HEALTH TIPS

ಹಸಿವು ತಾಳಲಾರದೇ ಬೀದಿ ನಾಯಿಯನ್ನು ಕೊಂದು ತಿಂದ ಮತ್ತೊಂದು ಬೀದಿ ನಾಯಿ! ಬೆಚ್ಚಿಬಿದ್ದ ಸ್ಥಳೀಯರು

 ಕೊಚ್ಚಿ: ಹಸಿವು ತಾಳಲಾರದೇ ಬೀದಿ ನಾಯಿಯೊಂದು ಮತ್ತೊಂದು ಬೀದಿ ನಾಯಿಯನ್ನು ಕೊಂದು ತಿಂದಿರುವ ಆತಂಕಕಾರಿ ಘಟನೆ ಪೂಂಕುಳಂ ಪ್ರದೇಶದ ಹೋಲಿ ಕ್ರಾಸ್​ ಶಾಲೆಯ ಬಳಿ  (ಜೂ.8) ಬೆಳಗ್ಗೆ 9 ಗಂಟೆ ಸುಮಾರಿಗೆ ನಡೆದಿದೆ.

ಸ್ಥಳೀಯರು ಹೇಳುವ ಪ್ರಕಾರ ನಾಯಿಯು ರಸ್ತೆ ಬದಿ ನಡೆದು ಹೋಗುವಾಗ ಅದೇ ಹಾದಿಯಲ್ಲಿ ನಡೆದು ಬರುತ್ತಿದ್ದ ಇನ್ನೊಂದು ನಾಯಿಯ ಕುತ್ತಿಗೆ ದಿಢೀರನೇ ಬಾಯಿ ಹಾಕಿ, ತೀವ್ರ ದಾಳಿ ನಡೆಸಿದೆ.

ಈ ವೇಳೆ ನಾಯಿಯ ದಾಳಿಯನ್ನು ತಡೆಯಲು ಸ್ಥಳೀಯರು ಯತ್ನಿಸಿದಾದರೂ ಸಾಧ್ಯವಾಗಲಿಲ್ಲ.

ಅಂತಿಮವಾಗಿ ಸತ್ತ ನಾಯಿಯ ಕಿವಿಯನ್ನು ಸಂಪೂರ್ಣ ಕಚ್ಚಿ ತಿಂದ ನಾಯಿ, ಅದರ ಕುತ್ತಿಗೆಗೆ ಬಾಯಿ ಹಾಕಿ ತಿನ್ನುವಾಗ ಎಲ್ಲ ಜನರು ಅದನ್ನು ಅಲ್ಲಿಂದ ಓಡಿಸಿದರು. ಘಟನೆ ವೇಳೆ ಹತ್ತಿರದ ಬಸ್​ ನಿಲ್ದಾಣದಲ್ಲಿ ನಿಂತಿದ್ದ ಜನರು ಸುಮ್ಮನೇ ನೋಡುತ್ತಾ ನಿಂತಿದ್ದರು ಎಂದು ತಿಳಿದುಬಂದಿದೆ. ಈ ಘಟನೆ ನೋಡಿದ ಸ್ಥಳೀಯ ಜನರಲ್ಲಿ ಆತಂಕದ ವಾತಾವರಣ ಮನೆ ಮಾಡಿದೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries