ಮಂಜೇಶ್ವರ: ಕಳಿಯೂರು ಸಂತ ಜೋಸೆಫರ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವಾಚಾನಾ ಸಪ್ತಾಹದ ಉದ್ಘಾಟನಾ ಸಮಾರಂಭ ಶಾಲಾ ಸಭಾಂಗಣದಲ್ಲಿ ಸೋಮವಾರ ನಡೆಯಿತು.
ಜಿ.ಪಂ. ಸ್ಥಾಯೀ ಸಮಿತಿಯ ಮಾಜೀ ಅಧ್ಯಕ್ಷ ಹರ್ಷಾದ್ ವರ್ಕಾಡಿ ಔಪಚಾರಿಕವಾಗಿ ವಾಚನಾ ಸಪ್ತಾಹವನ್ನು ಉದ್ಘಾಟಿಸಿ ಮಾತನಾಡಿ, ಓದುವಿಕೆಯಿಂದ ಜ್ಞಾಪಕ ಶಕ್ತಿ ವೃದ್ಧಿಯಾಗುತ್ತದೆ. ಪಠ್ಯದ ಓದುವಿಕೆಯ ಜೊತೆಗೆ ಕಥೆ, ಕವಿತೆ, ಪತ್ರಿಕೆ ಮುಂತಾದುವುಗಳನ್ನು ಓದುವ ಹವ್ಯಾಸ ಬೆಳೆಸಬೇಕು ಎಂಬ ಸಂದೇಶ ನೀಡಿದರು. ದೇಶ ಸುತ್ತಿದ ಅನುಭವ ಒಂದೊಂದು ಪುಸ್ತಕಗಳಿಂದಲೂ ಲಭ್ಯವಾಗುತ್ತದೆ ಎಂಬ ಹಿರಿಯರ ಮಾತು ಸಾರ್ವಕಾಲಿಕವಾದುದು. ಮನಸ್ಸನ್ನು ಅರಳಿಸುವ ಉತ್ತಮ ಪುಸ್ತಕಗಳನ್ನು ಓದುವ ರೀತಿಯನ್ನು ರೂಢಿಸಬೇಕು ಎಂದರು.
ಶಾಲಾ ಸಂಚಾಲಕ ಪಾವ್ಲ್ ಸಿಕ್ವೆರಾ ಅಧ್ಯಕ್ಷತೆ ವಹಿಸಿ ಮಾತನಾಡಿ, ಇಂದಿನ ವೇಗದ ಬದುಕಿನ ಮಧ್ಯೆ ದಿನದ ಒಂದರ್ಧ ಗಂಟೆಯನ್ನಾದರೂ ಉತ್ತಮ ಬರಹಗಳ ಓದುವಿಕೆಗೆ ಮೀಸಲಿಟ್ಟರೆ ಬದುಕು ಸುಂದರವಾಗುತ್ತದೆ ಎಂದರು.
ಪಿ.ಟಿ.ಎ ಅಧ್ಯಕ್ಷ ಸುಧಾಕರ್, ಮಾತೃಸಂಘದ ಅಧ್ಯಕ್ಷೆ ಗ್ರೆಟ್ಟಾ ಡಿಸೋಜ, ಕವಿಯತ್ರಿ ಸËಮ್ಯರಾಜೇಶ್, ಶಾಲಾ ಮುಖ್ಯೋಪದ್ಯಾಯಿನಿ ಪುಷ್ಪಾವತಿ ಉಪಸ್ಥಿತರಿದ್ದರು. ಮುಖ್ಯೋಪಾಧ್ಯಾನಿ ಪುಷ್ಪಾವತಿ ಸ್ವಾಗತಿಸಿ, ಶಿಕ್ಷಕಿ ಫಿಲೋಮಿನ ವಂದಿಸಿದರು. ಶಿಕ್ಷಕ ಮೊಹಮ್ಮದ್ ಬಶೀರ್ ನಿರೂಪಿಸಿದರು.




.jpg)
.jpg)
.jpg)
