ಬದಿಯಡ್ಕ: ದೇವಸ್ಥಾನಗಳು ಅಭಿವೃದ್ಧಿಯನ್ನು ಹೊಂದಿದಾಗ ನಾಡಿಗೇ ಒಳಿತಾಗುತ್ತದೆ. ದೇಶಾದ್ಯಂತ ಪಾಳುಬಿದ್ದಂತಹ ಅನೇಕ ಪುರಾತನ ಕ್ಷೇತ್ರಗಳಲ್ಲಿ ಇಂದು ಪೂಜಾಕೈಂಕರ್ಯಗಳು ಮತ್ತೆ ಪ್ರಾರಂಭಗೊಂಡು ನಾಡಿನ ಕ್ಷೇಮಾಭಿವೃದ್ಧಿಗೆ ಕಾರಣವಾಗಿದೆ. ಊರು ಪ್ರಗತಿಯನ್ನು ಕಾಣಬೇಕಾದರೆ ಅಲ್ಲಿನ ಕ್ಷೇತ್ರಗಳ ಸಾನ್ನಿಧ್ಯ ಶಕ್ತಿಯು ಬಲವಾಗಿರವೇಕು. ಜನರು ಸಂಘಟಿತರಾದಾಗ ನೆನೆದ ಕಾರ್ಯಗಳೆಲ್ಲವೂ ಅತಿಶೀಘ್ರದಲ್ಲಿ ಕೈಗೂಡಲಿದೆ ಎಂದು ಧಾರ್ಮಿಕ ಮುಂದಾಳು ಕೆ.ಎನ್.ವೆಂಕಟ್ರಮಣ ಹೊಳ್ಳ ಕಾಸರಗೋಡು ಅಭಿಪ್ರಾಯಪಟ್ಟರು.
ಆಲಂಕೂಡ್ಲು ಶ್ರೀ ಮಹಾಲಿಂಗೇಶ್ವರ ಕ್ಷೇತ್ರದಲ್ಲಿ ನಡೆದ ಮಹಾಸಭೆಯಲ್ಲಿ ಜೀರ್ಣೋದ್ಧಾರ ಕಾರ್ಯದ ವಿನಂತಿ ಪತ್ರವನ್ನು ಬಿಡುಗಡೆಗೊಳಿಸಿ ಅವರು ಮಾತನಾಡಿದರು. ಇದೇ ಸಂದರ್ಭದಲ್ಲಿ ಜೀರ್ಣೋದ್ದಾರ ಸಮಿತಿ ರೂಪೀಕರಣ ನಡೆಯಿತು. ಕ್ಷೇತ್ರ ಮೊಕ್ತೇಸರ ಪಿ.ಎಸ್.ಪುಣ್ಚಿತ್ತಾಯ ಅಧ್ಯಕ್ಷತೆ ವಹಿಸಿದ್ದರು. ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷರಾಗಿ ಉದ್ಯಮಿ ಬಿ.ವಸಂತ ಪೈ ಬದಿಯಡ್ಕ, ಕಾರ್ಯಾಧ್ಯಕ್ಷರಾಗಿ ಸೀತಾರಾಮ ರಾವ್ ಪಿಲಿಕೂಡ್ಲು, ಪ್ರಧಾನಕಾರ್ಯದರ್ಶಿಯಾಗಿ ಪಿ.ಆರ್.ಸುನಿಲ್ ಅವರನ್ನು ಆರಿಸಲಾಯಿತು. ರಕ್ಷಾಧಿಕಾರಿಗಳಾಗಿ ಕೆ.ಎನ್.ವೆಂಕಟ್ರಮಣ ಹೊಳ್ಳ, ನಿವೃತ್ತ ತಹಶೀಲ್ದಾರ್ ಪುರುಷೋತ್ತಮನ್ ಎಂಬಿವರನ್ನು ಆರಿಸಲಾಯಿತು. ಅಲ್ಲದೆ ಸಿ.ಎಚ್.ವಿಜಯನ್ ನಾಯರ್, ಗೋಪಾಲಚಾರಿ, ಸೀತಾರತ್ನ ಕರೋಡಿ, ಕೃಷ್ಣ ಮಾಳಂಗೈ, ವೆಂಕಟ್ರಮಣ ಕೆದಿಲಾಯ, ರವಿಶಂಕರ ಪುಣ್ಚಿತ್ತಾಯ, ನಾರಾಯಣ ಕಾಲನಿ, ಕೃಷ್ಣೋಜಿ ಮಾಸ್ತರ್, ಗೋಪಾಲಕೃಷ್ಣ ಭಟ್ ಐಎಎಸ್(ಉಪಾಧ್ಯಕ್ಷರು), ಕೃಷ್ಣರಾಜ್ ಪುಣ್ಚಿತ್ತಾಯ, ಶಶಿಧರ ನಾಯರ್, ಉಣ್ಣಿಕೃಷ್ಣನ್ ಸಿ, ದಿನೇಶ್ ಚಾಮುಂಡಿಮೂಲೆ, ರವಿ ಚಂದ್ರನ್ ಪಾರ, ಜಯಚಂದ್ರನ್ ಬಾಲಡ್ಕ(ಜತೆ ಕಾರ್ಯದರ್ಶಿಗಳು), ರಾಮಚಂದ್ರ ವೋರ್ಕೂಡ್ಲು, ಸೇಥುನಾಥ್ ಚಂದ್ರಂಪಾರ (ಕೋಶಾಧಿಕಾರಿ), 21 ಮಂದಿ ನಿರ್ವಾಹಕ ಸಮಿತಿ ಸಹಿತ 101 ಸದಸ್ಯರ ಸಮಿತಿ ರಚಿಸಲಾಯಿತು.




.jpg)
