ಬದಿಯಡ್ಕ: ದೇಶಿಯ ಅಧ್ಯಾಪಕ ಪರಿಷತ್ತು ಕುಂಬಳೆ ಉಪಜಿಲ್ಲಾ ಘಟಕದ ಕಾರ್ಯಕಾರಿ ಸಮಿತಿಯ ಸಭೆ ಬದಿಯಡ್ಕ ಗಣೇಶ ಮಂದಿರದಲ್ಲಿ ಜರಗಿತು. ಜಿಲ್ಲಾ ಅಧ್ಯಕ್ಷ ರಂಜಿತ್ ಮಾಸ್ತರ್ ಅಧ್ಯಕ್ಷತೆ ವಹಿಸಿದ್ದರು. ಸಭೆಯಲ್ಲಿ ಕಾಸರಗೋಡಿನ ಜಿಲ್ಲಾ ವಿದ್ಯಾಧಿಕಾರಿಗಳಾಗಿ ಕನ್ನಡೇತರರನ್ನು ನೇಮಿಸಿರುವ ಸರ್ಕಾರದ ನಿಲುವನ್ನು ತೀವ್ರವಾಗಿ ಖಂಡಿಸಲಾಯಿತು. ಜುಲೈ 2ರಂದು ದೇಶಿಯ ಅಧ್ಯಾಪಕ ಪರಿಷತ್ತಿನ ವತಿಯಿಂದ ನಡೆಯುವ ಧರಣಿ ಮುಷ್ಕರದಲ್ಲಿ ಈ ವಿಷಯವನ್ನು ಪ್ರಸ್ತಾಪಿಸಲು ತೀರ್ಮಾನಿಸಲಾಯಿತು. ಜೊತೆಗೆ ಎಲ್‍ಪಿ ಮತ್ತು ಯುಪಿ ವಿಭಾಗದ ಅಧ್ಯಾಪಕರ ನೇಮಕಕ್ಕೆ ಸುತ್ತೋಲೆಯನ್ನು ಹೊರಡಿಸಲು ಕೇರಳ ಲೋಕ ಸೇವಾ ಆಯೋಗವನ್ನು ಒತ್ತಾಯಿಸಲಾಯಿತು. ಸದಸ್ಯತನ ಅಭಿಯಾನವನ್ನು ಮುಂದಿನ ತಿಂಗಳಿನಿಂದ ಪ್ರಾರಂಭಿಸಲು ಸಭೆಯಲ್ಲಿ ತೀರ್ಮಾನಿಸಲಾಯಿತು. ಮಹಾಬಲ ಭಟ್, ಕವಿತಾ ಟೀಚರ್, ವಿದ್ಯಾ ಟೀಚರ್, ಪುಷ್ಪ ಟೀಚರ್, ರಾಜೇಶ್ ಉಬ್ರಂಗಳ ಉಪಸ್ಥಿತರಿದ್ದರು. ಚಂದ್ರಶೇಖರ್ ಮಾಸ್ತರ್ ಸ್ವಾಗತಿಸಿ, ಉಪ ಜಿಲ್ಲಾ ಕಾರ್ಯದರ್ಶಿ ಪುರುಷೋತ್ತಮ ವಂದಿಸಿದರು.




.jpg)
