HEALTH TIPS

ರಾಜಕೀಯ ಪಕ್ಷಗಳ ದೇಣಿಗೆ ಸಂಗ್ರಹದಲ್ಲಿ ಕುಸಿತ

 ನವದೆಹಲಿ: ಬಿಎಸ್‌ಪಿ ಹೊರತು ಪಡಿಸಿ ಏಳು ರಾಷ್ಟ್ರೀಯ ಪಕ್ಷಗಳು ₹ 593 ಕೋಟಿ ಮೊತ್ತವನ್ನು ದೇಣಿಗೆ ಮೂಲಕ ಸಂಗ್ರಹಿಸಿದ್ದು, 2019-20 ರಲ್ಲಿ ಸಂಗ್ರಹಿಸಿದಕ್ಕಿಂತ ಶೇ 41.53ರಷ್ಟು ಕಡಿಮೆ ಇದೆ.

ಕೇಂದ್ರ ಚುನಾವಣಾ ಆಯೋಗಕ್ಕೆ ಸಲ್ಲಿಸಿದ ವರದಿಯಲ್ಲಿ ಈ ಮಾಹಿತಿ ಇದ್ದು, ಇತ್ತೀಚಿನ ಮಾಹಿತಿ ಪ್ರಕಾರ ಸಿಪಿಐ ಹೊರತು ಪಡಿಸಿ ಇತರೆ ರಾಷ್ಟೀಯ ಪಕ್ಷಗಳ ದೇಣಿಗೆ ಸಂಗ್ರಹದಲ್ಲಿ ಗಣೀನಿಯ ಇಳಿಕೆಯಾಗಿದೆ.

ಆದರೆ ಈ ವರದಿಯಲ್ಲಿ ಆದಾಯದ ಮೂಲ ಮತ್ತು ಪಕ್ಷದ ಕೊಡುಗೆ ಬಗ್ಗೆ ಮಾಹಿತಿ ಇಲ್ಲ.

ಕೋವಿಡ್ -19 ಸಾಂಕ್ರಾಮಿಕ ಮತ್ತು ನಂತರದ ಆರ್ಥಿಕ ಬಿಕ್ಕಟ್ಟು ದೊಡ್ಡ ಕೊಡುಗೆಗಳ ಕುಸಿತಕ್ಕೆ ಕಾರಣ ಎನ್ನುತ್ತಾರೆ ಪಕ್ಷದ ನಾಯಕರು. 2020-21ರಲ್ಲಿ ಬಿಜೆಪಿ ₹ 477.54 ಕೋಟಿ ಸಂಗ್ರಹಿಸಿದೆ. 2019-20ರಲ್ಲಿ ₹787.7 ಕೋಟಿ, 2018-19ರಲ್ಲಿ ₹742 ಕೋಟಿ ಸಂಗ್ರಹಿಸಿತ್ತು.

ವರ್ಷದ ಲೆಕ್ಕ ಪರಿಶೋಧನಾ ವರದಿ ಮತ್ತು ಪಕ್ಷದ ಆದಾಯ ಸಂಪೂರ್ಣ ಇನ್ನೂ ತಿಳಿದು ಬಂದಿಲ್ಲ. ಪ್ರಮುಖ ದಾನಿಗಳಲ್ಲಿ ಕೇಂದ್ರ ಸಚಿವ ರಾಜೀವ್‌ ಚಂದ್ರಶೇಖರ್‌ ಅವರಿಗೆ ಸೇರಿದ ಜುಪಿಟರ್‌ ಕ್ಯಾಪಿಟಲ್‌ ಲಿಮಿಟೆಡ್‌ ಸಹ ಒಂದು.

₹ 20 ಸಾವಿರಕ್ಕಿಂತ ಹೆಚ್ಚಿನ ದೇಣಿಗೆ ಸಂಗ್ರಹದಲ್ಲಿ ಕಾಂಗ್ರೆಸ್‌ ಪಕ್ಷವು ₹ 74.50 ಕೋಟಿ ಸಂಗ್ರಹಿಸಿದೆ. 2019-20 ಮತ್ತು 2018-19ರಲ್ಲಿ ಕ್ರಮವಾಗಿ ₹ 139.01 ಕೋಟಿ ಮತ್ತು ₹ 146 ಕೋಟಿ ಸಂಗ್ರಹಿಸಿದೆ. ಲೆಕ್ಕ ಪರಿಶೋಧನಾ ವರದಿ ಪ್ರಕಾರ ದೇಣಿಗೆ, ಅನುದಾನ ಮತ್ತು ಇತರ ಕೊಡುಗೆ ಮೂಲಕ ₹95.42 ಕೋಟಿ ಆದಾಯ ಬಂದಿದೆ. ಪಕ್ಷಕ್ಕೆ ಕೊಡುಗೆ ನೀಡಿದವರಲ್ಲಿ ಕರ್ನಾಟಕ ನಾಯಕರಾದ ಡಿ.ಕೆ.ಶಿವಕುಮಾರ್, ಸಿದ್ದರಾಮಯ್ಯ, ಎಂಬಿ.ಪಾಟೀಲ್, ಜಿ.ಪರಮೇಶ್ವರ್, ಪ್ರಿಯಾಂಕ ಖರ್ಗೆ, ದಿನೇಶ್ ಗುಂಡೂರಾವ್‌, ಕೆ.ಜೆ.ಜಾರ್ಜ್‌ ಪ್ರಮುಖರು.

ಎನ್‌ಸಿಪಿ ಆದಾಯದಲ್ಲೂ ಸಾಕಷ್ಟು ಇಳಿಕೆಯಾಗಿದೆ. 2019-20ರಲ್ಲಿ ₹ 59.94 ಕೋಟಿ, 2020-21ರಲ್ಲಿ ₹ 26.26 ಕೋಟಿಗೆ ಇಳಿದಿದೆ. ಕಳೆದ ವರ್ಷ ₹ 19.69 ಕೋಟಿ ಸಂಗ್ರಹಿಸಿದ್ದ ಸಿಪಿಎಂ, ಈ ವರ್ಷ ₹ 12.69 ಕೋಟಿಗೆ ಸೀಮಿತವಾಗಿದೆ.

ತೃಣಮೂಲ ಕಾಂಗ್ರೆಸ್ ದೇಣಿಗೆಯಲ್ಲಿ ₹ 8.08 ಕೋಟಿಯಿಂದ ₹42.51 ಲಕ್ಷಕ್ಕೆ ಕುಸಿತ ಕಂಡಿದೆ. ಮುಖ್ಯವಾಗಿ ಪಕ್ಷದ ವರಿಷ್ಠೆ ಮತ್ತು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ₹25 ಲಕ್ಷ ದೇಣಿಗೆ ಮೇಲೆ ನಡೆಯುತ್ತಿದೆ. ₹ 20 ಸಾವಿರಕ್ಕಿಂತ ಹೆಚ್ಚಿನ ಮೊತ್ತದ ದೇಣಿಗೆಯನ್ನು ಸ್ವೀಕರಿಸಿಲ್ಲ ಎಂದು ಬಿಎಸ್‌ಪಿ ತಿಳಿಸಿದೆ. ಕಾನರಾಡ್‌ ಸಂಗ್ಮಾ ನೇತೃತ್ವದ ಎನ್‌ಪಿಪಿ ₹1.74 ಕೋಟಿಗೆ ಬದಲಾಗಿ ₹ 59.51 ಲಕ್ಷ ಸ್ವೀಕರಿಸಿದೆ. ಸಿಪಿಐ ಪಕ್ಷದಲ್ಲಿ ಮಾತ್ರ ಏರಿಕೆ ಕಂಡಿದ್ದು, ₹ 129 ಕೋಟಿಯಿಂದ ₹ 149 ಕೋಟಿಗೆ ಏರಿಕೆಯಾಗಿದೆ.

ಸಿಪಿಐ(ಎಂ) ಮತ್ತು ಸಿಪಿಐಗೆ ನೀಡಿದ ಕೊಡುಗೆಗಳು ಅದರ ನಾಯಕರಾದ ಪ್ರಧಾನ ಕಾರ್ಯದರ್ಶಿ ಸೀತಾರಾಮ್ ಯೆಚೂರಿ ಮತ್ತು ಡಿ ರಾಜಾ ಅವರಿಂದ ಪಕ್ಷದ ಲೆವಿ ರೂಪದಲ್ಲಿ ಬಂದಿದೆ.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries