ಕಾಸರಗೋಡು: ನ್ಯಾಯಾಲಯಕ್ಕೆ ಹಾಜರುಪಡಿಸಲು ಪೊಲೀಸರು ಕರೆತಂದ ಸಂದರ್ಭ ಪರಾರಿಯಾಗಿದ್ದ ವಿಚಾರಣಾಧೀನ ಕೈದಿ ಕಾಸರಗೋಡು ಅಣಂಗೂರು ಟಿ.ವಿ ಸ್ಟೇಶನ್ ರಸ್ತೆ ನಿವಾಸಿ ಅಹಮ್ಮದ್ ಕಬೀರ್(26)ನನ್ನು ಪೊಲೀಸರು ಮತ್ತೆ ಬಂಧಿಸಿದ್ದಾರೆ. ಎಡನೀರಿನ ಸಂಬಂಧಿಕರ ಮನೆಯಲ್ಲಿದ್ದ ಈತನನ್ನು ವಿದ್ಯಾನಗರ ಠಾಣೆ ಪೊಲೀಸರು ಕಾರ್ಯಾಚರಣೆ ನಡೆಸಿ ಬಂಧಿಸಿದ್ದಾರೆ.ಈತನನ್ನು ಮಾರಕ ಮಾದಕದ್ರವ್ಯಗಳಾದ ಎಂಡಿಎಂಎ ಹಾಗೂ ಗಾಂಜಾ ಸಾಗಾಟದ ಮಧ್ಯೆ ಅಣಂಗೂರಿನಿಂದ ಇತ್ತೀಚೆಗೆ ಬಂಧಿಸಿ, ಕಣ್ಣೂರಿನ ಕೇಂದ್ರ ಕಾರಾಗೃಹದಲ್ಲಿರಿಸಿದ್ದರು. ಈ ಮಧ್ಯೆ ಅಬಕಾರಿ ಪ್ರಕರಣವೊಂದಕ್ಕೆ ಸಂಬಂಧಿಸಿ ಬುಧವಾರ ಕಾಸರಗೋಡಿನ ಜಿಲ್ಲಾ ನ್ಯಾಯಾಲಯಕ್ಕೆ ಹಾಜರುಪಡಿಸಿದ ನಂತರ ಊಟಮಾಡಿ ಕೈತೊಳೆಯುವ ನೆಪದಲ್ಲಿ ತೆರಳಿದವ ತನ್ನ ಸಹಚರನೊಬ್ಬನ ಸಕೂಟರ್ ಮೂಲಕ ಪರಾರಿಯಾಗಿದ್ದನು.





