ಉಪ್ಪಳ: ಕೊಂಡೆವೂರು ಶ್ರೀನಿತ್ಯಾನಂದ ಯೋಗಾಶ್ರಮದ ಶ್ರೀ ಯೋಗಾನಂದ ಸರಸ್ವತೀ ಸ್ವಾಮೀಜಿಯವರು ತಮ್ಮ 18ನೇಚಾತುರ್ಮಾಸ್ಯವನ್ನು ಬುಧವಾರ ಕೊಂಡೆವೂರು ಮಠದಲ್ಲಿ ಆರಂಭಿಸಿದರು. ವ್ಯಾಸಪೂರ್ಣಿಮೆಯ ಪವಿತ್ರದಿನದಂದು ಬೆಳಿಗ್ಗೆ ಗಣಹೋಮ, ಭಗವಾನ್ ಶ್ರೀ ನಿತ್ಯಾನಂದ ಗುರುದೇವರಿಗೆ ಸೀಯಾಳಾಭಿಷೇಕ, ವ್ಯಾಸಹವನ ಕಾರ್ಯಕ್ರಮ ನೆರವೇರಿತು. ನಂತರ ಭಜನಾಕಾರ್ಯಕ್ರಮ ನಡೆಯಿತು. ಸಂಜೆ ಶ್ರೀ ಗುರು ಪಾದುಕಾ ಪೂಜೆಮತ್ತು ಶ್ರೀಗಳವರಿಂದ ಸತ್ಸಂಗ ನಡೆಯಿತು. ಸೆ. 10ರ ವರೆಗೆ ನಡೆಯುವ ಚಾತುರ್ಮಾಸ್ಯ ಸಂದರ್ಭದಲ್ಲಿ ಪ್ರತೀ ವಾರ ವಿವಿಧ ವಿದ್ವಾಂಸರುಗಳಿಂದ ಪ್ರವಚನ, ವಿವಿಧ ಭಜನಾತಂಡಗಳಿಂದ ಭಜನಾ ಸೇವೆ ನಡೆಯಲಿರುವುದು.





