HEALTH TIPS

ಬಸ್ ನಿಲ್ದಾಣದಲ್ಲಿ ಜೊತೆಗೆ ಕುಳಿತ ಹುಡಿಗಿಯರು ಮತ್ತು ಹುಡುಗರು: ವಿದ್ಯಾರ್ಥಿಗಳನ್ನು ಅಮಾನುಷವಾಗಿ ಥಳಿಸಿದ ಸ್ಥಳೀಯರು: ಬಾಲಕಿಯರ ಮೇಲೆ ದೌರ್ಜನ್ಯ: ನೈತಿಕ ಪೋಲೀಸ್ ಗಿರಿ ಎಂದು ಆರೋಪ

    

       ಪಾಲಕ್ಕಾಡ್: ವಿದ್ಯಾರ್ಥಿಗಳ ಮೇಲೆ ನೈತಿಕ ಪೋಲೀಸ್ ಗಿರಿ ನಡೆಸಿ ಹಲ್ಲೆ ಮಾಡಿರುವ ಬಗ್ಗೆ ದೂರಲಾಗಿದೆ.  ಹುಡುಗರು ಮತ್ತು ಹುಡುಗಿಯರು ಜೊತೆಗೆ  ಕುಳಿತಿದ್ದಾರೆ ಎಂಬ ಆರೋಪದ ಮೇಲೆ ಬಸ್ ನಿಲ್ದಾಣದಲ್ಲಿ ವಿದ್ಯಾರ್ಥಿಗಳನ್ನು ಅಮಾನುಷವಾಗಿ ಥಳಿಸಲಾಗಿದೆ ಎಂದು ವರದಿಯಾಗಿದೆ. ಪಾಲಕ್ಕಾಡ್‍ನ ಮನ್ನಾರ್ಕಾಡ್ ಬಳಿ ಕರಿಂಬಾ ಶಾಲೆಯ ಮಕ್ಕಳಿಗೆ ಥಳಿಸಲಾಗಿದೆ.

       ಕರಿಂಬಾ ಎಚ್‍ಎಸ್‍ಎಸ್ ಪ್ರೌಢಶಾಲೆಯ ವಿದ್ಯಾರ್ಥಿಗಳು ಶಾಲೆಯ ಸಮೀಪದ ಬಸ್ ನಿಲ್ದಾಣದಲ್ಲಿ ಕುಳಿತಿದ್ದರು. ಹುಡುಗಿಯರು ಮತ್ತು ಹುಡುಗರು ಒಟ್ಟಿಗೆ ಕುಳಿತಿದ್ದರು. ಇದನ್ನು ಸ್ಥಳೀಯ ಕೆಲವರು ಬಂದು ಪ್ರಶ್ನಿಸಿದರು. ಕೆಲ ವಿದ್ಯಾರ್ಥಿಗಳು ಪ್ರತಿದಾಳಿ ನಡೆಸಿ ಅವರನ್ನು ಪ್ರಶ್ನಿಸಿದ್ದು, ಥಳಿಸಿದ್ದಾರೆ. ಬಾಲಕರನ್ನು ಅಮಾನುಷವಾಗಿ ಥಳಿಸಲಾಗಿದೆ ಎಂದು ವರದಿಯಾಗಿದೆ. ಜೊತೆಗಿದ್ದ ಬಾಲಕಿಯರ ಮೇಲೂ ದುಷ್ಕರ್ಮಿಗಳು ದೌರ್ಜನ್ಯ ನಡೆಸಿದ್ದಾರೆ. ಶುಕ್ರವಾರ ಸಂಜೆ 4:30ರ ಸುಮಾರಿಗೆ ಈ ಘಟನೆ ನಡೆದಿದೆ.

       ಗಾಯಗೊಂಡ ವಿದ್ಯಾರ್ಥಿಗಳು ಪ್ರಸ್ತುತ ಮನ್ನಾಕ್ರ್ಕಾಡ್ ತಾಲೂಕು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಗಾಯಾಳುಗಳ ಪೋಷಕರು ಪೆÇಲೀಸರಿಗೆ ದೂರು ನೀಡಿದ್ದಾರೆ. ಘಟನೆ ಸಂಬಂಧ ಪೆÇಲೀಸರು ಇನ್ನೂ ಪ್ರಕರಣ ದಾಖಲಿಸಿಕೊಂಡಿಲ್ಲ ಎನ್ನಲಾಗಿದೆ. 



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries