HEALTH TIPS

'ಸ್ವಾತಂತ್ರ್ಯ ಚಳವಳಿ ಕೆಲ ಜನರು, ಕೆಲ ಪ್ರದೇಶಗಳಿಗೆ ಸೀಮಿತವಲ್ಲ': ನರೇಂದ್ರ ಮೋದಿ

             ಹೈದರಾಬಾದ್: 'ದೇಶದ ಸ್ವಾತಂತ್ರ್ಯಹೋರಾಟವು ಕೆಲ ವರ್ಷಗಳು, ಕೆಲ ಪ್ರದೇಶಗಳು, ಕೆಲ ಜನರ ಇತಿಹಾಸವಲ್ಲ. ಸ್ವಾತಂತ್ರ್ಯ ಚಳವಳಿ ದೇಶದ ಎಲ್ಲ ಮೂಲೆಗಳಲ್ಲಿ ನಡೆದಿದ್ದು, ಎಲ್ಲರ ತ್ಯಾಗವು ಇದೆ' ಎಂದು ಪ್ರಧಾನಿ ನರೇಂದ್ರ ಮೋದಿ ಸೋಮವಾರ ಪ್ರತಿಪಾದಿಸಿದರು.

         'ಸ್ವಾತಂತ್ರ್ಯ ಚಳವಳಿ ಎಂಬುದು ದೇಶದ ವೈವಿಧ್ಯ, ಸಂಸ್ಕೃತಿ ಮತ್ತು ಏಕತೆಯ ಪ್ರತೀಕವಾಗಿದೆ. ತೆಲುಗು ಜನರ ಬಹುಎತ್ತರದ ನಾಯಕ ಅಲ್ಲೂರಿ (1897-1924) ಅವರು ಇಂತಹ ಸಂಸ್ಕೃತಿ, ಏಕತೆಯನ್ನು ಸಮರ್ಥವಾಗಿ ಪ್ರತಿಬಿಂಬಿಸುತ್ತಿದ್ದರು' ಎಂದೂ ಮೋದಿ ಹೇಳಿದರು.

               ಆಂಧ್ರದ ಭೀಮಾವರಂ ಭಾಗದ ಕ್ರಾಂತಿಕಾರಿ ಸ್ವಾತಂತ್ರ್ಯ ಹೋರಾಟಗಾರರಾಗಿದ್ದ ಅಲ್ಲೂರಿ ಅವರ 30 ಅಡಿ ಎತ್ತರದ ಕಂಚಿನ ಪ್ರತಿಮೆಯನ್ನು, ಅವರ 125ನೇ ಜನ್ಮದಿನೋತ್ಸವದ ಸಂದರ್ಭದಲ್ಲಿ ಅನಾವರಣ ಮಾಡಿ ಮೋದಿ ಮಾತನಾಡಿದರು.

              125ನೇ ಜನ್ಮದಿನೋತ್ಸವವೂ ಕಾಕತಾಳೀಯವೆಂಬಂತೆ ರಂಪಾ ಬಂಡಾಯದ 100ನೇ ವರ್ಷಾಚರಣೆ ಹಾಗೂ ಸ್ವಾತಂತ್ರ್ಯದ 75ನೇ ವರ್ಷಾಚರಣೆಯ ಸಂದರ್ಭದಲ್ಲಿಯೇ ಬಂದಿದೆ. ಅಲ್ಲೂರಿ ಅವರು ದೇಶದ ಸಂಸ್ಕೃತಿ, ಬುಡಕಟ್ಟು ಜನರು, ಚಿಂತನೆ, ಮೌಲ್ಯಗಳ ದ್ಯೋತಕ. ಹುಟ್ಟಿನಿಂದ ಅಂತಿಮ ತ್ಯಾಗದವರೆಗೂ ಅವರ ಜೀವನ ಹೋರಾಟವು ಹಲವರಿಗೆ ಪ್ರೇರಣಾದಾಯಕವಾಗಿದೆ ಎಂದು ಹೇಳಿದರು.

              ಸ್ವಾತಂತ್ರ್ಯದ ನಂತರ ದೇಶದಲ್ಲಿ ಇದೇ ಮೊದಲ ಬಾರಿಗೆ ಬುಡಕಟ್ಟು ಜನರ ಹೆಮ್ಮೆ ಮತ್ತು ಪರಂಪರೆಗೆ ಕನ್ನಡಿ ಹಿಡಿಯಲು ಬುಡಕಟ್ಟು ಸಂಗ್ರಹಾಲಯವನ್ನು ಆಂಧ್ರದ ಲಂಬಸಿಂಗಿಯಲ್ಲಿ ಸ್ಥಾಪಿಸಲಾಗುತ್ತಿದೆ ಎಂದು ತಿಳಿಸಿದರು.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries