ಕುಂಬಳೆ: ಕಾವುಗೋಳಿ ಸರ್ಕಾರಿ ಎಲ್‍ಪಿ ಶಾಲೆಯಲ್ಲಿ ವಿವಿಧ ಕ್ಲಬ್‍ಗಳ ಉದ್ಘಾಟನೆ ನಡೆಯಿತು. ಮುಖ್ಯೋಪಾಧ್ಯಾಯಿನಿ ಸಿಲ್ವಿಯಾ ಮೊಂತೆರೊ ಅಧ್ಯಕ್ಷತೆ ವಹಿಸಿದ್ದರು. ಕ್ಲಬ್‍ಗಳ ಚಟುವಟಿಕೆಗಳಲ್ಲಿ ಭಾಗವಹಿಸಿ, ಮುಂದೆ ಬರುವ ಮೇಳಗಳಲ್ಲಿ ಉತ್ತಮ ಸಾಧನೆ ಮಾಡಿರಿ ಎಂದು ಶುಭಹಾರೈಸಿದರು.
ಪಿಟಿಸಿಎಂ ಸುಂದರಿ ಕೆ. ಅವರು ಕ್ಲಬ್‍ಗಳ ಔದ್ಯೋಗಿಕ ಉದ್ಘಾಟನೆ ನೆರವೇರಿಸಿದರು. ಗಣಿತ ಕ್ಲಬ್ ಸಂಚಾಲಕಿ ವಿನೀತ ಡಿಸೋಜ, ವಿಜ್ಞಾನ ಕ್ಲಬ್ ಸಂಚಾಲಕಿ ಮೂಸೀನ, ವಿದ್ಯಾರಂಗ ಕಲಾಸಾಹಿತ್ಯ ವೇದಿಕೆ ಕ್ಲಬ್‍ನ ಸಂಚಾಲಕಿ ಶ್ರೀಜ, ವೃತ್ತಿ ಪರಿಚಯ ಮತ್ತು ಇಂಗ್ಲೀಷ್ ಕ್ಲಬ್‍ನ ಸಂಚಾಲಕಿ ಅಮಿತ ಎಂಬಿವರು ಆಯಾ ಕ್ಲಬ್‍ಗಳ ಚಟುವಟಿಕೆಗಳನ್ನು ವಿವರಿಸಿದರು. ವಿಜ್ಞಾನ ಕ್ಲಬ್‍ನ ವತಿಯಿಂದ ಪ್ರಯೋಗ ಮಾಡಿ ತೋರಿಸಲಾಯಿತು. ಬಳಿಕ ಕನ್ನಡ ಮತ್ತು ಮಲೆಯಾಳ ಮಾಧ್ಯಮದ ಶೈಕ್ಷಣಿಕ ಮಾಸ್ಟರ್‍ಪ್ಲಾನ್‍ಗೆ ಮುಖ್ಯೋಪಾಧ್ಯಾಯಿನಿ ಸಿಲ್ವಿಯಾ ಮೊಂತೆರೋ ಚಾಲನೆ ನೀಡಿದರು.




.jpg)
