ಕಾಸರಗೋಡು: ವಿಶ್ವ ಆಹಾರ ಸಪ್ತಾಹದ ನಿಮಿತ್ತ ಆಹಾರ ಸುರಕ್ಷಾ ಇಲಾಖೆ ವತಿಯಿಂದ 'ಉತ್ತಮ ಆರೋಗ್ಯ, ಉತ್ತಮ ಆಹಾರ'ಕುರಿತು ವಿಚಾರ ಸಂಕಿರಣ ಕಾಸರಗೋಡಿನಲ್ಲಿ ನಡೆಯಿತು. ಎ.ಡಿ.ಎಂ. ಎ.ಕೆ. ರಮೇಂದ್ರನ್ ವಿಚಾರ ಸಂಕಿರಣ ಉದ್ಘಾಟಿಸಿದರು. ಆಹಾರ ಭದ್ರತೆ ವಿಭಾಗದ ಸಹಾಯಕ ಆಯುಕ್ತ ಜಾನ್ ವಿಜಯಕುಮಾರ್ ಪಿ.ಕೆ. ಅಧ್ಯಕ್ಷತೆ ವಹಿಸಿದ್ದರು.
ಈ ಸಂದರ್ಭ ಆಹಾರ ಭದ್ರತಾ ಇಲಾಖೆ ಕಾಸರಗೋಡು, ರಾಷ್ಟ್ರೀಯ ಆಹಾರ ಭದ್ರತಾ ಪ್ರಾಧಿಕಾರ ಪ್ರಕಟಿಸಿರುವ ಮಲಯಾಳ ಮತ್ತು ಕನ್ನಡ ಪುಸ್ತಕಗಳ ಬಿಡುಗಡೆ ಹೈಜೀನಿಕ್ ರೇಟಿಂಗ್ ಪ್ರಮಾಣಪತ್ರದ ವಿತರಣೆ ನಡೆಯಿತು. ನೋಡಲ್ ಅಧಿಕಾರಿ ಹೋಮಾಂಬಿಕಾ ಮೋಡರೇಟರ್ ಆಗಿ ಸಹಕರಿಸಿದರು. ಜಿಲ್ಲಾ ಉಪ ವೈದ್ಯಾಧಿಕಾರಿ ಡಾ. ಎ.ಟಿ.ಮನೋಜ್, ಜಿಲ್ಲಾ ಪೂರೈಕೆ ಅಧಿಕಾರಿ ಕೆ.ಎನ್.ಬಿಂದು, ವಿ.ಕೆ.ಅಮರನಾಥ್. ವಿಜೇಶ್, ಡಾ. ಪಿ.ಕೆ. ಪ್ರಮೋದ್, ಕೆ.ಕೆ. ಹೆನಾ, ಮುಸ್ತಫಾ, ಸುಜಯನ್, ಶ್ರೀನಿವಾಸನ್, ಅಭಿಜಿತ್, ಮನ್ಸೂರ್, ರಾಜು ಮತ್ತು ಜಲಜಾ ಉಪಸ್ಥಿತರಿದ್ದರು.




