ಬದಿಯಡ್ಕ: ಬದಿಯಡ್ಕ ಶ್ರೀ ಭಾರತೀ ವಿದ್ಯಾಪೀಠದ ರಕ್ಷಕ ಶಿಕ್ಷಕ ಸಂಘದ ನೂತನ ಪದಾಧಿಕಾರಿಗಳನ್ನು ಆರಿಸಲಾಯಿತು. ಶಾಲೆಯಲ್ಲಿ ನಡೆದ ಮಹಾಸಭೆಯಲ್ಲಿ ಗಣೇಶ್ ಪೈ ಬದಿಯಡ್ಕ ಅಧ್ಯಕ್ಷತೆ ವಹಿಸಿದ್ದರು. ಶಾಲಾ ಮುಖ್ಯೋಪಾಧ್ಯಾಯ ಸತ್ಯನಾರಾಯಣ ಶರ್ಮ ಪಂಜಿತ್ತಡ್ಕ ಶೈಕ್ಷಣಿಕ ವರ್ಷದ ವಿವರಗಳನ್ನು ನೀಡಿದರು. ಖಚಾಂಜಿ ರಾಜಗೋಪಾಲ ಚುಳ್ಳಿಕ್ಕಾನ ಲೆಕ್ಕಪತ್ರ ಮಂಡಿಸಿದರು. ನೂತನ ಅಧ್ಯಕ್ಷರಾಗಿ ಅರುಣ್ ಕುಮಾರ್ ಕಂಡೆತ್ತೋಡಿ ಹಾಗೂ ಮಾತೃಸಮಿತಿ ಅಧ್ಯಕ್ಷೆಯಾಗಿ ರೇಶ್ಮಾ ಪಿ. ಕನಕಪ್ಪಾಡಿ ಆಯ್ಕೆಯಾದರು. ಪ್ರತೀ ತರಗತಿಯ ಪಾಲಕರನ್ನೊಳಗೊಂಡ ಕಾರ್ಯಕಾರೀ ಸಮಿತಿಯನ್ನು ರೂಪಿಸಲಾಯಿತು. ಶಾಲಾ ಮುಖ್ಯೋಪಾಧ್ಯಾಯರು ಕಾರ್ಯದರ್ಶಿಯಾಗಿ, ಜೊತೆಕಾರ್ಯದರ್ಶಿಯಾಗಿ ಸುಪ್ರೀತಾ ರೈ ವಳಮಲೆ, ಖಚಾಂಜಿಯಾಗಿ ರಾಜಗೋಪಾಲ ಚುಳ್ಳಿಕ್ಕಾನ ಆಯ್ಕೆಯಾದರು.




.jpg)
