HEALTH TIPS

ದೈಹಿಕ-ಮಾನಸಿಕ ಆರೋಗ್ಯದ ಸದೃಢತೆಗೆ ಯೋಗ ಅವಶ್ಯಕ: ಶೇಂತಾರು ನಾರಾಯಣ ಭಟ್

              ಕುಂಬಳೆ: ಪ್ರತಿಯೊಬ್ಬ ವ್ಯಕ್ತಿಯ ದೈಹಿಕ ಮಾನಸಿಕ ಆರೋಗ್ಯದ ಸದೃಢತೆಗೆ ಯೋಗ ಅವಶ್ಯಕವಾಗಿದ್ದು, ಪ್ರಸ್ತುತ ದಿನಗಳಲ್ಲಿ ತಾಳ್ಮೆ,ಸಹನೆ ಮತ್ತು ಧನಾತ್ಮಕ ಚಿಂತನೆಗೆ ಯೋಗ-ಧ್ಯಾನ ಅತೀ ಮುಖ್ಯವಾಗಿದೆ. ವಿದ್ಯಾರ್ಥಿಗಳು ಎಳೆಯ ವಯಸ್ಸಿನಲ್ಲೇ ಯೋಗ ಅಭ್ಯಸಿಸುವುದು ಅವಶ್ಯಕ ಎಂದು ಶೇಡಿಕಾವು ಶ್ರೀಕೃಷ್ಣ ವಿದ್ಯಾಲಯದ ಸಂಯೋಜಕÀ  ಶೇಂತಾರು ನಾರಾಯಣ ಭಟ್ ಹೇಳಿದರು.

                 ಶ್ರೀಕೃಷ್ಣ ವಿದ್ಯಾಲಯ ಶೇಡಿಕಾವು ಇಲ್ಲಿ ನಡೆದ 'ವಿಶ್ವ ಯೋಗ ದಿನಾಚರಣೆ-2022' ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.


          ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿದ್ದ ಶಾಲೆಯ ಸಹಕಾರ್ಯದರ್ಶಿ  ವೇಣುಗೋಪಾಲ ಶೆಟ್ಟಿ ಮಾತನಾಡಿ, ಪ್ರಸ್ತುತ ಬದುಕಿನಲ್ಲಿ ಎದುರಾಗುವ ಶಾರೀರಿಕ-ಮನೋ ಸಮಸ್ಯೆಗಳನ್ನು ಹತೋಟಿಯಲ್ಲಿರಿಸಲು ಮತ್ತು ಅನಾರೋಗ್ಯದಿಂದ ದೂರವಿರಲು ಯೋಗ ಸಹಕಾರಿಯಾಗಿದೆ ಹಾಗೂ ವಿದ್ಯಾರ್ಥಿಗಳಲ್ಲಿ ಶ್ರದ್ಧೆ,ವಿನಯತೆ,ಗುರಿ ಸಾಧನೆಗೆ ಯೋಗ ಅವಶ್ಯಕ ಎಂದು ವಿದ್ಯಾರ್ಥಿಗಳನ್ನುದ್ದೇಶಿಸಿ ಅವರು ಮಾತನಾಡಿದರು.


                ಕಾರ್ಯಕ್ರಮದಲ್ಲಿ  ಶಾಲಾ ಮುಖ್ಯೋಪಾಧ್ಯಾಯಿನಿ ಸುನೀತ ಸಹಿತ ಹಲವರು ಉಪಸ್ಥಿತರಿದ್ದರು. ಶಿಕ್ಷಕಿ  ಜಯಶ್ರೀ ಸ್ವಾಗತಿಸಿ, ಜಯಶ್ರೀ ವಂದಿಸಿದರು.ತೇಜಸ್ವಿನಿ. ಕೆ ಕಾರ್ಯಕ್ರಮ ನಿರೂಪಿಸಿದರು. ಶಾಲಾ ವಿದ್ಯಾರ್ಥಿಗಳಿಂದ ಯೋಗಾಸನ ಕಾರ್ಯಕ್ರಮ ನಡೆಯಿತು.



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries