ಇಡುಕ್ಕಿ :ಗಣ್ಯ ವ್ಯಕ್ತಿಗಳ ಆಗಮನ-ನಿರ್ಗಮನ ಇಲ್ಲವೇ ಅಪಘಾತ, ಪ್ರಕೃತಿವಿಕೋಪದ ಪರಿಣಾಮವಾಗಿ ರಸ್ತೆ ಬಂದ್ ಆಗುವುದು, ಸಂಚಾರ ಸ್ಥಗಿತಗೊಳ್ಳುವುದು ಸರ್ವೇಸಾಮಾನ್ಯ. ಆದರೆ ಇಲ್ಲೊಂದು ಕಡೆ ಒಂದು ವಿಶೇಷ ಕಾರಣಕ್ಕಾಗಿ ರಸ್ತೆ ಬಂದ್ ಆಗಿತ್ತು. ಆ ಕಾರಣ ಮತ್ತೇನೂ ಅಲ್ಲ, ಗಜಪ್ರಸವ.
0
samarasasudhi
ಜುಲೈ 07, 2022
ಇಡುಕ್ಕಿ :ಗಣ್ಯ ವ್ಯಕ್ತಿಗಳ ಆಗಮನ-ನಿರ್ಗಮನ ಇಲ್ಲವೇ ಅಪಘಾತ, ಪ್ರಕೃತಿವಿಕೋಪದ ಪರಿಣಾಮವಾಗಿ ರಸ್ತೆ ಬಂದ್ ಆಗುವುದು, ಸಂಚಾರ ಸ್ಥಗಿತಗೊಳ್ಳುವುದು ಸರ್ವೇಸಾಮಾನ್ಯ. ಆದರೆ ಇಲ್ಲೊಂದು ಕಡೆ ಒಂದು ವಿಶೇಷ ಕಾರಣಕ್ಕಾಗಿ ರಸ್ತೆ ಬಂದ್ ಆಗಿತ್ತು. ಆ ಕಾರಣ ಮತ್ತೇನೂ ಅಲ್ಲ, ಗಜಪ್ರಸವ.
ಹೌದು.. ಆನೆಯೊಂದರ ಹೆರಿಗೆಯ ಕಾರಣಕ್ಕಾಗಿ ಎರಡು ರಾಜ್ಯಗಳ ನಡುವಿನ ಮಾರ್ಗದಲ್ಲಿ ಸುಮಾರು ಒಂದು ಗಂಟೆ ಕಾಲ ರಸ್ತೆ ಬಂದ್ ಮಾಡಿ ಸಂಚಾರಕ್ಕೆ ನಿರ್ಬಂಧ ಹೇರಲಾಗಿತ್ತು. ತಮಿಳುನಾಡು ಮತ್ತು ಕೇರಳವನ್ನು ಸಂಪರ್ಕಿಸವು ಮಾರ್ಗದಲ್ಲಿ ಇಡುಕ್ಕಿ ಜಿಲ್ಲೆಯ ಮರಯೂರ್ ಪ್ರದೇಶದಲ್ಲಿ ಈ ಗಜಪ್ರಸವ ಸಂಭವಿಸಿದೆ.
ಈ ಪ್ರದೇಶದಲ್ಲಿ ಆನೆಯೊಂದು ರಸ್ತೆ ಮಧ್ಯೆಯೇ ಹೆರಿಗೆಗೆ ಒಳಗಾದ್ದರಿಂದ ರಸ್ತೆಯ ಎರಡೂ ಕಡೆ ಇಂದು ಬೆಳಗ್ಗೆ ಸುಮಾರು ಒಂದು ಗಂಟೆ ಸಂಚಾರಕ್ಕೆ ನಿರ್ಬಂಧ ಹೇರಲಾಗಿತ್ತು. ಹೆರಿಗೆಯ ಬಳಿಕ ಆನೆ ಮರಿಯೊಂದಿಗೆ ಕಾಡನ್ನು ಪ್ರವೇಶಿಸಿದ ನಂತರವೇ ರಸ್ತೆಯಲ್ಲಿ ಸಂಚಾರಕ್ಕೆ ಅನುವು ಮಾಡಿಕೊಡಲಾಯಿತು ಎಂದು ಅರಣ್ಯಾಧಿಕಾರಿಗಳು ತಿಳಿಸಿದ್ದಾರೆ.