಮಿಯೋ) ಡಾ. ಐ.ಆರ್.ಅಶೋಕ ಕುಮಾರ್ ಮುಖ್ಯ ಅತಿಥಿಯಾಗಿದ್ದರು. ಕಾಞಂಗಾಡು ಬ್ಲಾಕ್ ಪಂಚಾಯತಿ ಉಪಾಧ್ಯಕ್ಷೆ ಕೆ.ವಿ.ಶ್ರೀಲತಾ ಮತ್ತು ಮಡಿಕೈ ಪಂಚಾಯತಿ ಅಭಿವೃದ್ಧಿ ಸ್ಥಾಯಿ ಸಮಿತಿ ಅಧ್ಯಕ್ಷ ಪಿ. ಸತ್ಯ, ಸದಸ್ಯರಾದ ಎಂ.ರಜಿತಾ ಮತ್ತು ಪಿ.ಪಿ.ಲೀಲಾ, ಎಚ್‍ಎಂಸಿ ಸದಸ್ಯರಾದ ಕೆ.ಸಾರಂಗ ಧರನ್, ಎಂ.ಶಾಜಿ ಮಾತನಾಡಿದರು. ಮಡಿಕೈ ಪಂಚಾಯತಿ ಉಪಾಧ್ಯಕ್ಷ ವಿ ಪ್ರಕಾಶನ್ ಸ್ವಾಗತಿಸಿ, ವೈದ್ಯಾಧಿಕಾರಿ ಡಾ. ರಾಜ್ ಸಿಕೆವಿಪಿ ವಂದಿಸಿದರು.




-HOMEO%20DISPENSARY%20-%20FOUNDATION%20STONE.jpg)
