ಬದಿಯಡ್ಕ: ಪ್ರಾಮಾಣಿಕ ವ್ಯಕ್ತಿಗಳು ಗ್ರಂಥಪಾಲಕರಾಗಿ ದೊರಕಿದಾಗ ಗ್ರಂಥಾಲಯಗಳು ಉನ್ನತಮಟ್ಟಕ್ಕೇರುತ್ತದೆ. ಏತಡ್ಕದ ಈ ಪುಸ್ತಕ ಭಂಡಾರವನ್ನು ಸಮರ್ಪಕವಾಗಿ ಮುನ್ನಡೆಸುವಲ್ಲಿ ಗೋಪಾಲಕೃಷ್ಣ ಕೇಕುಣ್ಣಾಯರ ಶ್ರಮವಿದೆ. ಅಂತಹ ವ್ಯಕ್ತಿಗಳು ದೊರಕುವುದು ಊರಿನ ಜನರ ಸೌಭಾಗ್ಯ ಎಂದು ತಾಲೂಕು ಲೈಬ್ರರಿ ಕೌನ್ಸಿಲ್ ಅಧ್ಯಕ್ಷ ಇ ಜನಾರ್ಧನನ್ ಹೇಳಿದರು.
ಕುಂಬ್ಡಾಜೆ ಗಾಮ ಸೇವಾ ಸಂಘ ಗ್ರಂಥಾಲಯದ ವತಿಯಿಂದ ಭಾನುವಾರ ನಿಕಟಪೂರ್ವ ಗ್ರಂಥಪಾಲಕ ವೈ ಗೋಪಾಲಕೃಷ್ಣ ಕೇಕುಣ್ಣಾಯ ಅವರಿಗೆ ಅವರ ಮನೆ ಭಾಗ್ಯಲಕ್ಷ್ಮೀ ನಿವಾಸದಲ್ಲಿ ನಡೆದ ಸನ್ಮಾನ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಅವರು ಮಾತನಾಡಿದರು.
ಕುಂಬ್ಡಾಜೆ ಗ್ರಾಮ ಸೇವಾ ಸಂಘದ ಅಧ್ಯಕ್ಷ ವೈ ವಿ ಸುಬ್ರಹ್ಮಣ್ಯ ಭಟ್ ಅಧ್ಯಕ್ಷತೆ ವಹಿಸಿ ಗೋಪಾಲಕೃಷ್ಣ ಕೇಕುಣ್ಣಾಯ ಹಾಗೂ ಇಂದಿರಾ ದಂಪತಿಗಳಿಗೆ ಶಾಲುಹೊದೆಸಿ ಸನ್ಮಾನಿಸಿದರು. ವೈ ಕೆ ಗೋವಿಂದ ಭಟ್ ಅಭಿನಂದನಾ ಭಾಷಣ ಮಾಡಿದರು. ಕೆ. ಸುಬ್ರಹ್ಮಣ್ಯ ಭಟ್ ಸನ್ಮಾನ ಪತ್ರ ವಾಚಿಸಿದರು. ಕೆ ನರಸಿಂಹ ಭಟ್, ಡಾ. ರಾಜೇಶ್ವರೀ ಜಿ. ಭಟ್ ಸನ್ಮಾನಿತರ ಕುರಿತು ಮಾತನಾಡಿದರು. ಕಾರ್ತಿಕ್ ಕುಮಾರ್ ಕಡೆಕಲ್ಲು ಪ್ರಾರ್ಥಿಸಿದರು. ವೈ ಕೆ ಗಣಪತಿ ಭಟ್ ಸ್ವಾಗತಿಸಿ, ಡಾ. ವೇಣುಗೋಪಾಲ್ ಕೆ ವಂದಿಸಿದರು. ಈ ಸಂದರ್ಭದಲ್ಲಿ ಕಾರ್ಯಕಾರೀ ಸಮಿತಿ ಸದಸ್ಯರು, ಗ್ರಂಥಾಲಯದ ಹಿತಚಿಂತಕರು, ಊರ ಮಹನೀಯರು, ಮಹಿಳೆಯರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.




.jpg)
