ತಿರುವನಂತಪುರ: ಭಾರತೀಯ ನಿರ್ಮಿತ ವಿದೇಶಿ ಮದ್ಯದ ಬೆಲೆಯನ್ನು ಹೆಚ್ಚಿಸಬೇಕಾಗುತ್ತದೆ ಎಂದು ಅಬಕಾರಿ ಇಲಾಖೆ ಸಚಿವ ಎಂ.ವಿ.ಗೋವಿಂದನ್ ಹೇಳಿದ್ದಾರೆ. ಸ್ಪಿರಿಟ್ ಬೆಲೆ ಗಣನೀಯವಾಗಿ ಏರಿಕೆಯಾಗಿದೆ. ಬೆಪ್ಕೋ ತನ್ನದೇ ಆದ ಬ್ರಾಂಡ್‍ಗಳನ್ನು ಪ್ರಾರಂಭಿಸಿದಾಗ ಪ್ರತಿ ಬಾಟಲಿಗೆ 4 ರೂ.ವರೆಗೆ ನಷ್ಟಗಳುಂಟಾಗುತ್ತಿದೆ. ಇದನ್ನು ಪರಿಗಣಿಸಿ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ವಿಧಾನ ಸಭೆಯಲ್ಲಿ ನಿಧಿ ಮನವಿ ಚರ್ಚೆ ವೇಳೆ ಶಾಸಕ ರಮೇಶ್ ಚೆನ್ನಿತ್ತಲ ಅವರ ಪ್ರಶ್ನೆಗೆ ಸಚಿವರು ಉತ್ತರಿಸಿದರು. ಭಾರತೀಯ ನಿರ್ಮಿತ ವಿದೇಶಿ ಮದ್ಯದ ಬೆಲೆಯನ್ನು ಹೆಚ್ಚಿಸುವುದು ಉತ್ಪಾದನಾ ಕಂಪನಿಗಳಿಗೆ ಸಹಾಯ ಮಾಡುವುದಕ್ಕಾಗಿ ಎಂಬ ಆರೋಪವನ್ನು ಚೆನ್ನಿತ್ತಲ ಅವರ ಪ್ರಶ್ನೆ ಎತ್ತಿ ತೋರಿಸಿದೆ. ಈ ವೇಳೆ, ಸಚಿವ ಎಂ.ವಿ.ಗೋವಿಂದನ್ ಮಾತನಾಡಿ, ಎಲ್ ಡಿಎಫ್ ಸರ್ಕಾರದಲ್ಲಿ ಅಬಕಾರಿ ಇಲಾಖೆ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ. ಸಮಾಜದಲ್ಲಿ ಹರಡುತ್ತಿರುವ ಮಾದಕ ದ್ರವ್ಯ ಮತ್ತು ನಕಲಿ ಮದ್ಯದ ವಿರುದ್ಧ ಸರ್ಕಾರವು ಕಠಿಣ ಕ್ರಮಗಳನ್ನು ತೆಗೆದುಕೊಳ್ಳಲು ಸಮರ್ಥವಾಗಿದೆ ಎಂದು ಅವರು ತಿಳಿಸಿದರು.
ಸರ್ಕಾರ ಅಧಿಕಾರಕ್ಕೆ ಬಂದ ನಂತರ 19,221 ಅಬ್ಕಾರಿ ಪ್ರಕರಣಗಳು ಮತ್ತು 4,147 ಎನ್‍ಟಿಪಿಸಿ ಪ್ರಕರಣಗಳನ್ನು ದಾಖಲಿಸಿದೆ. ಈ ಸರ್ಕಾರ ಸ್ಪಷ್ಟ ಮದ್ಯ ನೀತಿಯನ್ನು ಪ್ರಕಟಿಸಿದೆ. ಕಡಿಮೆ ಮದ್ಯದ ಅಂಗಡಿಗಳನ್ನು ಹೊಂದಿರುವ ಯುಡಿಎಫ್ ಆಡಳಿತಕ್ಕೆ ಹೋಲಿಸಿದರೆ ಎಲ್ಡಿಎಫ್ ಆಡಳಿತದಲ್ಲಿ ಮದ್ಯದ ಬಳಕೆ ಕಡಿಮೆಯಾಗಿದೆ. 2011-16ರಲ್ಲಿ ಬೆವ್ಕೋ 1149.11 ಲಕ್ಷ ಪೆಟ್ಟಿಗೆ(ಕೇಸ್) ವಿದೇಶಿ ಮದ್ಯ ಮಾರಾಟ ಮಾಡಿದ್ದರೆ, 2016-21ರಲ್ಲಿ ಕೇವಲ 1036.6 ಲಕ್ಷ ಕೇಸ್ ಮದ್ಯ ಮಾರಾಟ ಮಾಡಿದೆ. ಮದ್ಯದಂಗಡಿಗಳ ಸಂಖ್ಯೆಯನ್ನು ಹೆಚ್ಚಿಸುವ ಮೂಲಕ, ದಟ್ಟಣೆಯನ್ನು ಕಡಿಮೆ ಮಾಡಬಹುದು. ಸರತಿ ಸಾಲಿನಲ್ಲಿ ನಿಲ್ಲುವ ವ್ಯವಸ್ಥೆ ತೊಲಗಿಸಿ ಪ್ರೀಮಿಯಂ ಮಳಿಗೆಗಳನ್ನಾಗಿ ಪರಿವರ್ತಿಸಲು ನಿರ್ಧರಿಸಲಾಗಿದೆ. ಶೀಘ್ರ ಜಾರಿಗೊಳಿಸಲಾಗುವುದು ಎಂದು ಸಚಿವರು ತಿಳಿಸಿದರು.




.webp)
