ಕಾಸರಗೋಡು: ಗುರುಪೂರ್ಣಿಮೆ ಅಂಗವಾಗಿ ನಿವೃತ್ತ ಮುಖ್ಯ ಶಿಕ್ಷಕ, ಸಮಾಜಸೇವಕ ಅಣಂಗೂರು ಬಾಲಕೃಷ್ಣ ಮಾಸ್ಟರ್ ಅವರಿಗೆ ಗುರುನಮನ ಕಾರ್ಯಕ್ರಮ ಅಣಂಗೂರಿನ ಅವರ ನಿವಾಸದಲ್ಲಿ ಜರುಗಿತು.
ನುಳ್ಳಿಪ್ಪಾಡಿಯ ಸೀತಮ್ಮ ಪುರುಷ ನಾಯಕ ಸ್ಮಾರಕ ಕನ್ನಡ ಭವನ ಮತ್ತು ಗ್ರಂಥಾಲಯ ವಿಂಶತಿ ಸಮಿತಿ ವತಿಯಿಂದ ಕಾರ್ಯಕ್ರಮ ಆಯೋಜಿಸಲಾಗಿತ್ತು.ರಾಜ್ಯ ಪ್ರಶಸ್ತಿ ವಿಜೇತ ಶಿಕ್ಷಕಿ, ಸಮಾಜಸೇವಕಿ ಸವಿತಾ ಟೀಷರ್ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ರಾಜ್ಯ ಪ್ರಶಸ್ತಿ ವಿಜೇತ ಶಿಕ್ಷಕ ಸತೀಶ್ ಕೂಡ್ಲು, ಲೇಖಕ, ಪತ್ರಕರ್ತ ರವಿ ನಾಯ್ಕಾಪು, ಉದ್ಯಮ ರಾಮರಾಯ ಮಲ್ಯ, ರಾಧಾಕೃಷ್ಣ ಅಣಂಗೂರು, ಕಮಲಾಕ್ಷ ಕಲ್ಲಗದ್ದೆ, ಕನ್ನಡ ಭವನ ಸಂಸ್ಥಾಪಕ ವಾಮನ ರಾವ್ ಬೇಕಲ್, ಕಮಲಾಕ್ಷ ಅಣಂಗೂರು, ಸಂಗೀತ ಶಿಕ್ಷಕ ಸದಾಶಿವ ಆಚಾರ್ ಕಲ್ಮಡಿ, ಪತ್ರಕರ್ತ ರಾಧಾಕೃಷ್ಣ ಉಳಿಯತ್ತಡ್ಕ, ಕನ್ನಡ ಭವನ ಕೋಶಾಧಿಕಾರಿ ಸಂಧ್ಯಾರಾಣಿ ಟೀಚರ್, ಜಗದೀಶ್ ಕೂಡ್ಲು, ವಸಂತ ಕೆರೆಮನೆ ಉಪಸ್ಥಿತರಿದ್ದರು.





