ಮುಳ್ಳೇರಿಯ: ಬೋವಿಕ್ಕಾನದಲ್ಲಿ ಕಾಡುಹಂದಿ ರಸ್ತೆಯಲ್ಲಿ ಅಡ್ಡಾದಿಡ್ಡಿ ಸಂಚರಿಸಿದ ಪರಿಣಾಮ ಚಾಲಕನ ನಿಯಂತ್ರಣ ತಪ್ಪಿದ ಕಾರು ಮಗುಚಿಬಿದ್ದು, ಪ್ರಯಾಣಿಕರು ಗಾಯಗೊಂಡಿದ್ದಾರೆ. ಶುಕ್ರವಾರ ನಸುಕಿಗೆ ಸುಳ್ಯದಿಂದ ಕಾಸರಗೋಡಿಗೆ ಆಗಮಿಸುತ್ತಿದ್ದ ಸಂದರ್ಭ ಬೋವಿಕ್ಕಾನದ ಎಂಟನೇಮೈಲಿಯಲ್ಲಿ ಕಾರಿನ ಎದುರು ದೊಡ್ಡ ಕಾಡುಹಂದಿ ಧಾವಿಸಿಬಂದ ಪರಿಣಾಂ ಅಪಘಾತಕ್ಕೀಡಾಗಿದೆ. ಕಾರಿನಲ್ಲಿದ್ದವರು ಸಣ್ಣಪುಟ್ಟ ಗಾಯಗಳೊಂದಿಗೆ ಪಾರಾಗಿದ್ದು, ಇವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದರು.





