ಮಂಜೇಶ್ವರ : ಭಾರತೀಯ ಕಿಸಾನ್ ಸಂಘದ ಮೀಂಜ ಘಟಕದ ಸಭೆ ಮೀಯಪದವಿನಲ್ಲಿ ನಡೆಯಿತು. ಡಾ.ಜಯಪ್ರಕಾಶ ನಾರಾಯಣ ಅಧ್ಯಕ್ಷತೆ ವಹಿಸಿ ಭಾ.ಕಿ.ಸಂನ್ನು ಇನ್ನು ಹೆಚ್ಚು ಬಲಪಡಿಸಬೇಕೆಂದು ಕೃಷಿಕರ ಸಮಸ್ಯೆಗಳಿಗೆ ಸ್ಪಂದಿಸುತ್ತಿರಬೇಕೆಂದು ಕರೆ ನೀಡಿದರು.
ಕೊಂಡೆವೂರಿನಲ್ಲಿ ಜುಲೈ 12ರಂದು ನಡೆಯುವ ಜಿಲ್ಲಾ ಸಮ್ಮೇಳನದ ಅಧ್ಯಕ್ಷ ಸ್ಥಾನ ವಹಿಸಲಿರುವ ವಕೀಲ ಅಶೋಕ್ ಕುಮಾರ್ ಹೊಳ್ಳ ಕೃಷಿಕರಿಗೆ ರಾಜ್ಯ ಹಾಗು ಕೇಂದ್ರದಿಂದ ಸಿಗುವ ಹಲವಾರು ಸವಲತ್ತುಗಳ ಬಗ್ಗೆ ಮಾಹಿತಿ ನೀಡಿದರು. ಮೀಯಪದವು ಶಾಲಾ ವಠಾರದಲ್ಲಿ ಜರಗಿದ ಸಭೆಯಲ್ಲಿ ಕೃಷಿಕರ ಸಮಸ್ಯೆಗಳ ಬಗ್ಗೆ ಗಮನ ಹರಿಸಬೇಕೆಂದು ಕರೆ ನೀಡಿದರು.
ಜಿಲ್ಲಾ ಕಾರ್ಯದರ್ಶಿ ಕೊಮ್ಮಂಡ ಸದಾನದಂದ ಶೆಟ್ಟಿ ಪ್ರಸ್ತಾವಿಕವಾಗಿ ಮಾತನಾಡಿ ಸಂಘದ ಕಾರ್ಯ ಚಟುವಟಿಕೆಗಳ ಬಗ್ಗೆ ವಿವರಿಸಿದರು. ಸಂಘಟನೆ ದೇಶ ಭಕ್ತಿಯೊಂದಿಗೆ ಸಮಾಜ ಸೇವೆಯಲ್ಲು ತೊಡಗಿಸಿಕೊಂಡಿದೆ ಎಂದರು. ರಾಜ್ಯ ಉಪಾಧ್ಯಕ್ಷ ರಾಮ ಮಾಸ್ತರ್ ಕಳತ್ತೂರು ಭಾ.ಕಿ.ಸಂ ಸ್ವದೇಶಿ ಚಿಂತನೆಯೊಂದಿಗೆ ಕೃಷಿಯಲ್ಲಿ ಸಾವಯಯ ಪದ್ಧತಿ ಅತೀ ಅಗತ್ಯ, ದೇಶಿ ತಳಿ ಗೋವುಗಳು ಕೃಷಿಕರ ಬೆನ್ನೆಲುಬಾಗಿದೆ. ಭಾರತೀಯರು ಸಾವಿರಾರು ವರ್ಷಗಳಿಂದ ಗೋವನ್ನು ಸಾಕಿ ಕೃಷಿಯಲ್ಲಿ ಸಾಂಪ್ರದಾಯಿಕ ರೀತಿಯಲ್ಲಿ ತೊಡಗಿಸಿಕೊಂಡು ಬರುತ್ತಿದ್ದಾರೆ. ಮಣ್ಣಿನ ಸಮತೋಲನವನ್ನು ಕಾಪಾಡಲು ಕೃಷಿಕರು ಶ್ರಮಿಸಬೇಕೆಂದರು.
ಜಗನ್ನಾಥ ಮಾಸ್ತರ್ ಬಲರಾಮ ಸ್ತುತಿಯೊಂದಿಗೆ ವಂದಿಸಿದರು. ಕಾರ್ಯದರ್ಶಿ ದೇರಂಬಳ ಸತೀಶ್ಚಂದ್ರ ರೈ ನಿರೂಪಿಸಿದರು. ಸಂಘದ ಅಧ್ಯಕ್ಷರಾಗಿ ದಿವಾಕರ ರೈ ಮುನ್ನಿಪ್ಪಾಡಿ, ಉಪಾಧ್ಯಕ್ಷರಾಗಿ ದಿನಕರ ಭಟ್ ಕೋಡಿ, ಬಾಲಕೃಷ್ಣ ಕೋಡಿ, ಉಪಕಾರ್ಯದರ್ಶಿಯಾಗಿ ಕೇಶವ ಪ್ರಕಾಶ ಭಟ್, ಸದಸ್ಯರಾಗಿ ನಿಶಾನ್ ರೈ, ತುಳಸೀದಾಸ್, ಹರೀಶ್ ದೇರಂಬಳ,Àಕೃಷ್ಣ ಪೂಜಾರಿ ಬೆಜ್ಜ, ಸಂದೀಪ್ ಕೊಡ್ಡೆ, ಅಶೋಕ್ ಶೆಟ್ಟಿ ದಡ್ಡಂಗಡಿ, ರವೀಂದ್ರ ಶೆಟ್ಟಿ ತಲೇಕಳ ಅವರನ್ನು ನೂತನ ಸಮಿತಿಗೆ ಆರಿಸಲಾಯಿತು. ಬ್ಲಾಕ್ ಪಂಚಾಯತಿ ಸದಸ್ಯ ರಾಧಾಕೃಷ್ಣ ಭಟ್ ಕೆ.ವಿ, ವಿನೋೀದ್ ಕುಮಾರ್ ಕೊಜಪೆ, ರಾಜ್ಯ ಕಾರ್ಯಕಾರಿಣಿ ಸದಸ್ಯ ಜಗದೀಶ್ ಕಲ್ಲಗದ್ದೆ ಉಪಸ್ಥಿತರಿದ್ದರು.




