ಕೋಝಿಕ್ಕೋಡ್: ಕೇಸರಿ ಸ್ನೇಹಬೋಧಿ ಸಾಂಸ್ಕøತಿಕ ಸಮ್ಮೇಳನದಲ್ಲಿ ಮಾಜಿ ಶಾಸಕ ಕೆ.ಎನ್.ಎ.ಖಾದರ್ ಭಾಗವಹಿಸಿದ್ದರು. ಅಂತರಾಷ್ಟ್ರೀಯ ಯೋಗ ದಿನಾಚರಣೆ ಅಂಗವಾಗಿ ಕೋಝಿಕ್ಕೋಡ್ ನಲ್ಲಿ ಕೇಸರಿ ಮಾಧ್ಯಮ ಅಧ್ಯಯನ ಕೇಂದ್ರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಅತಿಥಿಯಾಗಿ ಭಾಗವಹಿಸಿದ್ದ ಮಾಜಿ ಶಾಸಕ ಕೆ.ಎನ್.ಎ.ಖಾದರ್ ಅವರನ್ನು ಪ್ರಜ್ಞಾ ಪ್ರವಾಹ ಜೆ ನಂದಕುಮಾರ್ ಅವರು ಶಾಲು ಹೊದೆಸಿ ಬರಮಾಡಿಕೊಂಡರು.
ಕೆ.ಎನ್.ಎ.ಖಾದರ್ ಮಾತನಾಡಿ, ಬುದ್ಧ ಯಾವಾಗಲೂ ನಮಗೆ ಆದರ್ಶದ ಪ್ರತೀಕ. ಬುದ್ದನ ಹಾದಿ ಕಠಿಣವಾಗಿದ್ದರೂ ಅದರ ಅನುಸರಣೆ ನೆಮ್ಮದಿ ನೀಡುತ್ತದೆ ಎಂದವರು ಈ ಸಂದರ್ಭ ತಿಳಿಸಿದರು. ಕೇಸರಿ ಭವನದ ಆವರಣದಲ್ಲಿ ಧ್ಯಾನಸ್ಥ ಬುದ್ದ ಪ್ರತಿಮೆಯನ್ನು ಅನಾವರಣಗೊಳಿಸಿ ಅವರು ಮಾತನಾಡಿದರು.
ಈ ಸಂದರ್ಭದಲ್ಲಿ ನಟ ಹಾಗೂ ನಿರ್ದೇಶಕ ರಂಜಿ ಪಣಿಕ್ಕರ್ ಅವರು ಉಪಸ್ಥಿತರಿದ್ದರು. ಪಿ.ಕೆ.ಶ್ರೀಕುಮಾರ್ ಅಧ್ಯಕ್ಷತೆ ವಹಿಸಿದ್ದರು. ಕಲಾವಿದ ಮದನ್ ಮತ್ತು ಶಿಲ್ಪಿ ಸುನಿಲ್ ತೇಂಜಿಪಾಲಂ ಸಭೆಯನ್ನುದ್ದೇಶಿಸಿ ಮಾತನಾಡಿದರು. ಡಾ.ಎನ್.ಆರ್. ಮಧು ಸ್ವಾಗತಿಸಿ, ಸಿ.ಎಂ.ರಾಮಚಂದ್ರನ್ ವಂದಿಸಿದರು.





