ಕುಂಬಳೆ: ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಹಾಗು ರಾಹುಲ್ ಗಾಂಧಿ ವಿರುದ್ಧ ಸುಳ್ಳು ಕೇಸು ಮುಖಾಂತರ ಇ ಡಿ ಸಂಸ್ಥೆಯ ದುರ್ಬಳಕೆ ಹಾಗೂ ಪೋಲೀಸ್ ದೌರ್ಜನ್ಯ ಖಂಡಿಸಿ ಮೋದಿ ಸರ್ಕಾರದ ವಿರುದ್ಧ ಕುಂಬಳೆಯಲ್ಲಿ ಬ್ಲಾಕ್ ಕಾಂಗ್ರೆಸ್ ವತಿಯಿಂದ ಅಂಚೆ ಕಛೇರಿ ಮಾರ್ಚ್ ನಡೆಯಿತು.
ಕೇರಳ ಪ್ರದೇಶ ಕಾಂಗ್ರೆಸ್ ಸಮಿತಿಯ ಕಾರ್ಯಕಾರಿ ಸದಸ್ಯ ಪಿ ಎ ಅಶ್ರಫ್ ಆಲಿ ಉದ್ಘಾಟಿಸಿದರು. ಕುಂಬಳೆ ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಲಕ್ಷ್ಮಣ್ ಪ್ರಭು ಕುಂಬಳೆ ಅ|ಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಕಾಂಗ್ರೆಸ್ ಸಮಿತಿ ಸದಸ್ಯ ಮಂಜುನಾಥ ಆಳ್ವ ಪ್ರಸ್ತುತ ರಾಜಕೀಯ ಆಗುಹೋಗುಗಳ ಬಗ್ಗೆ ಮಾತನಾಡಿದರು.
ಮೊದಲಿಗೆ ಬ್ಲಾಕ್ ಕಾಂಗ್ರೆಸ್ ಕಚೇರಿಯಿಂದ ಅಂಚೆ ಕಚೇರಿಯ ವರೆಗೆ ಮೆರವಣಿಗೆ ನಡೆಸಲಾಯಿತು. ಬ್ಲಾಕ್ ಉಪಾಧ್ಯಕ್ಷ ಅಬ್ದುಲ್ ರೆಹಮಾನ್ ಪೆರ್ಲ, ಬ್ಲಾಕ್ ಕಾರ್ಯದರ್ಶಿಗಳಾದ ಬಶೀರ್ ಅಹಮ್ಮದ್ ಸಿದ್ದಿಕಿ, ನಾಸರ್ ಮೊಗ್ರಾಲ್, ಬಾಲಕೃಷ್ಣ ಶೆಟ್ಟಿ ಕಿದೂರು, ಚಂದ್ರ ಕಾಜೂರು, ಕಮರುದ್ದೀನ್ ಪಡಲಡ್ಕ, ವಿಲ್ಫ್ರೆಡ್ ಡಿಸೋಜ. ಮಂಡಲ ಕಾಂಗ್ರೆಸ್ ಅಧ್ಯಕ್ಷರುಗಳಾದ ಸುಲೇಮಾನ್ ಊಜಂಪದವು, ಮೋಹನ್ ರೈ ಪೈವಳಿಕೆ, ಮತ್ಸ್ಯ ಕಾರ್ಮಿಕ ಕಾಂಗ್ರೆಸ್ ಜಿಲ್ಲಾ ಕಾರ್ಯದರ್ಶಿ ದಾಸನ್ ಕಡಪ್ಪರ, ಯುವ ಕಾಂಗ್ರೆಸ್ಸ್ ಎಣ್ಮಕಜೆ ಮಂಡಲ ಅಧ್ಯಕ್ಷ ನಿಸಾರ್ ಬಣ್ಪುತ್ತಡ್ಕ, ಯುವ ಕಾಂಗ್ರಸ್ ನಾಯಕ ವೃಥ್ವಿ ರಾಜ್ ಶೆಟ್ಟಿ ಉಜಾರ್, ಪಂಚಾಯತಿ ಸದಸ್ಯರುಗಳಾದ ರವಿರಾಜ ಕುಂಬಳೆ, ಕೇಶವ ಎಸ್ ಆರ್ ಪುತ್ತಿಗೆ, ನಾಯಕರುಗಳಾದ ರಾಮ ಕಾರ್ಲೆ, ಹ್ಯಾರಿಸ್ ಒಳಮೊಗರು, ಶ್ರೀಧರ ರೈ, ನಾರಾಯಣ ಕಿಧೂರ್, ಶ್ರೀನಿವಾಸ ಶೆಣೈ, ಪೂವ ಶೇಣಿ, ದಯಾನಂದ ಬಾಡೂರು, ಸಚ್ಚಿದಾನಂದ ರೈ ಕಳ್ಳಿಗೆ, ನವೀನ್ ನಾಯಕ್ ಪೆರ್ಲ, ಅಶ್ರಫ್ ಕಳನಗರ, ಯೂಸಫ್ ಕೋಟೆ, ಅಬೂಬಕ್ಕರ್ ಮುಗು, ಸೆಬಾಸ್ಟಿಯನ್ ನಾರಾಯಣ ಮಂಗಲ, ಮೊಹಮ್ಮದ್ ಅಬ್ಕೋ, ಥೋಮಸ್ ಕೃಷ್ಣನಗರ, ಹರೀಶ ಮುಳಿಯಡ್ಕ, ಪುರುಷೋತ್ತಮ್ ನಾಯ್ಕಾಪು, ಡೋಲ್ಪಿ ಡಿಸೋಜಾ, ಪದ್ಮನಾಭ ಕಟ್ಟೆ ಮುಂತಾದವರು ನೇತೃತ್ವ ವಹಿಸಿದ್ದರು.
ಬ್ಲಾಕ್ ಕಾಂಗ್ರೆಸ್ ಹಿರಿಯ ಉಪಾಧ್ಯಕ್ಷ ರವೀಂದ್ರನಾಥ ನಾಯಕ್ ಶೇಣಿ ಸ್ವಾಗತಿಸಿ, ಕುಂಬಳೆ ಮಂಡಲ ಕಾಂಗ್ರೆಸ್ ಅಧ್ಯಕ್ಷ ರವಿ ಪೂಜಾರಿ ವಂದಿಸಿದರು.




.jpg)
.jpg)
