ಉಪ್ಪಳ: ಮಂಜೇಶ್ವರ ತಾಲೂಕು ಲೈಬ್ರರಿ ಕೌನ್ಸಿಲ್ ನೇತೃತ್ವದಲ್ಲಿ, ಕೇರಳ ಗ್ರಂಥಾಲಯ ಚಳವಳಿಯಲ್ಲಿ ಸಕ್ರಿಯರಾಗಿರುವ ನಿವೃತ್ತ ಶಿಕ್ಷಕ, ಸಂಘಟಕ, ಸಾಂಸ್ಕøತಿಕ, ಸಾಹಿತ್ತಿಕ ಮುಖಂಡ ಎಸ್.ನಾರಾಯಣ ಭಟ್ ಅವರಿಗೆ ಜೂ.26 ರಂದು ಬೆಳಿಗ್ಗೆ 9.30 ರಿಂದ ಪೈವಳಿಕೆ ನಗರ ಸರ್ಕಾರಿ ಹೈಯರ್ ಸೆಕೆಂಡರಿ ಶಾಲೆಯಲ್ಲಿ ಅಭಿನಂದನಾ ಸಮಾರಂಭ ನಡೆಯಲಿದೆ.
ಕಾರ್ಯಕ್ರಮದ ಅಂಗವಾಗಿ ಬೆಳಿಗ್ಗೆ 9.30 ರಿಂದ ಹೆದ್ದಾರಿ ಶಾಲಾ ಮಿತ್ರಮಂಡ|ಳಿ ಗ್ರಂಥಾಲಯದ ಬಾಲ ವೇದಿಕೆಯ ಮಕ್ಕಳಿಂದ ಸಾಂಸ್ಕøತಿಕ ಕಾರ್ಯಕ್ರಮ ನಡೆಯಲಿದೆ. ಬಳಿಕ 10 ಕ್ಕೆ ನಡೆಯಲಿರುವ ಅ|ಭಿನಂದನಾ ಸಮಾರಂಭದಲ್ಲಿ ಮಾಜಿ ಶಾಸಕ, ಜಿಲ್ಲಾ ಲೈಬ್ರರಿ ಕೌನ್ಸಿಲ್ ಅಧ್ಯಕ್ಷ ಕೆ.ವಿ. ಕುಂಞÂ ರಾಮನ್ ಅ|ಧ್ಯಕ್ಷತೆ ವಹಿಸುವರು. ಉದುಮ ಶಾಸಕ ನ್ಯಾಯವಾದಿ ಸಿ.ಎಚ್.ಕುಂಞಂಬು ಉದ್ಘಾಟಿಸುವರು. ಮಂಜೇಶ್ವರ ಶಾಸಕ ಎಕೆಎಂ ಅಶ್ರಫ್ ಸನ್ಮಾನಿಸುವರು. ಪೈವಳಿಕೆ ಗ್ರಾ.ಪಂ. ಅ|ಧ್ಯಕ್ಷೆ ಜಯಂತಿ ಅಭಿನಂದನಾ ಗ್ರಂಥ ಬಿಡುಗಡೆಗೊಳಿಸುವರು. ರಾಜ್ಯ ಲೈಬ್ರರಿ ಕೌನ್ಸಿಲ್ ಕಾರ್ಯಕಾರಿ ಸಮಿತಿ ಸದಸ್ಯ ಪಿ.ವಿ.ಕೆ.ಪನಯಾಲ್, ಹಿರಿಯ ವೈದ್ಯ ಡಾ.ಬಿ.ಎಸ್.ರಾವ್, ರಾಜ್ಯ ಲೈಬ್ರರಿ ಕೌನ್ಸಿಲ್ ಮಾಜಿ ಕಾರ್ಯದರ್ಶಿ ಅಪ್ಪು ಕುಟ್ಟನ್ ಅಭಿನಂದನಾ ಭಾಷಣ ಮಾಡುವರು. ಮೀಂಜ ಗ್ರಾ.ಪಂ.ಅ|ಧ್ಯಕ್ಷೆ ಸುಂದರಿ ಆರ್ ಶೆಟ್ಟಿ, ಎಣ್ಮಕಜೆ ಗ್ರಾ.ಪಂ.ಅ|ಧ್ಯಕ್ಷ ಸೋಮಶೇಖರ ಜೆ.ಎಸ್, ಪೈವಳಿಕೆ ಗ್ರಾ.ಪಂ. ಉಪಾಧ್ಯಕ್ಷೆ ಪುಷ್ಪಲಕ್ಷ್ಮೀ ಜಿ.ಪಂ.ಸದಸ್ಯ ಜಮೀಲಾ ಸಿದ್ದೀಕ್, ಪೈವಳಿಕೆ ಗ್ರಾ.ಪಂ. ಸ್ಥಾಯೀ ಸಮಿತಿ ಅಧ್ಯಕ್ಷ ಝುಲ್ಪಿಕರ್ ಅಲಿ ಕಯ್ಯಾರು, ಉಪಜಿಲ್ಲಾ ಶಿಕ್ಷಣಾಧಿಕಾರಿ ದಿನೇಶ್ ವಿ, ಕೇರಳ ತುಳು ಅಕಾಡೆಮಿ ಅ|ಧ್ಯಕ್ಷ ಎಂ.ಉಮೇಶ ಸಾಲ್ಯಾನ್ ಕಾಸರಗೋಡು, ಸಾಹಿತಿ ರಾಧಾಕೃಷ್ಣ ಕೆ ಉಳಿಯತ್ತಡ್ಕ, ಗೋವಿಂದ ಪೈ ಸ್ಮಾರಕ ಟ್ರಸ್ಟ್ ಕಾರ್ಯದರ್ಶಿ ಜಯಾನಂದ ಕೆ.ಆರ್, ಪಾರ್ತಿಸುಬ್ಬ ಯಕ್ಷಗಾನ ಕಲಾಕ್ಷೇತ್ರದ ಅಧ್ಯಕ್ಷ ಶಂಕರ ರೈ ಮಾಸ್ತರ್ ಎಂ, ಜಿಲ್ಲಾ ಲೈಬ್ರರಿ ಕೌನ್ಸಿಲ್ ಕಾರ್ಯಕಾರಿ ಸದಸ್ಯ ಕೆ.ಟಿ.ವಿಜಯನ್, ಸಾಹಿತಿ ರಾಘವನ್ ಬೆಳ್ಳಿಪ್ಪಾಡಿ, ಹೆದ್ದಾರಿ ಶಾಲಾ ಪ್ರಬಂಧಕ ರಾಜೇಶ್ ಎನ್, ತಾಲೂಕು ಲೈಬ್ರರಿ ಕೌನ್ಸಿಲ್ ಜೊತೆ ಕಾರ್ಯದರ್ಶಿ ಶ್ರೀಕುಮಾರಿ ಟೀಚರ್ ಶುಭಾಶಂಸನೆಗೈಯ್ಯುವರು. ಎಸ್.ನಾರಾಯಣ ಭಟ್, ತಾಲೂಕು ಲೈಬ್‍ರಿ ಕೌನ್ಸಿಲ್ ಅಧ್ಯಕ್ಷ ಅಬ್ದುಲ್ಲ ಕೆ., ಉಪಾಧ್ಯಕ್ಷ ಶಾಮ ಭಟ್ ಮಾಸ್ತರ್, ಕಾರ್ಯದರ್ಶಿ ಡಿ.ಕಮಲಾಕ್ಷ, ರಾಜ್ಯ ಲೈಬ್ರರಿ ಕೌನ್ಸಿಲ್ ಸದಸ್ಯ ಪಿ.ಕೆ.ಅಹಮ್ಮದ್ ಹುಸೈನ್ ಮೊದಲಾದವರು ನೇತೃತ್ವ ವಹಿಸುವರು. ಅಪರಾಹ್ನ 2 ರ ಬಳಿಕ ಬಾಲವೇದಿ ಮಕ್ಕಳಿಂದ ಸಾಂಸ್ಕøತಿಕ ಕಾರ್ಯಕ್ರಮ ಮುಂದುವರಿಯಲಿದೆ.


