HEALTH TIPS

ಕುಳೂರು ಶಾಲೆಯಲ್ಲಿ ವಾಚನ ವಾರಚರಣೆಯ ಉದ್ಘಾಟನೆ

           ಮಂಜೇಶ್ವರ : ಕೇರಳ ರಾಜ್ಯಾದ್ಯಂತ ಪುಸ್ತಕ ಓದುವಿಕೆಗೆ ಪ್ರೇರಣೆ ನೀಡಿ, ಅಸಂಖ್ಯಾತ ಗ್ರಂಥಾಲಯದ ಸ್ಥಾಪನೆಗೆ ಕಾರಣಕರ್ತರಾದ, ಗ್ರಂಥ ಶಾಲಾ ಸ್ಥಾಪಕ ಪಿ. ಎನ್. ಪಣಿಕ್ಕರ್ ರವರ ಚರಮ ದಿನವಾದ ಜೂನ್ 19 ಕೇರಳದೆಲ್ಲೆಡೆ ವಾಚನಾ ದಿನವಾಗಿ ಆಚರಿಸುತ್ತಿದ್ದು, ಇದರಂಗವಾಗಿ ಕುಳೂರು ಶಾಲೆಯಲ್ಲಿ ವಾಚನ ವಾರಾಚರಣೆಯ ಉದ್ಘಾಟನಾ ಸಮಾರಂಭ ನಡೆಯಿತು.


               ವಾಚನಾ ವಾರಾಚರಣೆಯ ಉದ್ಘಾಟನೆಯನ್ನು ಸ್ಥಳೀಯ ಪ್ರತಿಭೆ, ಕೇರಳದಲ್ಲಿ ಎಂ. ಎ ಪದವಿಯನ್ನು ಪಡೆದು, ಎಂ. ಫಿಲ್ ಮಾಡುವುದರೊಂದಿಗೆ ರಾಷ್ಟಪತಿ ಭವನದಲ್ಲಿ ವಿಶೇಷ ಗೌರವವನ್ನು ಪಡೆದ ಮೀನಾಕ್ಷಿ ಬೊಡ್ಡೋಡಿ ನೆರವೇರಿಸಿದರು. ಅಧ್ಯಕ್ಷತೆಯನ್ನು ರಕ್ಷಕ-ಶಿಕ್ಷಕ ಸಂಘದ ಅಧ್ಯಕ್ಷ ಸತೀಶ್ ಎಲಿಯಾಣ ವಹಿಸಿದ್ದರು. ಕಾರ್ಯಕ್ರಮದಲ್ಲಿ ಮಾತೆಯರ ರಕ್ಷಕ ಶಿಕ್ಷಕ ಸಂಘದ ಉಪಾಧ್ಯಕ್ಷೆ ಪ್ರೇಮ ಜಿ ಶೆಟ್ಟಿ, ಹಳೆ ವಿದ್ಯಾರ್ಥಿ ಸಂಘದ ಪ್ರಧಾನ ಕಾರ್ಯದರ್ಶಿ ಜಯರಾಜ್ ಶೆಟ್ಟಿ ಚಾರ್ಲ ಉಪಸ್ಥಿತರಿದ್ದರು. ವಾಚನಾ ವಾರಚರಣೆಯ ಬಗ್ಗೆ ಶಾಲಾ ಮುಖ್ಯೋಪಾಧ್ಯಾಯ ಸತ್ಯನಾರಾಯಣ ಶರ್ಮ ಅವರು ಮಾಹಿತಿ ನೀಡಿದರು. ಬಳಿಕ ಶಾಲಾ ಗ್ರಂಥಾಲಯದ ಪುಸ್ತಕ ಪ್ರದರ್ಶನ ನಡೆಸಲಾಯಿತು. ಜೊತೆಗೆ ಎಲ್ಲಾ ತರಗತಿಗಳಲ್ಲಿ ಗ್ರಂಥಾಲಯವನ್ನು ಅನಾವರಣ ಮಾಡಲಾಯಿತು. ಶಾಲಾ ಶಿಕ್ಷಕ ಜಯ ಪ್ರಶಾಂತ್ ಪಾಲೆಂಗ್ರಿ ಸ್ವಾಗತಿಸಿ, ಶಿಕ್ಷಕಿ ಸೌಮ್ಯ ಪಿ ವಂದಿಸಿದರು.



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries