ತಿರುವನಂತಪುರ: ರಾಜ್ಯದಲ್ಲಿ ನಿನ್ನೆ ಪ್ಲಸ್ ಟು ಪರೀಕ್ಷಾ ಫಲಿತಾಂಶಗಳು ಪ್ರಕಟಗೊಂಡ ಬೆನ್ನಲ್ಲೇ ಅನುತ್ತೀರ್ಣರಾದ ಬೇಗುದಿಯಿಂದ ಇಬ್ಬರು ವಿದ್ಯಾರ್ಥಿಗಳು ಆತ್ಮಹತ್ಯೆಗೈದ ಆಘಾತಕಾರಿ ಘಟನೆಗಳು ನಡೆದಿದೆ. ತ್ರಿಶೂರ್ ಹಾಗೂ ಆಲಪ್ಪುಳದಲ್ಲಿ ಈ ಆತ್ಮಹತ್ಯೆಗಳು ನಡೆದಿದ್ದು, ಇಬ್ಬರೂ ಬಾಲಕಿಯರು ಎಂಬುದೂ ಮಹತ್ತರವಾದುದು.
ಪ್ಲಸ್ ಟು ಪರೀಕ್ಷೆಯಲ್ಲಿ ಫೇಲ್ ಆಗಿದ್ದಕ್ಕೆ ಮನನೊಂದ ವಿದ್ಯಾರ್ಥಿನಿ ಇರಿಂಞಲಕುಡ ಮೂಲದ ದಿಲಿಶಾ (17) ಆತ್ಮಹತ್ಯೆಗೈದವಳು. ದಿಲಿಶಾ ಪ್ಲಸ್ ಟು ಪರೀಕ್ಷೆಯಲ್ಲಿ ಮೂರು ವಿಷಯಗಳಲ್ಲಿ ಅನುತ್ತೀರ್ಣರಾಗಿದ್ದರು.
ಮಧ್ಯಾಹ್ನ ಈ ಘಟನೆ ನಡೆದಿದೆ. ಪ್ಲಸ್ ಟು ಫಲಿತಾಂಶವನ್ನು ಪರಿಶೀಲಿಸಿದ ನಂತರ, ದಿಲಿಶಾ ಮನೆಗೆ ಬಂದು ತನ್ನ ಬೆಡ್ ರೂಂನಲ್ಲಿ ನೇಣು ಬಿಗಿದುಕೊಂಡಿದ್ದಾಳೆ. ದಿಲಿಶಾ ಅವರ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಇರಿಂಞಲಕುಡ ಜನರಲ್ ಆಸ್ಪತ್ರೆಗೆ ರವಾನಿಸಲಾಯಿತು.
ಮತ್ತೊಂದು ಘಟನೆಯಲ್ಲಿ ಆಲಪ್ಪುಳದ ರತೀಶ್ ಮತ್ತು ಅಂಬಿಲಿ ದಂಪತಿಯ ಪುತ್ರಿ ಆರತಿ (18) ಎಂದು ಗುರುತಿಸಲಾಗಿದೆ. ಹೈಯರ್ ಸೆಕೆಂಡರಿ ಫಲಿತಾಂಶ ಹೊರಬಿದ್ದ ಬೆನ್ನಲ್ಲೇ ಈ ಘಟನೆ ನಡೆದಿದೆ.
ಪರೀಕ್ಷೆಯ ಫಲಿತಾಂಶ ಬಂದಾಗ ರಸಾಯನಶಾಸ್ತ್ರ ಪರೀಕ್ಷೆಯಲ್ಲಿ ಅನುತ್ತೀರ್ಣಳಾಗಿದ್ದಳು. ಪುರಕ್ಕಾಡ್ ಎಸ್.ಎನ್.ಎಂ ಹೈಯರ್ ಸೆಕೆಂಡರಿ ಶಾಲೆಯ ವಿದ್ಯಾರ್ಥಿನಿಯಾಗಿದ್ದಳು. ವಿದ್ಯಾರ್ಥಿಯ ಮೃತದೇಹವನ್ನು ವೈದ್ಯಕೀಯ ಕಾಲೇಜು ಆಸ್ಪತ್ರೆ ಶವಾಗಾರದಲ್ಲಿ ಇರಿಸಲಾಗಿದೆ. ಮರಣೋತ್ತರ ಪರೀಕ್ಷೆ ಬಳಿಕ ಮೃತದೇಹವನ್ನು ಸಂಬಂಧಿಕರಿಗೆ ಹಸ್ತಾಂತರಿಸಲಾಗುವುದು. ಆರತಿಯ ಏಕೈಕ ಸಹೋದರಿ ಅರ್ಚಾ ಆರನೇ ತರಗತಿ ವಿದ್ಯಾರ್ಥಿನಿ.





