ಬದಿಯಡ್ಕ: ಯೋಗ ಕಲಿಕೆ ಮಕ್ಕಳಿಗೆ ದೈಹಿಕ ಬೆಳವಣಿಗೆ ಮತ್ತು ಮಾನಸಿಕ ಸದೃಢತೆಗೆ ಕಾರಣವಾಗುತ್ತದೆ ಎಂದು ಬದಿಯಡ್ಕ ಗ್ರಾಮ ಪಂಚಾಯತಿ ಉಪಾಧ್ಯಕ್ಷ ಅಬ್ಬಾಸ್ ಅವರು ನುಡಿದರು.
ಸರ್ಕಾರಿ ಆಯುರ್ವೇದ ಆಸ್ಪತ್ರೆ, ಆಯುಷ್ ಇಲಾಖೆ, ಸರ್ಕಾರಿ ಪ್ರೌಢ ಶಾಲೆ ಪೆರಡಾಲ ಸಂಯುಕ್ತವಾಗಿ ನಡೆಸಿದ ಯೋಗ ದಿನಾಚರಣೆಯ ಉದ್ಘಾಟನೆ ನೆರವೇರಿಸಿ ಅವರು ಮಾತನಾಡುತ್ತಿದ್ದರು.
ಗ್ರಾ.ಪಂ. ಸದಸ್ಯ ಬಾಲಕೃಷ್ಣ ಶೆಟ್ಟಿ ಅಧ್ಯಕ್ಷತೆ ವಹಿಸಿ ಮಾತನಾಡಿ ಜಗತ್ತಿಗೆ ಭಾರತದ ಕೊಡುಗೆಯಾದ ಯೋಗ ಬಗ್ಗೆ ಪ್ರತಿಯೊಬ್ಬರೂ ತಿಳಿದು ಕಲಿತು ಅನುಸರಿಸಿ ಆರೋಗ್ಯದ ಜೀವನ ಸಾಗಿಸಬೇಕು ಎಂದು ಹೇಳಿದರು. ಗ್ರಾ.ಪಂ. ಸದಸ್ಯ ಈಶ್ವರ್ ಮಾಸ್ತರ್ ಶುಭಾಶಂಸನೆಗೈದರು. ಎಕ್ಸಯ್ಸ್ ಇಲಾಖೆಯ ಮೋಹನನ್ ಮತ್ತು ಪ್ರಿವೇಂಟಿವ್ ಅಧಿಕಾರಿ ಜನಾರ್ಧನನ್ ಯೋಗ ದಿನಾಚರಣೆಯ ಮಹತ್ವ ತಿಳಿಸಿದರು. ಶಾಲಾ ಮುಖ್ಯ ಶಿಕ್ಷಕ ರಾಜಗೋಪಾಲ್ ಅವರು ಪ್ರಾಸ್ತಾವಿಕ ಮಾತುಗಳೊಂದಿಗೆ ಸ್ವಾಗತಿಸಿದರು. ಶಿಕ್ಷಕಿ ದಿವ್ಯಗಂಗಾ ವಂದಿಸಿದರು. ದೈಹಿಕ ಶಿಕ್ಷಣ ಶಿಕ್ಷಕ ಗೋಪಾಲಕೃಷ್ಣ ಭಟ್ ಕಾರ್ಯಕ್ರಮ ನಿರೂಪಿಸಿದರು. ಆಯುಷ್ ಇಲಾಖೆಯ ಆದಿತ್ಯ ರಾವ್ ಅವರು ಯೋಗಾಸನ ಹಾಗೂ ಪ್ರಾಣಾಯಾಮ ಬಗ್ಗೆ ಮಕ್ಕಳಿಗೆ ಪ್ರಾತ್ಯಕ್ಷಿಕೆ ಮತ್ತು ವಿವರವಾದ ತರಗತಿ ನೀಡಿದರು. ಶ್ರೀಧರನ್, ಜಯಲತಾ, ಬಿನೋಯ್, ಸುರೇಖಾ, ಸುಮಯ್ಯ ನೇತೃತ್ವ ನೀಡಿದರು.

.jpg)
.jpg)
