ಉಪ್ಪಳ: ಕೊಂಡೆವೂರಿನ ಶ್ರೀ ನಿತ್ಯಾನಂದ ಯೋಗಾಶ್ರಮದ ಶ್ರೀ ಯೋಗಾನಂದ ಸರಸ್ವತೀ ಸ್ವಾಮೀಜಿಯವರ ಮಾರ್ಗದರ್ಶನದಲ್ಲಿ, ಕೊಂಡೆವೂರು ಮಠದಲ್ಲಿ ಹಾಗೂ ಶ್ರೀಗಳುÀ ಪ್ರಸ್ತುತ ಯಾತ್ರೆಯಲ್ಲಿರುವ ಮುಂಬಯಿಯಲ್ಲಿ ಜೂನ್ 21 ರಂದು ಯೋಗಾಭ್ಯಾಸ ನಡೆಸುವ ಮೂಲಕ ವಿಶ್ವಯೋಗ ದಿನವನ್ನು ಆಚರಿಸಲಾಯಿತು. ಆರಂಭದಲ್ಲಿ ಮಠದ ಕಾರ್ಯಕರ್ತ ಯೋಗದ ಪ್ರಸ್ತುತತೆ ಬಗ್ಗೆ ಮಾತನಾಡಿ ಆರೋಗ್ಯಪೂರ್ಣ ಜೀವನಕ್ಕೆ ಮತ್ತು ಭಾರತ ವಿಶ್ವಗುರುವಾಗಲು ನಾವು ಪ್ರತಿನಿತ್ಯ ಯೋಗ ಮಾಡಬೇಕಿದೆ ಎಂದರು. ನಂತರ ಕಾರ್ಯಕರ್ತ ಕೀರ್ತೇಶ್ ಮೀಯಪದವು ರವರು ಸರಳ ವ್ಯಾಯಾಮಗಳು, ಕೆಲವು ಆಸನಗಳು ಮತ್ತು ಸೂರ್ಯನಮಸ್ಕಾರಗಳನ್ನು ಮಾಡಲು ಪ್ರಾತ್ಯಕ್ಷಿಕೆ ಮೂಲಕ ಕಲಿಸಿಕೊಟ್ಟರು. ಧ್ಯಾನ,ಯೋಗ ಪ್ರದರ್ಶನಗಳಲ್ಲಿ ಬಾಲಕರು ಮತ್ತು ಮಧ್ಯವಯಸ್ಸಿನ ಕಾರ್ಯಕರ್ತರು ಪಾಲ್ಗೊಂಡಿದ್ದರು.

.jpg)
