ಕಾಸರಗೋಡು: ಕಾಸರಗೋಡಿನ ಎಂಡೋಸಲ್ಫಾನ್ ಸಂತ್ರಸ್ತ ಸಜಿತ್ ಗೆ ಇನ್ನು ಸುಲಲಿತವಾಗಿ ಮನೆಯಿಂದ ಹೊರ ತೆರಳಬಹುದಾಗಿದೆ. ಸಜಿತ್‍ಗೆ ಮನೆಗೆ ಹೋಗಲು ಸ್ವಂತ ದಾರಿ ಇಲ್ಲದ ಕಾರಣ ಆತನ ಸಹೋದರಿ ಶೈನಿ ಹೊತ್ತೊಯ್ಯುವ ದೃಶ್ಯಗಳು ಮಾಧ್ಯಮಗಳಲ್ಲಿ ಸುದ್ದಿಯಾಗಿತ್ತು. ಈ ವೇಳೆ ಸುರೇಶಗೋಪಿ ಮಧ್ಯಪ್ರವೇಶಿಸಿ ಸಜಿತ್ ಮನೆಗೆ ತೆರಳುವ ಅಸೌಕರ್ಯ ಮನಗಂಡು ವ್ಯವಸ್ಥೆ ಒದಗಿಸಲು ಮುಂದಾದರು.
ಆಸ್ಪತ್ರೆಗೆ ಹೋಗಲು ಸಜಿತ್ ನನ್ನು ಶೈನಿ ಹೆಗಲ ಮೇಲೆ ಹೊತ್ತುಕೊಂಡು ಹೋಗುತ್ತಿದ್ದಳು. ರಸ್ತೆ ಇಲ್ಲದ ಕಾರಣ ವಾಹನಗಳು ಸಂಚರಿಸಲು ಸಾಧ್ಯವಾಗುತ್ತಿರಲಿಲ್ಲ. ಆಗ ಸುರೇಶ್ ಗೋಪಿ ಈ ವಿಚಾರದಲ್ಲಿ ಮಧ್ಯ ಪ್ರವೇಶಿಸಿದ್ದರು. ರಸ್ತೆ ಸಾಗುವ ಸ್ಥಳವನ್ನು ಸ್ವತಃ ಮೌಲ್ಯ ನೀಡಿ ಖರೀದಿಸಿ ಬಳಿಕ ರಸ್ತೆ ನಿರ್ಮಿಸಲು ವ್ಯವಸ್ಥೆಗೊಳಿಸಿದರು. ರಸ್ತೆಗಾಗಿ ಸಹಾಯ ಮಾಡಿದ ಸುರೇಶ್ ಗೋಪಿ ಅವರಿಗೆ ಧನ್ಯವಾದ ಹೇಳುತ್ತೇನೆ ಎಂದು ಶೈನಿ ಹೇಳಿದ್ದಾರೆ. ವರ್ಷಗಳಿಂದ ರಸ್ತೆಗಾಗಿ ಕಾಯುತ್ತಿದ್ದೆವು. ಸುರೇಶ್ ಗೋಪಿಯವರನ್ನು ತನ್ನವರೆಂದು ಪರಿಗಣಿಸುತ್ತೇನೆ ಎಂದು ಶೈನಿ ಹೇಳಿದ್ದಾರೆ.





