ಕಾಸರಗೋಡು: ಜಿಲ್ಲೆಯಲ್ಲಿ ಮುಂಗಾರು ಮಳೆಯಿಂದಾಗಿ ಜುಲೈ 8ರಿಂದ 12ರವರೆಗೆ 144.41 ಹೆಕ್ಟೇರ್ ಬೆಳೆ ನಾಶವಾಗಿದೆ. ಈ ಬಗ್ಗೆ ಮುಖ್ಯ ಕೃಷಿ ಅಧಿಕಾರಿ ಆರ್. ವೀಣಾರಾಣಿ ಮಾಹಿತಿ ನೀಡಿದರು. ಭಾರೀ ಗಾಳಿ ಮಳೆಗೆ 72 ರಬ್ಬರ್ ಮರಗಳು, 391 ತೆಂಗಿನಮರಗಳು, 1508 ಅಡಕೆ ಮರ, 3925 ಬಾಳೆ ಗಿಡಗಳು ನಾಶವಾಗಿವೆ. ರಬ್ಬರ್ (1.44 ಲಕ್ಷ), ತೆಂಗು (19.55 ಲಕ್ಷ), ಅಡಕೆ(4.52 ಲಕ್ಷ), ಬಾಳೆ (23.55 ಲಕ್ಷ) ನಾಶಗೊಂಡಿದೆ.
12 ರಬ್ಬರ್ ರೈತರಿಗೆ 0.26 ಹೆಕ್ಟೇರ್ ಬೆಳೆ ಹಾನಿಯಾಗಿದೆ. 98 ತೆಂಗು ರೈತರಿಗೆ 35.48 ಹೆಕ್ಟೇರ್ ಪ್ರದೇಶದಲ್ಲಿ ಬೆಳೆ ಹಾನಿಯಾಗಿದೆ. 149 ಅಡಕೆ ರೈತರಿಗೆ 94.80 ಹೆಕ್ಟೇರ್ ಪ್ರದೇಶದಲ್ಲಿ ಬೆಳೆ ಹಾನಿಯಾಗಿದೆ. 131 ರೈತರಿಗೆ 13.77 ಹೆಕ್ಟೇರ್ ಬಾಳೆ ಕೃಷಿ ನಾಶಗೊಂಡಿದೆ. ಕಾಞಂಗಾಡು ಬ್ಲಾಕ್ ಪಂಚಾಯಿತಿ ವ್ಯಾಪ್ತಿಯಲ್ಲಿ 22.41 ಲಕ್ಷ ರೂಪಾಯಿ ಬೆಳೆ , ಕಾರಡ್ಕ ಬ್ಲಾಕ್ ನಲ್ಲಿ 2.02 ಲಕ್ಷ ರೂ, ಕಾಸರಗೋಡು ಬ್ಲಾಕ್ ನಲ್ಲಿ 0.73 ಲಕ್ಷ ರೂ., ಮಂಜೇಶ್ವರಂ ಬ್ಲಾಕ್ ನಲ್ಲಿ 19.40 ಲಕ್ಷ ರೂ, ನೀಲೇಶ್ವರಂ ಬ್ಲಾಕ್ ನಲ್ಲಿ 3.44 ಲಕ್ಷ ಹಾಗೂ ಪರಪ್ಪ ಬ್ಲಾಕ್ ನಲ್ಲಿ 1.19 ಲಕ್ಷ ಹಾನಿಯಾಗಿದೆ ಎಂದು ಅಂದಾಜಿಸಲಾಗಿದೆ
ಕಾಞಂಗಾಡು ಬ್ಲಾಕ್ ಪಂಚಾಯತ್ ವ್ಯಾಪ್ತಿಯಲ್ಲಿ 1.66 ಹೆಕ್ಟೇರ್‍ಮ ಕಾರಡ್ಕ ಬ್ಲಾಕ್ ನಲ್ಲಿ 50.02 ಹೆಕ್ಟೇರ್, ಕಾಸರಗೋಡು ಬ್ಲಾಕ್ ನಲ್ಲಿ 0.17 ಹೆಕ್ಟೇರ್ ಹಾಗೂ ಮಂಜೇಶ್ವರಂ ಬ್ಲಾಕ್ ನಲ್ಲಿ 80 ಹೆಕ್ಟೇರ್ ಪ್ರದೇಶದಲ್ಲಿ ಬೆಳೆ ಹಾನಿಯಾಗಿದೆ. ನೀಲೇಶ್ವರಂ ಬ್ಲಾಕ್ ಪಂಚಾಯಿತಿಯಲ್ಲಿ 12.47 ಹೆಕ್ಟೇರ್ ಮತ್ತು ಪರಪ್ಪ ಬ್ಲಾಕ್ ಪಂಚಾಯಿತಿಯಲ್ಲಿ 0.09 ಹೆಕ್ಟೇರ್ ಪ್ರದೇಶದಲ್ಲಿಯೂ ಬೆಳೆ ಹಾನಿಯಾಗಿದೆ. ಕಾಞಂಗಾಡು ಬ್ಲಾಕ್ ಪಂಚಾಯಿತಿಯ 87 ರೈತರು, ಕಾರಡ್ಕ ಬ್ಲಾಕ್ ನ 56 ರೈತರು, ಕಾಸರಗೋಡು ಬ್ಲಾಕ್ ನ 32 ರೈತರು, ಮಂಜೇಶ್ವರಂ ಬ್ಲಾಕ್ ನ 115 ರೈತರು, ನೀಲೇಶ್ವರಂ ಬ್ಲಾಕ್‍ನ 83 ರೈತರು ಮತ್ತು ಪರಪ್ಪ ಬ್ಲಾಕ್ ನ 25 ರೈತರು ಬೆಳೆ ಹಾನಿ ಅನುಭವಿಸಿದ್ದಾರೆ.





