HEALTH TIPS

ಮೌಲ್ಯಮಾಪನಕ್ಕೆ ಹಾಜರಾತಿಯನ್ನು ಪರಿಗಣಿಸಬೇಡಿ: ಪರೀಕ್ಷೆಯ ನಂತರ ಒಂದು ತಿಂಗಳೊಳಗೆ ಫಲಿತಾಂಶಗಳ ಪ್ರಕಟಣೆಗೆ ಸೂಚನೆ: ವಿಶ್ವವಿದ್ಯಾನಿಲಯ ಪರೀಕ್ಷೆಗಳ ನಿರ್ವಹಣೆಯಲ್ಲಿ ಸಮಗ್ರ ಬದಲಾವಣೆಗೆ ಶಿಫಾರಸು


        ತಿರುವನಂತಪುರ: ಫಲಿತಾಂಶ ಬಂದ 15 ದಿನದೊಳಗೆ ಪ್ರಮಾಣ ಪತ್ರ ನೀಡುವುದು ಸೇರಿದಂತೆ ರಾಜ್ಯದಲ್ಲಿನ ವಿಶ್ವವಿದ್ಯಾಲಯಗಳ ಪರೀಕ್ಷೆಗಳ ನಿರ್ವಹಣೆಯಲ್ಲಿ ಸಂಪೂರ್ಣ ಬದಲಾವಣೆಗೆ ಶಿಫಾರಸು ಮಾಡಲಾಗಿದೆ.  ಎಂಜಿ ವಿಶ್ವವಿದ್ಯಾಲಯದ ಪ್ರೊ ವಿಸಿ. ಸಿ.ಟಿ.ಅರವಿಂದ್ ಕುಮಾರ್ ಅಧ್ಯಕ್ಷತೆಯ ತಜ್ಞರ ಸಮಿತಿ ಈ ಶಿಫಾರಸು ಮಾಡಿದೆ.  ತಜ್ಞರ ಸಮಿತಿ ತನ್ನ ವರದಿಯನ್ನು ಸರಕಾರಕ್ಕೆ ಸಲ್ಲಿಸಿದೆ.

        ಪರೀಕ್ಷೆಯ ಬಳಿಕ ದೀರ್ಘ ಕಾಯುವಿಕೆಯ ನಂತರ ಫಲಿತಾಂಶ ಪ್ರಕಟವಾಗುತ್ತಿರುವುದು ಭಾರೀ ಸಮಸ್ಯೆಗೆ ಕಾರಣವಾಗುತ್ತಿದೆ ಎಂದು ವಿದ್ಯಾರ್ಥಿಗಳಿಂದ ವ್ಯಾಪಕ ದೂರುಗಳು ಬಂದಿದ್ದವು.  ಈ ಹಿನ್ನೆಲೆಯಲ್ಲಿ ಸರ್ಕಾರ ಅರವಿಂದ್ ಕುಮಾರ್ ನೇತೃತ್ವದ ತಂಡವನ್ನು ಅಧ್ಯಯನಕ್ಕೆ ನೇಮಿಸಿತ್ತು.  ಪರೀಕ್ಷೆಯ ಫಲಿತಾಂಶವನ್ನು ಪರೀಕ್ಷೆ ಮುಗಿದು  30 ದಿನಗಳಲ್ಲಿ ಪ್ರಕಟಿಸಬೇಕು ಮತ್ತು ನಂತರ 15 ದಿನಗಳಲ್ಲಿ ವಿದ್ಯಾರ್ಥಿಗಳಿಗೆ ಪ್ರಮಾಣಪತ್ರವನ್ನು ನೀಡಬೇಕು ಎಂದು ಶಿಫಾರಸಿನಲ್ಲಿ ತಿಳಿಸಲಾಗಿದೆ.

      ವಿಶ್ವವಿದ್ಯಾನಿಲಯಗಳು ಏಕೀಕೃತ ಗ್ರೇಡಿಂಗ್ ಮಾದರಿಯನ್ನು ಜಾರಿಗೆ ತರಬೇಕು.  ಮೌಲ್ಯಮಾಪನಕ್ಕೆ ಹಾಜರಾತಿಯೇ ಮಾನದಂಡವಾಗಬಾರದು ಎಂದೂ ಶಿಫಾರಸಿನಲ್ಲಿ ಹೇಳಲಾಗಿದೆ.  ಮೌಲ್ಯಮಾಪನದಲ್ಲಿ ಅಂಕಗಳನ್ನು ಪರಿಗಣಿಸುವುದರ ವಿರುದ್ಧ ವ್ಯಾಪಕ ದೂರುಗಳು ಬಂದಿದ್ದವು.

       ಇದರ ಬೆನ್ನಿಗೇ, ಒಂದು ತಿಂಗಳೊಳಗೆ ಫಲಿತಾಂಶ ಪ್ರಕಟಿಸುವ ಪ್ರಕ್ರಿಯೆ ಆರಂಭವಾಗಲಿದೆ ಎಂದು ಉನ್ನತ ಶಿಕ್ಷಣ ಸಚಿವೆ ಆರ್ ಬಿಂದು ತಿಳಿಸಿದ್ದಾರೆ.

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries