ಮಂಜೇಶ್ವರ: 'ಓದು ಆತ್ಮಜ್ಞಾನ,ಆತ್ಮ ಸ್ಥೈರ್ಯ, ಅರಿವು,ಆನಂದವನ್ನು ನೀಡುತ್ತದೆ. ಆದರೆ ಪ್ರಸ್ತುತ ಶಿಕ್ಷಣದ ವಾಣಿಜ್ಯೀಕರಣವು ಸಾಹಿತ್ಯಿಕ ಓದಿಗೆ ಕುತ್ತನ್ನು ತಂದೊಡ್ಡುತ್ತಿವೆ. ಇಂತಹ ಆತಂಕದ ಸಂದರ್ಭದಲ್ಲಿಯೂ ಕೇರಳದಾದ್ಯಂತ ಪಿ.ಎನ್.ಪಣಿಕ್ಕರ್ ರವರ ನೆನಪಿನಲ್ಲಿ ಆಚರಿಸಲಾಗುತ್ತಿರುವ ವಾಚನಾಚರಣೆಯು ಮಕ್ಕಳಲ್ಲಿ ವಾಚನಾಭಿರುಚಿಯನ್ನು ಬೆಳೆಸಲು ಸಹಕಾರಿ.ಕನ್ನಡದಲ್ಲಿ ಗಳಗನಾಥರು ಇದೇ ಕೈಂಕರ್ಯವನ್ನು ಕೈಗೊಂಡಿದ್ದರು' ಎಂದು ಕರ್ನಾಟಕ ಪುಸ್ತಕ ಪ್ರಾಧಿಕಾರ ದ ಸದಸ್ಯರೂ ಆಳ್ವಾಸ್ ಪದವಿಪೂರ್ವ ಕಾಲೇಜಿನ ಉಪನ್ಯಾಸಕರೂ ಆಗಿರುವ ಟಿ.ಎ.ಎನ್.ಖಂಡಿಗೆ ನುಡಿದರು.
ಅವರು ಜಿ.ವಿ.ಎಚ್.ಎಸ್.ಎಸ್.ಕುಂಜತ್ತೂರು ಶಾಲೆಯಲ್ಲಿ ವಾಚನಾ ದಿನವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.
ಸಮಾರಂಭದ ಅಧ್ಯಕ್ಷತೆಯನ್ನು ಶಾಲಾ ಮುಖ್ಯೋಪಾಧ್ಯಾಯ ಬಾಲಕೃಷ್ಣ. ಜಿ.ವಹಿಸಿದ್ದರು. ಹಿರಿಯ ಶಿಕ್ಷಕಿ ಲಲಿತಾ ಶುಭಾಶಂಸನೆಗೈದರು.ಶಿಕ್ಷಕಿ ಅಮಿತಾ ಸ್ವಾಗತಿಸಿ, ಶಿಕ್ಷಕಿ ಸುಚೇತಾ ವಂದಿಸಿದರು. ಶಿಕ್ಷಕ-ರಕ್ಷಕ ಸಂಘದ ಉಪಾಧ್ಯಕ್ಷ ಕೆ.ಎಚ್.ಮಹಮ್ಮದ್ ಉಪಸ್ಥಿತರಿದ್ದರು. ಶಿಕ್ಷಕ ದಿವಾಕರ ಬಲ್ಲಾಲ್ ನಿರೂಪಿಸಿದರು. ಶಾಲಾ ವಿದ್ಯಾರ್ಥಿನಿಯರು ಪ್ರಾರ್ಥನೆಗೈದರು.




.jpg)
