HEALTH TIPS

ವಿವಾಹದ ಪೋಟೋದಲ್ಲಿ ನಗವಿರಲಿಲ್ಲ; ಎಂಟು ವರ್ಷಗಳ ನಂತರ ದಂಪತಿಗಳಿಂದ ಮರು ವಿವಾಹ!!

                 ವಿವಾಹದ  ದಿನ ಸುಂದರವಾಗಿ ಕಾಣಬೇಕೆಂಬುದು ಪ್ರತಿಯೊಬ್ಬ ವಧು-ವರನ  ಆಸೆ. ಪ್ರತಿಯೊಬ್ಬರೂ ತಮ್ಮ ಜೀವನದ ಅತ್ಯಂತ ದೊಡ್ಡ ದಿನವನ್ನು ಖುಷಿಯಾಗಿ ಆಚರಿಸಲು ಪ್ರಯತ್ನಿಸುತ್ತಾರೆ. ಆದರೆ ಅದಿಲ್ಲದೇ ವಿವಾಹವಾಗಿದ್ದರೆ? ಮನಸ್ಸಿನಲ್ಲಿ ಸದಾ ದುಃಖವಾಗಿಯೇ ಉಳಿಯುತ್ತದೆ. ತಿರುವನಂತಪುರದ ವೆಂಜಾರಮ್ಮೂಡು ಮೂಲದ ದಂಪತಿ ತಮ್ಮ ಪತ್ನಿಯ ದುಃಖ ಅರಿತು ಹೊಸ ವೆಡ್ಡಿಂಗ್ ಫೆÇೀಟೋಶೂಟ್ ಮಾಡಿದ್ದಾರೆ.

                    ಅನೀಶ್-ರಜಿತಾ ದಂಪತಿ ಎಂಟು ವರ್ಷಗಳ ನಂತರ ಮತ್ತೆ ತಮ್ಮ ಮದುವೆಯ ದಿನದಂದು ತಮ್ಮ ಫೆÇೀಟೋಶೂಟ್ ಆಚರಿಸಿಕೊಂಡರು. ಅವರ ಏಳು ವರ್ಷದ ಮಗಳು ಅಮ್ಮು ಕೂಡ ಸಾಕ್ಷಿಯಾಗಿದ್ದಳು. ಮದುವೆಯ ಆಲ್ಬಂ ಮತ್ತು ವೀಡಿಯೊವನ್ನು ಪತಿ ಮರು ರಚಿಸಿದ್ದು, ಪತ್ನಿಗೆ ಸಪ್ರ್ರೈಸ್ ನೀಡಿದ್ದಾರೆ.

                     ಅನೀಶ್ ಮತ್ತು ರಜಿತಾ ಡಿಸೆಂಬರ್ 29, 2014 ರಂದು ವಿವಾಹವಾಗಿದ್ದರು. ವಿವಾಹದ ವೇಳೆ ಅನೀಶ್ ಖಾಸಗಿ ಕಂಪನಿಯೊಂದರಲ್ಲಿ ಉದ್ಯೋಗಿಯಾಗಿದ್ದರು. ರಜಿತಾ ಎಂಕಾಂ ವಿದ್ಯಾರ್ಥಿನಿ. ಪ್ರಣಯ ವಿವಾಹವಾದ ಕಾರಣ ಮನೆಯವರು ವಿರೋಧಿಸಿದ್ದರು. ಇಬ್ಬರೂ ಓಡಿಹೋಗಲು ಸಿದ್ಧರಿರಲಿಲ್ಲ. ಕೊನೆಗೆ ಅನೀಶ್ ಮನೆಯವರು ರಜಿತಾಳ ಮನೆಗೆ ವಿವಾಹ ಪ್ರಸ್ತಾಪದೊಂದಿಗೆ ಬಂದರು. ರಜಿತಾ ಮನೆಯವರು ಮದುವೆ ಬೇಡ, ಬೇಕಾದರೆ ಬಂದು ಕರೆದುಕೊಂಡು ಹೋಗು ಎಂದು ಸಲಹೆ ನೀಡಿದರು. ಮರುದಿನ ಅನೀಶ್ ರಜಿತಾಳನ್ನು ಕುಟುಂಬ ಸಮೇತ ಕರೆದುಕೊಂಡು ಹೋಗಿ ಸಂಬಂಧಿಕರ ಸಮ್ಮುಖದಲ್ಲಿ ವಿವಾಹವಾದ.  ಆದರೆ ತನ್ನ ಮನೆಯವರು ಯಾರೊಬ್ಬರೂ ವಿವಾಹಕ್ಕೆ ಬಾರದಿರುವುದು ರಜಿತಾಗೆ ಬೇಸರ ತಂದಿತ್ತು. ಪ್ರತಿ ಬಾರಿ ಫೆÇೀಟೋಗೆ ಪೆÇೀಸ್ ಕೊಟ್ಟಾಗಲೂ ಕಣ್ಣಲ್ಲಿ ನೀರು ತುಂಬಿಕೊಂಡು ನಿಂತಿದ್ದಳು. ವಿವಾಹದ ಆಲ್ಬಂನಲ್ಲಿರುವ ಎಲ್ಲಾ ಚಿತ್ರಗಳಲ್ಲಿ ಇದನ್ನು ಕಾಣಬಹುದು.

                  ನಂತರ, ಅವರ ಜೀವನದಲ್ಲಿ ಅನೇಕ ಬದಲಾವಣೆಗಳು ಸಂಭವಿಸಿದರೂ, ಅಂದಿನ ಮದುವೆಯ ಆಲ್ಬಂ ದುಃಖಕರವಾಗಿ ಉಳಿಯಿತು. ಯಾವುದೇ ವಿವಾಹ ಸಮಾರಂಭಕ್ಕೆ  ಹೋದಾಗಲೂ ರಜಿತಾ ಮುಖದಲ್ಲಿ ಆ ದುಃಖದ ಛಾಯೆ ಇತ್ತು. ಇದನ್ನು ನೋಡಿದ ಅನೀಶ್ ಕೂಡ ಬೇಸರಗೊಂಡು ತನ್ನ ಎಂಟನೇ ವಿವಾಹ ವಾರ್ಷಿಕೋತ್ಸವಕ್ಕೆ ಸಪ್ರ್ರೈಸ್ ಪ್ಲಾನ್ ಮಾಡಿದ್ದ. ಅಚ್ಚರಿಯ ಮದುವೆ ಫೆÇೀಟೋಶೂಟ್ ಬಿಟ್ಟರೆ ಬೇರೇನೂ ಅಲ್ಲ.

                   ವಿವಾಹದ ಪಟ್ಟೆ  ಸೀರೆಯಲ್ಲಿ ತನ್ನ ಸ್ನೇಹಿತೆ ಮೀರಾ ಜೊತೆ ಮೇಕಪ್ ಮಾಡಲು ಕೈಗೆತ್ತಿಕೊಂಡಾಗ ಕ್ಯಾಮರಾ, ವಿಡಿಯೋಗ್ರಾಫರ್ ರೆಡಿಯಾಗಿರುವುದು ರಜಿತಾಗೆ ಗೊತ್ತಿರಲಿಲ್ಲ. ಎಲ್ಲಾ ಮೇಕಪ್ ಮುಗಿಸಿ ಹೊರಬಂದಾಗ ರಜಿತಾಗೆ ಇದು ಅರಿವಾಯಿತು. ಇದನ್ನು ಕಂಡ ರಜಿತಾ ಕಣ್ಣಲ್ಲಿ ನೀರು ತುಂಬಿಕೊಂಡಿತು ಎನ್ನುತ್ತಾರೆ ಅನೀಶ್. ಈ ವಿವಾಹ ಫೆÇೀಟೋಶೂಟ್ ಕ್ಷಣ ಕ್ಷಣಕ್ಕೂ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries