ತಿರುವನಂತಪುರ: ಕೇರಳವನ್ನು ಉತ್ತಮ ಗುಣಮಟ್ಟದ ಜ್ಞಾನ ಸಮಾಜವನ್ನಾಗಿ ರೂಪಿಸಲು ಸರ್ಕಾರ ಜಾರಿಗೆ ತಂದಿರುವ ಸಾಮಾನ್ಯ ಶಿಕ್ಷಣ ನೀತಿಗೆ ಪ್ಲಸ್ ಟು ಪರೀಕ್ಷಾ ಫಲಿತಾಂಶ ಉತ್ತಮ ಉದಾಹರಣೆ ಎಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಹೇಳಿದ್ದಾರೆ. ಪರೀಕ್ಷೆಗೆ ಹಾಜರಾದ 3.5 ಲಕ್ಷ ರೆಗ್ಯುಲರ್ ವಿದ್ಯಾರ್ಥಿಗಳ ಪೈಕಿ ಶೇ.83.87ರಷ್ಟು ವಿದ್ಯಾರ್ಥಿಗಳು ಉನ್ನತ ವ್ಯಾಸಂಗಕ್ಕೆ ಅರ್ಹತೆ ಪಡೆದಿರುವುದು ಹೆಮ್ಮೆಯ ಸಾಧನೆಯಾಗಿದೆ. ವಿಎಚ್‍ಎಸ್‍ಸಿ ವಿಭಾಗದಲ್ಲಿ ಉತ್ತೀರ್ಣರಾದ ಶೇಕಡಾ 68.71.ಮಂದಿ. ಕೊರೋನಾ ಮಹಾಮಾರಿಯ ಸವಾಲುಗಳನ್ನು ಕಳೆದ ಶೈಕ್ಷಣಿಕ ವರ್ಷದಲ್ಲೂ ಅನುಭವಿಸಲಾಗಿತ್ತು. ಅವುಗಳನ್ನು ಮೆಟ್ಟಿ ನಿಂತು ಈ ಉನ್ನತ ಸಾಧನೆ ಮಾಡಿರುವುದು ಶ್ಲಾಘನೀಯ ಎಮದು ಮುಖ್ಯಮಂತ್ರಿ ಶ್ಲಾಘಿಸಿರುವರು.
ಈ ಮಹತ್ತರ ಸಾಧನೆಗೆ ಶ್ರಮಿಸಿದ ಶಿಕ್ಷಕರು, ಶಿಕ್ಷಣ ಇಲಾಖೆ ಹಾಗೂ ಪೋಷಕರಿಗೆ ಅಭಿನಂದನೆಗಳು. ಉನ್ನತ ವ್ಯಾಸಂಗಕ್ಕೆ ಅರ್ಹತೆ ಪಡೆದ ಎಲ್ಲಾ ಮಕ್ಕಳಿಗೆ ಶುಭಾಶಯಗಳು. ಅರ್ಹತೆ ಪಡೆಯಲು ವಿಫಲರಾದವರು ನಿರಾಶೆಗೊಳ್ಳದೆ ಮುಂದಿನ ಪರೀಕ್ಷೆಯಲ್ಲಿ ಮುನ್ನಡೆಯಲು ಅಗತ್ಯವಾದ ಪ್ರಯತ್ನಗಳನ್ನು ಮುಂದುವರಿಸಬೇಕು. ತನ್ನ ಹೃದಯದಾಳದಿಂದ ಶುಭ ಹಾರೈಸುತ್ತೇನೆ ಎಂದು ಮುಖ್ಯಮಂತ್ರಿ ಸಾಮಾಜಿಕ ಜಾಲತಾಣಗಳಲ್ಲಿ ಬರೆದುಕೊಂಡಿದ್ದಾರೆ.
2028 ಶಾಲೆಗಳಲ್ಲಿ ಒಟ್ಟು 3,61,901 ಮಂದಿ ವಿದ್ಯಾರ್ಥಿಗಳು ಹೈಯರ್ ಸೆಕೆಂಡರಿ ಪರೀಕ್ಷೆಗೆ ಹಾಜರಾಗಿದ್ದು ಅವರಲ್ಲಿ 3,02,865 ಮಂದಿ ವಿದ್ಯಾರ್ಥಿಗಳು ಉನ್ನತ ವ್ಯಾಸಂಗಕ್ಕೆ ಅರ್ಹತೆ ಪಡೆದಿದ್ದಾರೆ. ಈ ಬಾರಿಯೂ ಗ್ರೇಸ್ ಮಾರ್ಕ್ ಕೈಬಿಟ್ಟು 20 ದಿನಗಳಲ್ಲಿ ಟ್ಯಾಬ್ಯುಲೇಷನ್ ಮುಗಿಸಿ ಫಲಿತಾಂಶ ಪ್ರಕಟಿಸಲಾಗಿದೆ. ಪರೀಕ್ಷೆ ಬರೆದವರಲ್ಲಿ ಶೇ.89.29 ಬಾಲಕಿಯರು ಮತ್ತು ಶೇ.77.82 ಬಾಲಕರು ಉನ್ನತ ವ್ಯಾಸಂಗಕ್ಕೆ ಅರ್ಹತೆ ಪಡೆದಿದ್ದಾರೆ.





