ತಿರುವನಂತಪುರ: ಕಾಲೇಜುಗಳನ್ನು ಡ್ರಗ್ಸ್ ಜಾಲ ಮತ್ತು ಶಸ್ತ್ರಾಗಾರವನ್ನಾಗಿ ಮಾಡುವವರ ವಿರುದ್ಧ ಆಂದೋಲನ ನಡೆಸಲು ಎಬಿವಿಪಿ ಮುಂದಾಗಿದೆ. ಎಬಿವಿಪಿ ರಾಜ್ಯ ಜಂಟಿ ಕಾರ್ಯದರ್ಶಿ ಎಂ.ಮನೋಜ್ ಪ್ರಕಟಣೆಯಲ್ಲಿ ಮಾತನಾಡಿ, ರಾಜಧಾನಿಯಲ್ಲಿ ಶಾಂತಿಯುತ ವಾತಾವರಣಕ್ಕೆ ಭಂಗ ತರುವ ನಿಟ್ಟಿನಲ್ಲಿ ಎಸ್ ಎಫ್ ಐ ಡ್ರಗ್ಸ್ ಮಾಫಿಯಾ ಚಟುವಟಿಕೆಗಳು ಆಕ್ಷೇಪಾರ್ಹವಾಗಿವೆ ಎಂದಿರುವರು.
ಕೇರಳದ ಕಾಲೇಜುಗಳಲ್ಲಿ ಎಸ್‍ಎಫ್‍ಐ ನೇತೃತ್ವದಲ್ಲಿ ನಡೆಯುತ್ತಿರುವ ಶಸ್ತ್ರಾಸ್ತ್ರ ತಯಾರಿಕೆಯ ದೃಶ್ಯಾವಳಿಗಳನ್ನು ಕೇರಳದ ಜನತೆ ಸುದ್ದಿ ಮಾಧ್ಯಮಗಳ ಮೂಲಕ ನೋಡಿದ್ದಾರೆ. ರಾಜಧಾನಿಯಲ್ಲಿ ಶಾಂತಿಯುತ ವಾತಾವರಣಕ್ಕೆ ಭಂಗ ತರುವುದು ಎಸ್‍ಎಫ್‍ಐ ಡ್ರಗ್ಸ್ ಮಾಫಿಯಾದ ಉದ್ದೇಶವಾಗಿದೆ. ಹಲವು ಶಿಕ್ಷಣ ಸಂಸ್ಥೆಗಳು ಇರುವ ತಿರುವನಂತಪುರ ಜಿಲ್ಲೆಯ ಧನುವಾಚಪುರಂನಲ್ಲಿ ಎಸ್‍ಎಫ್‍ಐ ತಂಡ ಕೆಲಕಾಲ ಎಬಿವಿಪಿ ಕಾರ್ಯಕರ್ತರ ಮೇಲೆ ಹಿಂಸಾಚಾರ ನಡೆಸಿತ್ತು. ಘಟನೆಯಲ್ಲಿ ಪಾನಮತ್ತರಾಗಿದ್ದ ಎಸ್‍ಎಫ್‍ಐ ಕ್ರಿಮಿನಲ್ ಗಳನ್ನು ಪೋಲೀಸರು ಬಂಧಿಸಿದ್ದರು. ಇದಾದ ಬಳಿಕ ಐಟಿಐನಲ್ಲಿ ಎಸ್‍ಎಫ್‍ಐ ನೇತೃತ್ವದಲ್ಲಿ ಶಸ್ತ್ರಾಸ್ತ್ರ ತಯಾರಿಕೆಯ ದೃಶ್ಯಾವಳಿಗಳು ಬಹಿರಂಗಗೊಂಡಿತು.
ಜಿಲ್ಲೆಯಲ್ಲಿ ಉಗ್ರಗಾಮಿ ಗುಂಪುಗಳಿಗೆ ಶಸ್ತ್ರಾಸ್ತ್ರಗಳನ್ನು ತಯಾರಿಸಲು ಎಸ್‍ಎಫ್‍ಐ ನಾಯಕತ್ವವು ಐಟಿಐ ವಿದ್ಯಾರ್ಥಿಗಳನ್ನು ಕೂಲಿ ಬಳಸಿಕೊಳ್ಳುತ್ತಿದೆ. ಘಟನೆಯನ್ನು ನೇರವಾಗಿ ಬಲ್ಲ ಶಿಕ್ಷಕರೂ ಇದಕ್ಕೆ ಸಹಕರಿಸಿದ್ದಾರೆ. ಇದರ ವಿರುದ್ಧ ಎಬಿವಿಪಿ ದೂರು ದಾಖಲಿಸಿತ್ತು. ಐಟಿಐನಲ್ಲಿ ಶಸ್ತ್ರಾಸ್ತ್ರ ತಯಾರಿಕಾ ಪ್ರದೇಶಗಳನ್ನು ಪರಿಶೀಲಿಸಲು ಪೆÇಲೀಸರು ಸಿದ್ಧರಾಗಿರಬೇಕು. ಆಯುಧ ತಯಾರಿಸಿದವರು ಹಾಗೂ ಸಂಚು ರೂಪಿಸಿದ ಶಿಕ್ಷಕರ ವಿರುದ್ಧವೂ ಕ್ರಮ ಕೈಗೊಳ್ಳಬೇಕು ಎಂದು ಎಂ ಮನೋಜ್ ಹೇಳಿಕೆ ನೀಡಿದ್ದಾರೆ.





